ETV Bharat / sitara

'ಶಾದಿ ಮತ್​ ಕರ್​ ನಾ'... ಅಂದವರಿಗೆ ಕರೀನಾ ಏನು ಉತ್ತರಿಸಿದ್ದರು ಎಂದರೆ!!? - ಸೈಫ್ ಅಲಿ ಖಾನ್

ನಾನು ಆತನನ್ನು ಪ್ರೀತಿಸುತ್ತಿದ್ದೇನೆ. ನಾನು ಅವನೊಂದಿಗೆ ಇರುವ ಕಾರಣದಿಂದ ನಿರ್ಮಾಪಕರು ನನ್ನೊಂದಿಗೆ ಕೆಲಸ ಮಾಡಲು ಬಯಸುವುದಿಲ್ಲ, ಪರವಾಗಿಲ್ಲ ಹಾಗೇ ಇರಲಿ. ಆದ್ರೆ ಅದರ ಹೊರತಾಗಿಯೂ ನಾನು ಕೆಲವು ಉತ್ತಮ ಚಲನಚಿತ್ರಗಳನ್ನು ಮಾಡಿದ್ದೇನೆ.

kareena
ಕರೀನಾ
author img

By

Published : Aug 26, 2020, 2:14 PM IST

ಮುಂಬೈ: ನಟಿ ಕರೀನಾ ಕಪೂರ್ ಖಾನ್ ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಶಾಹಿದ್ ಕಪೂರ್ ಅವರೊಂದಿಗಿನ ಬ್ರೇಕ್​ಅಪ್​ ಬಳಿಕ ತಮ್ಮ ಜೀವನದ '2ನೇ ಹಂತ'ವನ್ನು ಪ್ರಾರಂಭಿಸಿದ ಅವರು, ಸೈಫ್ ಅಲಿ ಖಾನ್ ಜೊತೆಗೆ ಹೇಗೆ ಪ್ರೀತಿಯಲ್ಲಿ ಬಿದ್ದರು ಎಂಬುದಾಗಿ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

"ಜಬ್ ವಿ ಮೆಟ್ ಚಿತ್ರ ಬಿಡುಗಡೆಯಾದ ಸಮಯದಲ್ಲಿ ನಾನು ಸೈಫ್ ಅವರನ್ನು ಭೇಟಿಯಾಗಿದ್ದೆ. ಆ ಸಮಯದಲ್ಲಿ ನಾನು ಸೂಪರ್​ ಸಕ್ಸಸ್ ಕಂಡಿದ್ದೆ, ಅದೇ ಸಂದರ್ಭದಲ್ಲಿ ನನಗೆ ಸೈಫ್​ ಮೇಲೆ ಲವ್​ ಆಗಿತ್ತು. ನನ್ನ ಯಶಸ್ಸಿನ ಸಮಯದಿಂದಲೇ ನಾನು ಅವರನ್ನು ಪ್ರೀತಿಸುತ್ತಿದ್ದೇನೆ. ಇದು ನನಗೆ ಕ್ಯಾಚ್ -22 ಸನ್ನಿವೇಶವಾಗಿತ್ತು" ಅಂತಾರೆ ಕರೀನಾ.

'ಆಗ ನಾನು ನನ್ನ ವೃತ್ತಿಜೀವನದತ್ತ ಗಮನ ಹರಿಸಬಹುದಿತ್ತು. ಯಾಕೆ ನೀನು ಮುಂದೆ ಚಿತ್ರ ಮಾಡಲು ಬಯಸುದಿಲ್ಲವೇ, ಈ ರೀತಿ ಮೂರ್ಖತನದಿಂದ ನಿರ್ಧಾರ ತೆಗೆದುಕೊಳ್ಳಬೇಡ ಎಂದು ಹಲವು ಬಾರಿ ನನ್ನ ಸ್ನೇಹಿತರು ಅಂದಿದ್ದರು. ಆದ್ರೆ ನಾನು ಪ್ರೀತಿಯನ್ನೇ ಮೊದಲು ಸ್ವೀಕರಿಸುತ್ತೇನೆ' ಎಂದು ಬೇಬೋ ಹೇಳಿಕೊಂಡಿದ್ದಾರೆ.

ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ಕರೀನಾ ಮದುವೆಯಾಗುವ ನಿರ್ಧಾರ ಮುಂದಿಟ್ಟಿದ್ದರು. ಇದು ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಂತೂ ಸತ್ಯ.

'ಶಾದಿ ಮತ್ ಕರ್​ನಾ, ಕೆರಿಯರ್​ ಖತಮ್ ಹೋ ಜಾಯೇಗಾ(ಮದುವೆಯಾಗ್ಬೇಡ.. ಅಲ್ಲಿಗೆ ವೃತ್ತಿ ಜೀವನವೇ ಮುಗಿದು ಹೋಗುತ್ತದೆ)' ಎಂಬಂತಿದ್ದರು. ನಾನು, 'ಕೆರಿಯರ್​ ಹೀ ಖತಮ್ ಹೋ ಜಯೇಗಾ ನಾ? ಜಾನ್ ತೋ ನಹಿ ಚಲಿ ಜಾಯೇಗಿ ನಾ?'(ಕೆರಿಯರ್​ ಮುಗಿದು ಹೋಗುತ್ತದೆ ಅಷ್ಟೇ ತಾನೆ, ಜೀವ ಏನೂ ಹೋಗುದಿಲ್ವಲ್ಲ) ಎಂದು ನಾನು ಉತ್ತರಿಸಿದ್ದೇನೆ ಅಂತಾಳೆ ಕರೀನಾ.

ನಾನು ಆತನನ್ನು ಪ್ರೀತಿಸುತ್ತಿದ್ದೇನೆ. ನಾನು ಅವನೊಂದಿಗೆ ಇರುವ ಕಾರಣದಿಂದ ನಿರ್ಮಾಪಕರು ನನ್ನೊಂದಿಗೆ ಕೆಲಸ ಮಾಡಲು ಬಯಸುವುದಿಲ್ಲ, ಪರವಾಗಿಲ್ಲ ಹಾಗೇ ಇರಲಿ. ಆದ್ರೆ ಅದರ ಹೊರತಾಗಿಯೂ ನಾನು ಕೆಲವು ಉತ್ತಮ ಚಲನಚಿತ್ರಗಳನ್ನು ಮಾಡಿದ್ದೇನೆ. ಸೈಫ್ ಕೂಡ ನನಗೆ ಬಹಳ ಪ್ರೋತ್ಸಾಹ ನೀಡುತ್ತಿದ್ದಾನೆ "ಎಂದು ಸಂತೋಷ ವ್ಯಕ್ತಪಡಿಸುತ್ತಾಳೆ ನಟಿ.

ಕರೀನಾ ಕೊನೆಯ ಬಾರಿಗೆ ಗುಡ್ ನ್ಯೂಸ್​ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ಕಾಣಿಸಿಕೊಂಡಿದ್ದರು. ಅವರ ಮುಂದಿನ ಸಿನಿಮಾ ಲಾಲ್ ಸಿಂಗ್ ಚಡ್ಡಾದಲ್ಲಿ ಅಮೀರ್ ಖಾನ್ ಜೊತೆ ಹಾಗೂ ಕರಣ್ ಜೋಹರ್​ನ ತಖ್ತ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.