ಹೈದರಾಬಾದ್: ನಟಿ ಕಂಗನಾ ರಣಾವತ್, ದಿಲ್ಜಿತ್ ದೋಸಾಂಜ್ ಮತ್ತು ಪ್ರಿಯಾಂಕಾ ಚೋಪ್ರಾ ವಿರುದ್ಧ ಹೊಸ ದಾಳಿ ನಡೆಸಿದ್ದು, ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಅವರು ಬೆಂಬಲ ನೀಡುವುದರ ಹಿಂದೆ ಅವರ ಉದ್ದೇಶವೇನು ಎಂದು ಕೇಳಿದ್ದಾರೆ.
ಕಂಗನಾ ಟ್ವಿಟರ್ನಲ್ಲಿ 2 ನಿಮಿಷಗಳ ವಿಡಿಯೋವನ್ನು ಹಂಚಿಕೊಂಡಿದ್ದು, ಅವರು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಎದುರಿಸುತ್ತಿರುವ ಭಾವನಾತ್ಮಕ ಮತ್ತು ಮಾನಸಿಕ ಹಲ್ಲೆ ಕುರಿತು ಮಾತನಾಡಿ, ದೇಶಪ್ರೇಮಿಯಾಗಿರುವ ನಾನು ಪ್ರತಿ ಬಾರಿಯೂ ನನ್ನ ಉದ್ದೇಶಗಳನ್ನು ಏಕೆ ಸಾಬೀತುಪಡಿಸಬೇಕು ಎಂದು ಪ್ರಶ್ನಿಸಿದ್ದಾರೆ.
"ನನ್ನ ಉದ್ದೇಶಗಳು 'ದೇಶಭಕ್ತ' ಎಂದು ನಿತ್ಯ ನಾನು ಸಾಬೀತುಪಡಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ನಾನು ನಿರಾಸೆಗೊಂಡಿದ್ದೇನೆ. ಆದರೆ ದಿಲ್ಜಿತ್ ದೋಸಾಂಜ್ ಹಾಗೂ ಪ್ರಿಯಾಂಕಾ ಚೋಪ್ರಾ ಅವರ ಉದ್ದೇಶಗಳ ಕುರಿತು ಜನ ಏಕೆ ಪ್ರಶ್ನಿ ಮಾಡುತ್ತಿಲ್ಲ? ನಾನು ರಾಷ್ಟ್ರಕ್ಕಾಗಿ ಮಾತನಾಡುತ್ತೇನೆ ಹಾಗೂ ನಾನು 'ರಾಜನೀತಿ’ ಪಾಲಿಸುತ್ತಿದ್ದೇನೆ. ಹಾಗೇಯೇ ಯಾರಾದರೂ ಅವರ 'ನೀತಿ'ಯ ಕುರಿತು ಕೇಳಬಹುದಲ್ಲವೇ?" ಎಂದು ಪ್ರಶ್ನಿಸಿದ್ದಾರೆ.