ಜೈಪುರ : ಬಾಲಿವುಡ್ ನಟ ಇರ್ಫಾನ್ ಖಾನ್ ತಾಯಿ ಸಯೀದಾ ಬೇಗಂ ಅವರು ರಂಜಾನ್ ಮಾಸದ ಮೊದಲ ದಿನವಾದ ಶನಿವಾರ ಟೊಂಕ್ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಸಯೀದಾ ಅವರಿಗೆ 80 ವರ್ಷ ವಯಸ್ಸಾಗಿತ್ತು. ವಿಧಿ ವಿಧಾನಗಳು ಮುಗಿದ ಬಳಿಕ ಸಯೀದಾ ಬೇಗಂ ಮೃತ ದೇಹವನ್ನು ಬೆನಿವಾಲ್ ಕಾಂತಾ ಕೃಷ್ಣ ಕಾಲೋನಿಯಲ್ಲಿರುವ ಅವರ ನಿವಾಸದಿಂದ ಸಮಾಧಿ ಸ್ಥಳಕ್ಕೆ ಕೊಂಡೊಯ್ಯಲಾಗುತ್ತದೆ.
ಲಾಕ್ ಡೌನ್ ಇರುವುದರಿಂದ ಇರ್ಫಾನ್ ಖಾನ್ ತಾಯಿಯ ಅಂತಿಮ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳುವುದು ಅಸಾಧ್ಯ ಎನ್ನಲಾಗುತ್ತಿದೆ. ಇರ್ಫಾನ್ ಖಾನ್ ತಂದೆ ಯಾಸಿನ್ ಖಾನ್ ಕೂಡ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದಾರೆ.