ಮುಂಬೈ: ಶುಚಿ-ರುಚಿಯಾದ ತಿನಿಸು ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ?. ಹಾಗಾಗಿ, ಲಂಚ್ ಅಥವಾ ಡಿನ್ನರ್ ಪಾರ್ಟಿಗಳು ಪ್ರೀತಿಪಾತ್ರರನ್ನು ಒಂದುಗೂಡಿಸಿ ಸುಂದರ ಸಮಯ ಅನುಭವಿಸುವಂತೆ ಮಾಡುತ್ತವೆ. ಅಂತೆಯೇ ಖ್ಯಾತ ಸಿನಿಮಾ ತಾರೆಯರಾದ ಕರೀನಾ ಕಪೂರ್ - ರಿಯಾ ಕಪೂರ್ ಈ ವಿಷಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ.
ಕರೀನಾ ಕಪೂರ್ ಅವರ ಸ್ನೇಹಿತೆ ಮತ್ತು ನಿರ್ಮಾಪಕಿ ರಿಯಾ ಕಪೂರ್ ಅವರ ಇತ್ತೀಚಿನ ವಾಟ್ಸಾಪ್ ಸಂಭಾಷಣೆ ವೈರಲ್ ಆಗಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚೆಚ್ಚು ಪ್ರತಿಕ್ರಿಯೆಗಳು ಬರುತ್ತಿವೆ.
ಬಾಲಿವುಡ್ ಬೆಬೊ ಕರೀನಾ ಕಪೂರ್ ಅವರು ರಿಯಾ ಅವರೊಂದಿಗಿನ ವಾಟ್ಸಾಪ್ ಚಾಟ್ನ ಸ್ಕ್ರೀನ್ ಶಾಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಇಬ್ಬರೂ ಸಿಹಿತಿಂಡಿಗಳ ಬಗ್ಗೆ ಚರ್ಚಿಸುತ್ತಿದ್ದಾರೆ.
ಈ ಸಂಭಾಷಣೆಯಲ್ಲಿ, ರಿಯಾ ಅವರು ಕರೀನಾಗೆ ನೀವು ಏನನ್ನು ತಿನ್ನಲು ಬಯಸುತ್ತೀರಿ ಎಂದು ಕೇಳಿದ್ದಾರೆ. ಈ ಸಂಭಾಷಣೆ ಕೊನೆಗೆ 'ಹಾಟ್ ಮಿಠಾಯಿ ಸಾಸ್ ಮತ್ತು ವೆನಿಲ್ಲಾ ಐಸ್ ಕ್ರೀಮ್' ಜೊತೆ ಅಂತಿಮಗೊಂಡಿದೆ. ಸ್ಕ್ರೀನ್ಶಾಟ್ನ ಕೆಳಗೆ, ನಾನು ಈ ಸಂಭಾಷಣೆಯನ್ನು ಇಷ್ಟಪಡುತ್ತೇನೆ ಎಂದು ಕರೀನಾ ಬರೆದಿದ್ದಾರೆ.
ಡಿಸೆಂಬರ್ 29 ರಂದು ರಿಯಾ ಅವರು ಮತ್ತು ಅವರ ಪತಿ ಕರಣ್ ಬೂಲಾನಿ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು.