ಬಾಲಿವುಡ್ ನಟಿ ಶ್ರೀದೇವಿ ಹುಟ್ಟಿದ ದಿನ ಇಂದು. ಶ್ರೀದೇವಿ ಇಂದು ನಮ್ಮೊಂದಿಗೆ ಇದ್ದಿದ್ದರೆ ತಮ್ಮ 57ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ವಿಶೇಷ ದಿನದಂದು ಅಭಿಮಾನಿಗಳು ಅತಿಲೋಕ ಸುಂದರಿಯನ್ನು ನೆನೆದು ಬೇಸರಪಡುತ್ತಿದ್ದಾರೆ.
- " class="align-text-top noRightClick twitterSection" data="
">
ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಕೂಡಾ ಅಗಲಿದ ಅಮ್ಮನನ್ನು ನೆನೆದು ಭಾವುಕರಾಗಿದ್ದಾರೆ. ಇಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಅಮ್ಮನೊಂದಿಗೆ ಇರುವ ಫೊಟೋವೊಂದನ್ನು ಜಾನ್ವಿ ಹಂಚಿಕೊಂಡಿದ್ದಾರೆ. ಅಮ್ಮನನ್ನು ತಬ್ಬಿಹಿಡಿದಿರುವ ಕಪ್ಪು-ಬಿಳುಪು ಫೋಟೋವೊಂದನ್ನು ಹಂಚಿಕೊಂಡಿರುವ ಜಾನ್ವಿ ಕಪೂರ್, 'ಲವ್ ಯು ಅಮ್ಮ' ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿ ಅಭಿಮಾನಿಗಳೂ ಭಾವುಕರಾಗಿದ್ದಾರೆ. ಕೆಲವರು ಜಾನ್ವಿಯನ್ನು ಕಂಡು ಮರುಗಿದರೆ ಮತ್ತೆ ಕೆಲವರು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
13 ಆಗಸ್ಟ್ 1963 ರಲ್ಲಿ ಶ್ರೀ ಅಮ್ಮಾಯಂಗಾರ್ ಅಯ್ಯಪ್ಪನ್ ಆಗಿ ತಮಿಳುನಾಡಿನಲ್ಲಿ ಜನಿಸಿದ ಶ್ರೀದೇವಿ, ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. ತಮಿಳು, ತೆಲುಗು, ಹಿಂದಿ, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಚಾಂದಿನಿ, ಮಿ. ಇಂಡಿಯಾ, ಚಾಲ್ಬಾಜ್, ನಾಗಿನ್, ಇಂಗ್ಲಿಷ್ ವಿಂಗ್ಲಿಷ್, ಗಾಯತ್ರಿ, ಮೂಂಡ್ರು ಮುಡಿಚ್ಚು, ಕುಮಾರ ಸಂಭವಂ, ಓಂಜಾಲ್, ಭಕ್ತ ಕುಂಬಾರ, ಪ್ರಿಯಾ, ಮಾ ನಾನ್ನ ನಿರ್ದೋಷಿ, ಅನುರಾಗ ದೇವತಾ ಸೇರಿ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
ಪದ್ಮಶ್ರೀ ಸೇರಿ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ ಶ್ರೀದೇವಿ. 'ಮಾಮ್' ಅವರು ಅಭಿನಯಿಸಿದ ಕೊನೆಯ ಸಿನಿಮಾ ಈ ಚಿತ್ರದ ಉತ್ತಮ ಅಭಿನಯಕ್ಕಾಗಿ ಶ್ರೀದೇವಿಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದರು.
2018 ಫೆಬ್ರವರಿಯಲ್ಲಿ ಸಂಬಂಧಿಯೊಬ್ಬರ ಮದುವೆಗೆ ಭಾಗವಹಿಸಲು ದುಬೈಗೆ ತೆರಳಿದ್ದ ಶ್ರೀದೇವಿ ಫೆಬ್ರವರಿ 24 ರಂದು ಹೃದಯಾಘಾತದಿಂದ ಹೋಟೆಲ್ ಬಾತ್ಟಬ್ನಲ್ಲಿ ಮುಳುಗಿ ಸಾವನ್ನಪ್ಪಿದ್ದರು.