ETV Bharat / sitara

ಬಿಡುಗಡೆಯಾದ ಮೊದಲ ದಿನವೇ ಬಾಲಿವುಡ್‌ನ ಗಂಗೂಬಾಯಿ ಕಾಠಿಯಾವಾಡಿ ಕಲೆಕ್ಷನ್‌ ₹10.5 ಕೋಟಿ - ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಾಠಿಯಾವಾಡಿ

ಬರಹಗಾರ ಎಸ್ ಹುಸೇನ್ ಝೈದಿ ಅವರ ಪುಸ್ತಕ ಮಾಫಿಯಾ ಕ್ವೀನ್ಸ್ ಆಫ್ ಮುಂಬೈನ ಅಧ್ಯಾಯವನ್ನು ಆಧರಿಸಿದ ಚಲನಚಿತ್ರವು 1960ರ ದಶಕದಲ್ಲಿ ಕಾಮಾಟಿಪುರದ ಅತ್ಯಂತ ಶಕ್ತಿಶಾಲಿ, ಪ್ರೀತಿಪಾತ್ರ ಮತ್ತು ಗೌರವಾನ್ವಿತ ಮೇಡಮ್‌ಗಳಲ್ಲಿ ಒಬ್ಬರಾದ ಗಂಗೂಬಾಯಿ ಪಾತ್ರಕ್ಕೆ ಆಲಿಯಾ ಜೀವ ತುಂಬಿದ್ದಾರೆ..

Gangubai Kathiawadi takes box office by storm, mints 10.5cr on opening day
ಬಿಡುಗಡೆಯಾದ ಮೊದಲ ದಿನವೇ ಬಾಲಿವುಡ್‌ನ ಗಂಗೂಬಾಯಿ ಕಾಠಿಯಾವಾಡಿ ಕಲೆಕ್ಷನ್‌ 10.5 ಕೋಟಿ ರೂ.
author img

By

Published : Feb 26, 2022, 5:11 PM IST

ಮುಂಬೈ(ಮಹಾರಾಷ್ಟ್ರ) : ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ, ನಟಿ ಆಲಿಯಾ ಭಟ್‌ ನಟನೆಯ ಗಂಗೂಬಾಯಿ ಕಾಠಿಯಾವಾಡಿ ಬಿಡುಗಡೆಯಾದ ಮೊದಲ ದಿನವೇ 10.5 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ.

ಸಿನಿಮಾ ಬಿಡುಗಡೆಯಾದ ಮೊದಲ ದಿನದ ಕಲೆಕ್ಷನ್ ಬಗ್ಗೆ ಬನ್ಸಾಲಿ ಪ್ರೊಡಕ್ಷನ್ಸ್ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಬಾಕ್ಸ್‌ ಆಫೀಸ್‌ನಲ್ಲಿ ಗಂಗೂಬಾಯಿ ಜಿಂದಾಬಾದ್ ಎಂದು ಪೋಸ್ಟ್ ಬರೆಯಲಾಗಿದೆ.

ಬರಹಗಾರ ಎಸ್ ಹುಸೇನ್ ಝೈದಿ ಅವರ ಪುಸ್ತಕ ಮಾಫಿಯಾ ಕ್ವೀನ್ಸ್ ಆಫ್ ಮುಂಬೈನ ಅಧ್ಯಾಯವನ್ನು ಆಧರಿಸಿದ ಚಲನಚಿತ್ರವು 1960ರ ದಶಕದಲ್ಲಿ ಕಾಮಾಟಿಪುರದ ಅತ್ಯಂತ ಶಕ್ತಿಶಾಲಿ, ಪ್ರೀತಿಪಾತ್ರ ಮತ್ತು ಗೌರವಾನ್ವಿತ ಮೇಡಮ್‌ಗಳಲ್ಲಿ ಒಬ್ಬರಾದ ಗಂಗೂಬಾಯಿ ಪಾತ್ರಕ್ಕೆ ಆಲಿಯಾ ಜೀವ ತುಂಬಿದ್ದಾರೆ.

ಅಜಯ್ ದೇವಗನ್, ವಿಜಯ್ ರಾಜ್, ಸೀಮಾ ಪಹ್ವಾ ಹಾಗೂ ಶಂತನು ಮಹೇಶ್ವರಿ ಕೂಡ ನಟಿಸಿರುವ ಈ ಚಿತ್ರವು ಬನ್ಸಾಲಿ ಪ್ರೊಡಕ್ಷನ್ಸ್ ಮತ್ತು ಜಯಂತಿಲಾಲ್ ಗಡಾದ ಪೆನ್ ಇಂಡಿಯಾ ಲಿಮಿಟೆಡ್‌ನ ಸಹ-ನಿರ್ಮಾಣ ಮಾಡಿದೆ.

ಇದರ ನಡುವೆ ಚಿತ್ರದ ಟ್ರೇಲರ್ ಬಿಡುಗಡೆಯಾದಾಗಿನಿಂದ ಒಂದರ ಮೇಲೊಂದು ವಿವಾದಗಳಿಂದಲೂ ಗಂಗೂಬಾಯಿ ಕಾಠಿಯಾವಾಡಿ ಸುದ್ದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಆಲಿಯಾ, ಯಾವುದೇ ವಿವಾದ ಅಥವಾ ಯಾವುದೇ ಕಾಮೆಂಟ್ ನನ್ನನ್ನು ಕಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದರು. ಸದ್ಯ ಈ ಸಿನಿಮಾ ನಿನ್ನೆ ದೇಶಾದ್ಯಂತ ಬಿಡುಗಡೆಯಾಗಿದೆ.

ಇದನ್ನೂ ಓದಿ: ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಪುನೀತ್ ದರ್ಶನ ಪಡೆದ ನಟ ವಿಜಯ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.