ಮುಂಬೈ(ಮಹಾರಾಷ್ಟ್ರ): ಸೆಲೆಬ್ರಿಟಿಗಳ ಮನೆಯಲ್ಲಿಯೂ ಸಹ ಗಣೇಶೋತ್ಸವದ ಸಂಭ್ರಮವು ಜೋರಾಗಿದೆ. ಪ್ರಮುಖವಾಗಿ ಬಾಲಿವುಡ್ ದಂಪತಿ ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್ ಅವರ ಮನೆಯಲ್ಲಿ ಇಂದು ಗಣೇಶೋತ್ಸವ ಜೋರಾಗಿತ್ತು. ಗಣೇಶನ ಮೂರ್ತಿಯನ್ನು ಬರಮಾಡಿಕೊಂಡ ಕುಟುಂಬ ಭಕ್ತಿಯಿಂದ ಪೂಜೆ ಮಾಡಿದ್ದಾರೆ.
ಮಣ್ಣಿನ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿರುವ ಅಂದದ ಫೋಟೋವನ್ನು ನಟಿ ಕರೀನಾ ಕಪೂರ್ ತಮ್ಮ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನಟ-ನಟಿಯರು ಹಾಗೂ ನೆಟಿಜನ್ಗಳು ಹರ್ಷ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.
- " class="align-text-top noRightClick twitterSection" data="
">
ನಮ್ಮ ಹಿರಿಯ ಮಗ ತೈಮೂರ್ ಅಲಿಖಾನ್ ತಯಾರಿಸಿದ ಮಣ್ಣಿನ ಗಣಪತಿ ಮೂರ್ತಿಯನ್ನು ಇಟ್ಟು ಮನೆಯವರೆಲ್ಲರೂ ಸೇರಿ ಇಂದು ಗಣೇಶೋತ್ಸವವನ್ನು ಆಚರಿಸಿದೆವು ಎಂದು ಹೆಮ್ಮೆ ವ್ಯಕ್ತಪಡಿಸಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ, ಫೋಟೋದಲ್ಲಿ ಅವರ ಕಿರಿಯ ಮಗ ಜಹಾಂಗೀರ್ ಅಲಿ ಖಾನ್ ಕಾಣಿಸಿಲ್ಲ.