ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಬಹು ನಿರೀಕ್ಷಿತ 'ಝುಂಡ್' ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ಕಳೆದ ವರ್ಷವೇ ತೆರೆ ಕಾಣಬೇಕಿದ್ದ ಈ ಸಿನಿಮಾ ಬಿಡುಗಡೆಯನ್ನ ಕೋವಿಡ್ ಕಾರಣದಿಂದ ಅನೇಕ ಬಾರಿ ಮುಂದೂಡಲಾಗಿತ್ತು. ಇದೀಗ ಅಂತಿಮ ಡೇಟ್ ಅನ್ನು ಫಿಕ್ಸ್ ಮಾಡಲಾಗಿದ್ದು, ಮುಂದಿನ ತಿಂಗಳು ಮಾರ್ಚ್ 4 ರಂದು ತೆರೆಗೆ ಅಪ್ಪಳಿಸಲಿದೆ.
ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅಮಿತಾಬ್ ಬಚ್ಚನ್, "ನಮ್ಮ ತಂಡ ರೆಡಿ ಇದೆ. ನಾವು ಬರ್ತಾ ಇದೀವಿ. ನೀವು ರೆಡಿನಾ? ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಮಾರ್ಚ್ 4, 2022 ರಂದು 'ಝುಂಡ್' ಬಿಡುಗಡೆಯಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.
-
T 4185 - Meri team taiyaar hai aur aap?
— Amitabh Bachchan (@SrBachchan) February 8, 2022 " class="align-text-top noRightClick twitterSection" data="
Aa rahe hain hum .. #Jhund releasing on 4th March 2022 in cinemas near you
Teaser Out Now!! .. https://t.co/bkFfDeff0I
">T 4185 - Meri team taiyaar hai aur aap?
— Amitabh Bachchan (@SrBachchan) February 8, 2022
Aa rahe hain hum .. #Jhund releasing on 4th March 2022 in cinemas near you
Teaser Out Now!! .. https://t.co/bkFfDeff0IT 4185 - Meri team taiyaar hai aur aap?
— Amitabh Bachchan (@SrBachchan) February 8, 2022
Aa rahe hain hum .. #Jhund releasing on 4th March 2022 in cinemas near you
Teaser Out Now!! .. https://t.co/bkFfDeff0I
ಇದನ್ನೂ ಓದಿ: ದೆಹಲಿಯ ಸೋಪಾನ್ ಬಂಗಲೆಯನ್ನೇ ಮಾರಿದ ಅಮಿತಾಭ್ ಬಚ್ಚನ್: ಕಾರಣ?
ಮರಾಠಿಯ 'ಸೈರಾಟ್' ಸಿನಿಮಾದ ನಾಗರಾಜ್ ಮಂಜುಳೆ 'ಝುಂಡ್' ಸಿನಿಮಾವನ್ನು ನಿರ್ದೇಶಿಸಿದ್ದು, ಸ್ಲಂ ಸಾಕರ್ ಸಂಸ್ಥಾಪಕ ವಿಜಯ್ ಬಾರ್ಸೆ ಆಧಾರಿತ ಪಾತ್ರವನ್ನು ಬಿಗ್ ಬಿ ನಿರ್ವಹಿಸುತ್ತಿದ್ದಾರೆ. ಓರ್ವ ಸಾಮಾಜಿಕ ಕಾರ್ಯಕರ್ತ ಯಾವ ರೀತಿಯಲ್ಲಿ ಬಡ ಮಕ್ಕಳಿಗೆ ಫುಟ್ಬಾಲ್ ತಂಡ ಕಟ್ಟಲು ನೆರವು ನೀಡುತ್ತಾರೆ ಎಂಬ ಕಥೆಯನ್ನು ಈ ಚಿತ್ರ ಹೊಂದಿದೆ.