ಸಾರಾ ಅಲಿ ಖಾನ್ ಜೊತೆ ಮುಂದಿನ ಸಿನಿಮಾ ಶೂಟಿಂಗ್ ಮಾಡುತ್ತಿರುವ ವಿಕ್ಕಿ ಕೌಶಲ್ಗೆ ಸಾಥ್ ನೀಡಿದ್ದಾರೆ ಕತ್ರಿನಾ. ಪತಿಯ ಶೂಟಿಂಗ್ ನಡೆಯುವ ಸ್ಥಳಕ್ಕೆ ಕತ್ರಿನಾ ಸಹ ಮುಂಬೈನಿಂದ ಇಂದೋರ್‌ಗೆ ಹೋಗಿದ್ದಾರೆ. ಈ ಮೂಲಕ ವಿಕ್ಕಿಯನ್ನು ಬಿಟ್ಟಿರೋಕಾಗಲ್ಲ ಅಂದಿದ್ದಾರೆ ನಟಿ.
ನಟಿ ಮುಖದಲ್ಲಿ ಖುಷಿಯ ಕಳೆಯನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ನೆಟ್ಟಿಗರು ಕಮೆಂಟ್ ಮಾಡಿ ನಿಮ್ಮ ಮುಖದಲ್ಲಿ ಕಳೆ ಹಾಗೂ ಸಂತಸವನ್ನು ಕಾಣುತ್ತಿದ್ದೇವೆ ಎಂದಿದ್ದಾರೆ. ಇನ್ನೊಬ್ಬರು ಖುಷಿ ಹಾಗೂ ಕ್ಯೂಟ್‌ನೆಸ್‌ನ ಬಂಡಲ್ ಎಂದಿದ್ದಾರೆ. ಇನ್ನೂ ಕೆಲವು ವಿಕ್ಕಿ ಅಭಿಮಾನಿಗಳು ಕಮೆಂಟ್ ಮಾಡಿ ವಿಕ್ಕಿಯನ್ನು ಚೆನ್ನಾಗಿ ನೋಡ್ಕೊಳ್ಳಿ ಎಂದಿದ್ದಾರೆ.
ಓದಿ: 18 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆದ ಧನುಷ್!
ಕತ್ರಿನಾ ಅವರು ವಿಕ್ಕಿಯೊಂದಿಗೆ ಲೋಹ್ರಿಯನ್ನು ಆಚರಿಸುತ್ತಿರುವ ಸಂತೋಷದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಇಬ್ಬರೂ ತಮ್ಮ ಮದುವೆಯ ಒಂದು ತಿಂಗಳ ಸಂಭ್ರಮವನ್ನು ಆಚರಿಸಿದರು. ವಿಕ್ಕಿ ಮತ್ತು ಕತ್ರಿನಾ ಡಿಸೆಂಬರ್‌ನಲ್ಲಿ ಹಸೆ ಮಣೆ ಏರಿದ್ದರು.
- " class="align-text-top noRightClick twitterSection" data="
">
ವಿಕ್ಕಿ ಮತ್ತು ಸಾರಾ ಅಲಿ ಖಾನ್ ತಮ್ಮ ಮುಂದಿನ ಚಿತ್ರೀಕರಣದಲ್ಲಿದ್ದಾರೆ. ಹೆಸರಿಡದ ಈ ಚಿತ್ರಕ್ಕೆ ಮಿಮಿ ಖ್ಯಾತಿಯ ಲಕ್ಷ್ಮಣ್ ಉಟೇಕರ್ ನಿರ್ದೇಶಿಸುತ್ತಿದ್ದಾರೆ. ಇನ್ನು ಕತ್ರಿನಾ ಕೊನೆಯದಾಗಿ ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಚಿತ್ರದಲ್ಲಿ ಕಾಣಿಸಿಕೊಂಡರು. ಈಗಾಗಲೇ ಕತ್ರಿನಾ ನಿರ್ದೇಶಕ ಶ್ರೀರಾಮ್ ರಾಘವನ್ ಅವರ ಹೊಸ ಚಿತ್ರವಾದ ಮೆರ್ರಿ ಕ್ರಿಸ್‌ಮಸ್‌ನಲ್ಲಿ ವಿಜಯ್ ಸೇತುಪತಿ ಜೊತೆ ಕೆಲಸವನ್ನು ಪ್ರಾರಂಭಿಸಿದ್ದಾರೆ.