ETV Bharat / sitara

ಕಂಗನಾ ಕಚೇರಿ ನೆಲಸಮಕ್ಕೆ ಬಾಂಬೆ ಹೈಕೋರ್ಟ್ ತಡೆ

ಮುಂಬೈನಲ್ಲಿರುವ ಕಂಗನಾ ರನೌತ್​‌ ಅವರ ಕಚೇರಿಯನ್ನು ನೆಲಸಮ ಮಾಡದಂತೆ ಬಾಂಬೆ ಹೈಕೋರ್ಟ್‌ ತಡೆ ನೀಡಿದೆ. ಮತ್ತೊಂದೆಡೆ ಸರಣಿ ಟ್ವೀಟ್‌ ಮಾಡಿರುವ ಬಾಲಿವುಡ್‌ ಬೆಡಗಿ, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

HC stays BMC's demolition at Kangana Ranaut's property
ಕಂಗನಾ ರಣಾವತ್‌ ಕಚೇರಿ ನೆಲಸಮಕ್ಕೆ ಬಾಂಬೆ ಹೈಕೋರ್ಟ್ ತಡೆ
author img

By

Published : Sep 9, 2020, 3:05 PM IST

ಮುಂಬೈ(ಮಹಾರಾಷ್ಟ್ರ): ಬಾಲಿವುಡ್‌ ನಟಿ ಕಂಗನಾ ರನೌತ್​​‌ ಅವರ ಮುಂಬೈ ಕಚೇರಿ ನೆಲಸಮಕ್ಕೆ ಬಾಂಬೆ ಹೈಕೋರ್ಟ್‌ ತಡೆ ನೀಡಿದೆ. ಪಾಲಿಹಿಲ್‌ ರಸ್ತೆಯಲ್ಲಿನ ಕಚೇರಿಯನ್ನು ಜೆಸಿಬಿ ಮೂಲಕ ತೆರವಿಗೆ ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದರು. ಇದನ್ನು ಪ್ರಶ್ನಿಸಿ ಕಂಗನಾ ಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕಚೇರಿ ನೆಲಸಮ ಮಾಡದಂತೆ ತಡೆ ನೀಡಿ ನಾಳೆ ಅಪರಾಹ್ನ 3 ಗಂಟೆಗೆ ವಿಚಾರಣೆ ಮುಂದೂಡಿದೆ. ಬಿಎಂಸಿ ಕೂಡ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಲಿದೆ.

  • There is no illegal construction in my house, also government has banned any demolitions in Covid till September 30, Bullywood watch now this is what Fascism looks like 🙂#DeathOfDemocracy #KanganaRanaut

    — Kangana Ranaut (@KanganaTeam) September 9, 2020 " class="align-text-top noRightClick twitterSection" data=" ">

ಮುಂಬೈ ಮಹಾನಗರ ಪಾಲಿಕೆ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಕಂಗನಾ ಕಚೇರಿ ತೆರವಿಗೆ ಇಂದು ಅಧಿಕಾರಿಗಳು ಮುಂದಾಗಿದ್ದರು. ಇದು ಭಾರೀ ವಿವಾದಕ್ಕೂ ಕಾರಣವಾಗಿದೆ.

ಮತ್ತೊಂದೆಡೆ ಸರಣಿ ಟ್ವೀಟ್‌ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿರುವ ನಟಿ ಕಂಗನಾ, ನಾನು ಕಾನೂನು ಬಾಹಿರವಾಗಿ ಮನೆಯನ್ನು ನಿರ್ಮಿಸಿಲ್ಲ. ಸೆಪ್ಟೆಂಬರ್‌ 30ರವರೆಗೆ ಯಾವುದೇ ತೆರವು ಕಾರ್ಯಾಚರಣೆಯನ್ನು ಮಾಡದಂತೆ ಸರ್ಕಾರದ ಆದೇಶವಿದೆ. ಬಾಲಿವುಡ್‌ ಇದನ್ನೆಲ್ಲಾ ನೋಡುತ್ತಿದೆ. ಇದು ಪ್ರಜಾಪ್ರಭುತ್ವದ ಕೊಲೆ ಎಂದಿದ್ದಾರೆ.

ನಾವು ಯಾವುದೇ ತಪ್ಪು ಮಾಡಿಲ್ಲ ಮತ್ತು ನನ್ನ ಶತ್ರುಗಳು ಸಾಬೀತು ಮಾಡಬೇಕು. ಈ ಮೂಲಕ ಮತ್ತೆ ಪಾಕ್‌ ಅಕ್ರಮಿತ ಕಾಶ್ಮೀರದಂತೆ ಆಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.