ಮುಂಬೈ: ಬಾಲಿವುಡ್ ನಟ-ನಟಿಯರು ಒಂದು ಹೊತ್ತು ಊಟ ಬಿಟ್ಟರೂ ವರ್ಕೌಟ್ ಮಾಡುವುದನ್ನು ಮಾತ್ರ ಎಂದಿಗೂ ಮರೆಯುವುದಿಲ್ಲ. ಬಹುತೇಕ ಬಾಲಿವುಡ್ ಸೆಲಬ್ರಿಟಿಗಳು ಮುಂಬೈನ ಬಾಂದ್ರಾದಲ್ಲಿ ನೆಲೆಸಿದ್ದು ಬಾಂದ್ರಾ ಹಾಗೂ ಜುಹು ಏರಿಯಾಗಳಲ್ಲಿನ ಜಿಮ್ಗೆ ಪ್ರತಿದಿನ ತಪ್ಪದೆ ಹೋಗುತ್ತಾರೆ.
ಇದನ್ನೂ ಓದಿ: 93 ನೇ ಆಸ್ಕರ್ ನಾಮಿನೇಷನ್ ಪಟ್ಟಿಯನ್ನು ಘೋಷಿಸಿದ ಪ್ರಿಯಾಂಕಾ...ಪತ್ನಿಗೆ ಸಾಥ್ ನೀಡಿದ ನಿಕ್ ಜೋನ್ಸ್
ಸೆಲಬ್ರಿಟಿಗಳು ಜಿಮ್ಗೆ ಹೋಗುವಾಗ ಬರುವಾಗ ಪಾಪರಾಜಿಗಳು ಅವರ ಫೋಟೋ, ವಿಡಿಯೋಗಳನ್ನು ಸೆರೆ ಹಿಡಿಯಲು ಕಾಯುತ್ತಿರುತ್ತಾರೆ. ಕೈರಾ ಅಡ್ವಾಣಿ, ನೀತು ಕಪೂರ್, ಅಮೀಷಾ ಪಟೇಲ್ನಂಥ ಸೆಲಬ್ರಿಟಿಗಳು ಇತ್ತೀಚೆಗೆ ಬಾಂದ್ರಾ ಸಮೀಪದ ಜಿಮ್ ಬಳಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಕರಿಯರ್ ವಿಚಾರಕ್ಕೆ ಬರುವುದಾದರೆ ಕೈರಾ ಅಡ್ವಾಣಿ 'ಶೇರ್ಷಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ನೀತಾ ಕಪೂರ್, 'ಜುಗ್ ಜುಗ್ ಜಿಯೋ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಅಮಿಷಾ ಪಟೇಲ್ ಕೆಲವು ದಿನಗಳಿಂದ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ.