ಬಾಲಿವುಡ್ ನಟಿ ಕರೀನಾ ಕಪೂರ್ ಎರಡನೇ ಮಗುವಿಗೆ ತಾಯಿಯಾಗುತ್ತಿದ್ದಾರೆ. ಆದರೂ ಮೊದಲ ಮಗು ತೈಮೂರ್ ಬಗ್ಗೆ ಕರೀನಾ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಆ ಮಗುವಿನ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಸದಾ ಕಾತರದಿಂದ ಕಾಯುತ್ತಿರುತ್ತಾರೆ. ಈ ನಡುವೆ ಕರೀನಾ, ಅಭಿಮಾನಿಗಳಿಗಾಗಿ ತೈಮೂರ್ನ ಹೊಸ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ತೈಮೂರ್ ಒಂದು ಕೈಯಲ್ಲಿ ಫ್ರೆಂಚ್ ಫ್ರೈಸ್ ತುಂಬಿದ ಪ್ಲೇಟ್ ಹಿಡಿದು ಮತ್ತೊಂದು ಕೈಯ್ಯಲ್ಲಿ ಒಂದು ಫ್ರೈಸ್ ಹಿಡಿದು ಯಾರಿಗೋ ತೋರಿಸುತ್ತಿರುವ ಫೋಟೋ ಅದು. "ಯಾರಿಗಾದರೂ ಫ್ರೆಂಚ್ ಫ್ರೈಸ್ ಬೇಕಾ...? ನಮ್ಮ ಫೋಟೋಗ್ರಾಫರ್ ಆಗಿದ್ದಕ್ಕೆ ನಿಮಗೆ ಧನ್ಯವಾದಗಳು ಅರ್ಜುನ್ ಕಪೂರ್" ಎಂದು ಕರೀನಾ ಕ್ಯಾಪ್ಷನ್ ಹಾಕಿದ್ದಾರೆ. ಕಳೆದ ವಾರ ಕರೀನಾ ತಮ್ಮ ಪತಿ ಸೈಫ್ ಅಲಿ ಖಾನ್, ಪುತ್ರ ತೈಮೂರ್, ಮಲೈಕಾ ಅರೋರ ಹಾಗೂ ಆಕೆಯ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಜೊತೆ ಧರ್ಮಶಾಲಾಗೆ ಟ್ರಿಪ್ ಹೋಗಿ ಬಂದಿದ್ದರು. ಅಲ್ಲಿ ತೆಗೆದ ಪೋಟೋಗಳನ್ನು ಕರೀನಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಕರೀನಾ ಅವರ ಈ ಪೋಸ್ಟ್ಗೆ ಸಹೋದರಿ ಕರೀಷ್ಮಾ ಕಪೂರ್, ಮನಿಷ್ ಮಲ್ಹೋತ್ರಾ, ಮಲೈಕಾ ಅರೋರಾ ಹಾಗೂ ಇನ್ನಿತರ ಸೆಲಬ್ರಿಟಿಗಳು ಕಮೆಂಟ್ ಮಾಡಿದ್ದಾರೆ.