ಹೈದರಾಬಾದ್: ಬಾಲಿವುಡ್ ನಟ ಸೈಫ್ ಅಲಿ ಖಾನ್ 51ನೇ ವಸಂತಕ್ಕೆ ಕಾಲಿಟ್ಟಿದ್ದು, ಹುಟ್ಟುಹಬ್ಬವನ್ನು ಆಚರಿಸಲು ಕುಟುಂಬ ಸಮೇತ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. ಸೈಫ್ ಪತ್ನಿ ಹಾಗೂ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್, ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಪತಿಗೆ ಸ್ಪೆಷಲ್ ವಿಶ್ ಮಾಡಿದ್ದಾರೆ.
"ನನ್ನ ಜೀವನದ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯಗಳು.. ನಿನ್ನೊಂದಿಗೆ ಶಾಶ್ವತತೆ ಮತ್ತು ಅದಕ್ಕಿಂತಲೂ ಮಿಗಿಲಾಗಿರುವುದು ನನಗೆ ಬೇಕು" ಎಂದು ಕರೀನಾ ಕಪೂರ್ ಎರಡು ಫೋಟೋಗಳನ್ನು ಶೇರ್ ಮಾಡಿ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಒಂದು ಫೋಟೋದಲ್ಲಿ ಕಡಲತೀರದಲ್ಲಿ ಸೈಫ್, ಕರೀನಾ ಹಾಗೂ ಮಕ್ಕಳಾದ ತೈಮೂರ್ ಅಲಿ ಖಾನ್ ಮತ್ತು ಜೆಹ್ ಅಲಿ ಖಾನ್ ಎಲ್ಲರೂ ಜೊತೆಯಿರುವುದು ಕಾಣಬಹುದು. ಇನ್ನೊಂದು ಫೋಟೋದಲ್ಲಿ ಸೈಫ್ ಮತ್ತು ಕರೀನಾ ಕೊಳದಲ್ಲಿ ಏಕಾಂತದಲ್ಲಿದ್ದು, ಅನಂತವನ್ನು ನೋಡುತ್ತಿದ್ದಾರೆ.
ಸದ್ಯ ಸೈಫ್ ಅಲಿ ಖಾನ್, ಹಾರರ್ - ಕಾಮಿಡಿ ಸಿನಿಮಾವಾದ 'ಭೂತ್ ಪೋಲಿಸ್'ನಲ್ಲಿ ಕಾಣಿಸಿಕೊಳ್ಳಲಿದ್ದು, ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕರೀನಾ ನಟಿಸುತ್ತಿದ್ದಾರೆ.