ETV Bharat / sitara

ಪೇಟ ಧರಿಸಬಹುದಾದ್ರೆ ಹಿಜಾಬ್​ ಯಾಕಿಲ್ಲ?.. ಟ್ರೋಲ್​ಗೊಳಗಾದ ನಟಿ ಸೋನಂ ಕಪೂರ್​.. - ಸೋನಂ ಕಪೂರ್ ಇನ್​ಸ್ಟಾಗ್ರಾಂ ಸ್ಟೋರಿ

ಪೇಟವು ಒಂದು ಆಯ್ಕೆಯಾದ್ರೆ, ಹಿಜಾಬ್​ ಯಾಕಾಗಬಾರದು?" ಎಂದು ಕ್ಯಾಪ್ಶನ್​ ನೀಡಿದ್ದರು. ಆದರೆ, ಹಿಜಾಬ್​-ಕೇಸರಿ ಶಾಲೆ ವಿವಾದದ ನಡುವೆ ಸಿಖ್​ ಧರ್ಮವನ್ನು ಎಳೆದಿದ್ದಕ್ಕೆ ಸೋನಂ ಕಪೂರ್​ ವಿರುದ್ಧ ನೆಟ್ಟಿಗರು ಕಿಡಿ ಕಾರಿ, ಟ್ರೋಲ್​​ ಮಾಡಿದ್ದಾರೆ..

ಸೋನಂ ಕಪೂರ್​
ಸೋನಂ ಕಪೂರ್​
author img

By

Published : Feb 12, 2022, 7:35 PM IST

ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅನುಮತಿ ನೀಡಬೇಕೆ ಎಂಬ ಕುರಿತು ಕರ್ನಾಟಕ ರಾಜ್ಯದಲ್ಲಿ ಉಲ್ಬಣವಾಗಿರುವ ವಿವಾದದ ಬಗ್ಗೆ ಬಾಲಿವುಡ್​ ನಟಿ ಸೋನಂ ಕಪೂರ್​ ಪ್ರತಿಕ್ರಿಯೆ ನೀಡಿ, ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆದರೆ, ಅವರು ಇನ್ನೊಂದು ಧರ್ಮದ ವಿಚಾರಕ್ಕೆ ತಲೆ ಹಾಕಿ ಟ್ರೋಲ್​ಗೊಳಗಾಗಿದ್ದಾರೆ.

ನಿನ್ನೆ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಫೋಟೋವೊಂದನ್ನು ಸೋನಂ ಕಪೂರ್​ ಶೇರ್​ ಮಾಡಿದ್ದರು. ಸಿಖ್​ ಧರ್ಮದ ವ್ಯಕ್ತಿಯೊಬ್ಬರು ಪೇಟ ಧರಿಸಿರುವ ಹಾಗೂ ಮುಸ್ಲಿಂ ಧರ್ಮದ ಮಹಿಳೆಯೊಬ್ಬರು ಹಿಜಾಬ್​ ಧರಿಸಿರುವ ಫೋಟೋ ಅದಾಗಿತ್ತು.

ಅದಕ್ಕೆ ನಟಿ, "ಪೇಟವು ಒಂದು ಆಯ್ಕೆಯಾದ್ರೆ, ಹಿಜಾಬ್​ ಯಾಕಾಗಬಾರದು?" ಎಂದು ಕ್ಯಾಪ್ಶನ್​ ನೀಡಿದ್ದರು. ಆದರೆ, ಹಿಜಾಬ್​-ಕೇಸರಿ ಶಾಲೆ ವಿವಾದದ ನಡುವೆ ಸಿಖ್​ ಧರ್ಮವನ್ನು ಎಳೆದಿದ್ದಕ್ಕೆ ಸೋನಂ ಕಪೂರ್​ ವಿರುದ್ಧ ನೆಟ್ಟಿಗರು ಕಿಡಿ ಕಾರಿ, ಟ್ರೋಲ್​​ ಮಾಡಿದ್ದಾರೆ.

ಇದನ್ನೂ ಓದಿ: ಹಿಜಾಬ್ ಕುರಿತ ಕಂಗಾನಾ ಹೇಳಿಕೆಗೆ ಹಿರಿಯ​ ನಟಿ ಶಬಾನಾ ಅಜ್ಮಿ ಖಡಕ್ ಉತ್ತರ ಹೀಗಿತ್ತು..

ಬಾಲಿವುಡ್​ನ ಅನೇಕ ತಾರೆಯರು ಹಿಜಾಬ್​ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇತ್ತೀಷೆಗಷ್ಟೇ ನಟಿ ಕಂಗನಾ ರಣಾವತ್​ ಕೂಡ "ನೀವು ಧೈರ್ಯವನ್ನು ತೋರಿಸಲು ಬಯಸಿದರೆ, "ಆಫ್ಘಾನಿಸ್ತಾನದಲ್ಲಿ ಬುರ್ಖಾ ಧರಿಸದೆ ಧೈರ್ಯವನ್ನು ಪ್ರದರ್ಶಿಸಿ. ನಿಮ್ಮನ್ನು ಬಂಧಿಯಾಗಿಟ್ಟುಕೊಳ್ಳದೆ ಬಿಡಿಸಿಕೊಳ್ಳಲು ಕಲಿಯಿರಿ" ಎಂದು ಹೇಳಿಕೆ ನೀಡಿ ವಿವಾದಕ್ಕೆ ತುಪ್ಪ ಸುರಿದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.