ಹೈದರಾಬಾದ್ : ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರು ತಾಯಂದಿರ ದಿನದ ಪ್ರಯುಕ್ತ ತಮ್ಮ ಕಿರಿಯ ಮಗನ ಮುದ್ದಿನ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಶುಭಾಶಯ ಕೋರಿದ್ದಾರೆ.
- " class="align-text-top noRightClick twitterSection" data="
">
ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಹಿರಿಯ ಮಗ ತೈಮೂರ್ ಅಲಿ ಖಾನ್ ಮಗುವನ್ನು ಅಪ್ಪಿಕೊಂಡಿರುವ ಫೋಟೋವನ್ನು ಹಂಚಿಕೊಂಡಿರುವ ನಟಿ, ವಿಶ್ವ ತಾಯಂದಿರ ದಿನದಂದು ವಿಶೇಷ ಕ್ಯಾಷ್ಶನ್ ಕೊಡುವ ಮೂಲಕ ಅಭಿಮಾನಿಗಳಿಗೆ ಸಂತೋಷವನ್ನು ಹಂಚಿದ್ದಾರೆ.
ಇಂದು ಇಡೀ ಜಗತ್ತು ಭರವಸೆಯ ಮೇಲೆ ನಿಂತಿದೆ. ಈ ಸಮಯದಲ್ಲಿ ನಾಳೆಯ ದಿನಗಳಿಗೆ ಇವರಿಬ್ಬರು ನನಗೆ ಭರವಸೆಯನ್ನು ನೀಡಿದ್ದಾರೆ. ಹೊರಗಿರುವ ಎಲ್ಲ ಸುಂದರ ಹಾಗೂ ಗಟ್ಟಿಗಿತ್ತಿ ತಾಯಂದರಿಗೆ ತಾಯಂದಿರ ದಿನದ ಶುಭಾಶಯ ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ನಟಿ ಕರೀನಾಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಅವರ ಹಿತೈಷಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ ಸೈಫ್, "ನಾವು ಗಂಡು ಮಗುವನ್ನು ಪಡೆದಿದ್ದೇವೆ. ತಾಯಿ ಮತ್ತು ಮಗು ಸುರಕ್ಷಿತವಾಗಿದ್ದು, ಆರೋಗ್ಯವಾಗಿದ್ದಾರೆ. ನಮ್ಮ ಹಿತೈಷಿಗಳ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು" ಎಂದು ತಿಳಿಸಿದ್ದಾರೆ.