ETV Bharat / sitara

ವೇಶ್ಯೆ ಪಾತ್ರದಲ್ಲಿ ಆಲಿಯಾ.. ‘ಗಂಗುಬಾಯಿ ಕಥಿಯಾವಾಡಿ’ ಟೀಸರ್ ರಿಲೀಸ್​ - ‘ಮಾಫಿಯಾ ಕ್ವೀನ್ಸ್​ ಆಫ್ ಮುಂಬೈ

ಸದ್ಯ ಈ ಟೀಸರ್​ನಲ್ಲಿ ಆಲಿಯಾ ಭಟ್​​​​ ಅಭಿನಯದ ಒಂದು ಕಿರುನೋಟ ಹೊರಬಿದ್ದಿದೆ. ಅವರ ಎಲ್ಲಾ ಚಿತ್ರಗಳಿಗಿಂತಲೂ ಈ ಚಿತ್ರದಲ್ಲಿ ಭಿನ್ನ ಪಾತ್ರದಲ್ಲಿ ನಟಿಸಿದ್ದು, ನೆನಪಿನಲ್ಲಿ ಉಳಿಯಬಹುದಾದ ಪಾತ್ರವಾಗುವ ಸಾಧ್ಯತೆ ದಟ್ಟವಾಗಿದೆ.

ವೇಶ್ಯೆ ಪಾತ್ರದಲ್ಲಿ ಆಲಿಯಾ
ವೇಶ್ಯೆ ಪಾತ್ರದಲ್ಲಿ ಆಲಿಯಾ
author img

By

Published : Feb 24, 2021, 7:05 PM IST

ಹೈದರಾಬಾದ್: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ಸಿದ್ಧವಾಗಿರುವ ‘ಗಂಗುಬಾಯಿ ಕಥಿಯಾವಾಡಿ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇದಕ್ಕೂ ಮೊದಲು ಸಿನಿಮಾ ರಿಲೀಸ್ ಡೇಟ್​ ಘೋಷಣೆ ಮಾಡಿದ್ದರು.

ಇದೀಗ ಟೀಸರ್ ರಿಲೀಸ್ ಮಾಡಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇಂದು ಸಂಜಯ್ ಲೀಲಾ ಬನ್ಸಾಲಿ 57ನೇ ಹುಟ್ಟುಹಬ್ಬ ಹಿನ್ನೆಲೆ ಟೀಸರ್ ರಿಲೀಸ್ ಆಗಿದ್ದು, ಈ ಕುರಿತು ನಟಿ ಆಲಿಯಾ ಭಟ್ ಇನ್​ಸ್ಟಾಗ್ರಾಮ್​​​ನಲ್ಲಿ ಪೋಸ್ಟ್ ಮಾಡಿ ಶುಭಹಾರೈಸಿದ್ದಾರೆ.

ಅಲ್ಲದೆ ಟೀಸರ್ ಶೇರ್ ಮಾಡಿರುವ ಆಲಿಯಾ, ಜನ್ಮದಿನದ ಶುಭಾಶಯಗಳು ಸರ್​​... ನೀವು ಮತ್ತು ನಿಮ್ಮ ಜನ್ಮ ದಿನವನ್ನು ಆಚರಿಸಲು ಇದಕ್ಕಿಂತ ಉತ್ತಮವಾದ ಮಾರ್ಗವನ್ನು ಯೋಚಿಸಲಾರೆ. ಗಂಗುವನ್ನು ಭೇಟಿಯಾಗಿ... ಎಂದು ಬರೆದುಕೊಂಡಿದ್ದಾರೆ.

ಸದ್ಯ ಈ ಟೀಸರ್​ನಲ್ಲಿ ಆಲಿಯಾ ಭಟ್​​​​ ಅಭಿನಯದ ಒಂದು ಕಿರುನೋಟ ಹೊರಬಿದ್ದಿದೆ. ಅವರ ಎಲ್ಲಾ ಚಿತ್ರಗಳಿಗಿಂತಲೂ ಈ ಚಿತ್ರದಲ್ಲಿ ಭಿನ್ನ ಪಾತ್ರದಲ್ಲಿ ನಟಿಸಿದ್ದು, ನೆನಪಿನಲ್ಲಿ ಉಳಿಯಬಹುದಾದ ಪಾತ್ರವಾಗುವ ಸಾಧ್ಯತೆ ದಟ್ಟವಾಗಿದೆ.

ಬನ್ಸಾಲಿ ಮತ್ತು ಆಲಿಯಾ ನಟನೆಯ ಮೊದಲ ಚಿತ್ರ ಇದಾಗಿದ್ದು, ಕಾಮಾಟಿಪುರದ ವೇಶ್ಯೆ ಗಂಗುಬಾಯಿ ಕೋಠೆವಾಲಿ ಜೀವನದ ಸತ್ಯ ಘಟನೆ ಆಧಾರಿತ ಚಿತ್ರವಾಗಿದೆ. ಈ ಮೊದಲು ಹುಸೇನ್ ಜೈದಿ ಬರೆದಿರುವ ‘ಮಾಫಿಯಾ ಕ್ವೀನ್ಸ್​ ಆಫ್ ಮುಂಬೈ’ ಎಂಬ ಪುಸ್ತಕವನ್ನು ಸಿನಿಮಾವನ್ನಾಗಿ ಮಾಡಲಾಗಿದೆ. ಚಿತ್ರದಲ್ಲಿ ಆಲಿಯಾ ಹೊರತುಪಡಿಸಿ ಅಜಯ್ ದೇವಗನ್ ಮತ್ತು ವಿಕ್ರಾಂತ್ ಸಹ ಪ್ರಮುಖ ಪಾತ್ರದಲ್ಲಿದ್ದಾರೆ.

ಇದನ್ನೂ ಓದಿ: ಶ್ರೀದೇವಿ 3ನೇ ವರ್ಷದ ಪುಣ್ಯಸ್ಮರಣೆ..ಮೆಚ್ಚಿನ ನಟಿಯನ್ನು ಸ್ಮರಿಸಿದ ಅಭಿಮಾನಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.