ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಶನ್ ಸಬಾ ಆಜಾದ್ ಅವರನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಪ್ರಶಂಸಿದ್ದಾರೆ. ಈ ಮೂಲಕ ಮತ್ತೆ ಹೃತಿಕ್ ಮತ್ತು ಸಬಾ ಆಜಾದ್ ಮತ್ತೆ ರಿಲೇಷನ್ ಶಿಪ್ ನಲ್ಲಿರುವ ವದಂತಿಗೆ ಇನ್ನಷ್ಟು ಪುಷ್ಟಿ ನೀಡಿದೆ.
ಭಾನುವಾರ, ಸಬಾ ಅವರು ಸತ್ಯಜಿತ್ ರೇ ಅವರ ಚಲನಚಿತ್ರ ಗೂಪಿ ಗೈನೆ ಬಾಘಾ ಬೈನ್‌ನ ಹಾಡು ಹಾಡುತ್ತಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇವರ ಗಾಯನಕ್ಕೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಪ್ರಶಂಸೆ ವ್ಯಕ್ತಪಡಿಸಿದ್ದರು. ಜೊತೆಗೆ ಹೃತಿಕ್ ರೋಷನ್ ಅವರು ಸಬಾ ಅವರ ಗಾಯನವನ್ನು ನೀವು ಅಸಾಧಾರಣ ಪ್ರತಿಭೆ ಎಂದು ಪ್ರಶಂಸಿಸಿದ್ದು, ಪ್ರತಿಯಾಗಿ ಸಬಾ, ನೀವು ಅತ್ಯಂತ ಕರುಣಾಮಯಿ ಎಂದು ಪ್ರತಿಕ್ರಿಯಿಸಿದ್ದಾರೆ.
- " class="align-text-top noRightClick twitterSection" data="
">
ಹೃತಿಕ್ ರೋಶನ್ ಇದೇ ಮೊದಲಲ್ಲ. ಬದಲಾಗಿ ಹಲವು ಬಾರಿ ಸಬಾ ಆಜಾದ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸಿಸಿದ್ದಾರೆ. ಈ ಹಿಂದೆ ಸಬಾ ಅವರು ಹೃತಿಕ್ ಮನೆಯಲ್ಲಿ ಊಟ ಕೂಡಾ ಸವಿದಿದ್ದರು, ಈ ಬಗ್ಗೆ ರಾಜೇಶ್ ರೋಶನ್ ತಮ್ಮ ಕುಟುಂಬದೊಂದಿಗಿನ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದು ಇಬ್ಬರ ನಡುವಿನ ಸಂಬಂಧದ ವದಂತಿಗೆ ಇನ್ನಷ್ಟು ಪುಷ್ಟಿ ನೀಡಿದೆ.
ಇನ್ನು ಹೃತಿಕ್ ಅಭಿನಯದ ಸಿನೆಮಾ ಫೈಟರ್ ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆಗೊಳ್ಳಲಿದೆ. ಹೃತಿಕ್ ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಸಿನೆಮಾದಲ್ಲಿ ನಟಿಸಲಿದ್ದಾರೆ.
ಓದಿ : 67 ನೇ ಜನ್ಮದಿನ ಆಚರಿಸುತ್ತಿರುವ ಅನುಪಮ್ ಖೇರ್: ದೇಹದ ಫಿಟ್ನೆಸ್ಗೆ ಒತ್ತು