ETV Bharat / sitara

ಮಾಜಿ ಭುವನಸುಂದರಿಗೆ ಹುಟ್ಟುಹಬ್ಬದ ಸಂಭ್ರಮ...ಪ್ರಿಯತಮನೊಂದಿಗೆ ಬರ್ತ್​ಡೇ ಆಚರಣೆ - Sushmita sen celebrating 47th Birthday

ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬಾಲಿವುಡ್​​ ನಟಿ ಸುಷ್ಮಿತಾ ಸೇನ್​​​​ಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಇಂದು ಸುಷ್ಮಿತಾ ಸೇನ್ 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

Sushmita sen turns 47
ಸುಷ್ಮಿತಾ ಸೇನ್ 47ನೇ ಹುಟ್ಟುಹಬ್ಬ
author img

By

Published : Nov 19, 2020, 8:08 AM IST

ಮಾಜಿ ಭುವನಸುಂದರಿ, ಬಾಲಿವುಡ್ ನಟಿ ಸುಷ್ಮಿತಾ ಸೇನ್​ ಇಂದು 45ನೇ ವಸಂತಕ್ಕೆ ಕಾಲಿಟ್ಟಿದ್ಧಾರೆ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸುಷ್ಮಿತಾಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಶುಭ ಕೋರಿದ್ದಾರೆ. ಸುಷ್ಮಿತಾ, ತನ್ನ ಕುಟುಂಬ ಹಾಗೂ ಪ್ರಿಯಕರ ರೊಹ್ಮನ್ ಶಾಲ್ ಜೊತೆ ನಿನ್ನೆ ರಾತ್ರಿ ಕೇಕ್ ಕಟ್ ಮಾಡುವ ಮೂಲಕ ಬರ್ತ್​ಡೇ ಆಚರಿಸಿಕೊಂಡಿದ್ದಾರೆ.

Sushmita sen turns 47
ಸುಷ್ಮಿತಾ ಸೇನ್​​​​

ಸುಷ್ಮಿತಾ ಸೇನ್ ಮೂಲತ: ಬೆಂಗಾಳಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. 19 ನವೆಂಬರ್ 1975 ರಲ್ಲಿ ಹೈದರಾಬಾದ್​​ನಲ್ಲಿ ಜನಿಸಿದ ಸುಷ್ಮಿತಾ, ಚಿಕ್ಕಂದಿನಲ್ಲೇ ಮಾಡೆಲಿಂಗ್ ವೃತ್ತಿ ಆರಿಸಿಕೊಂಡರು. 1994 ಆರಂಭದಲ್ಲಿ ಫೆಮಿನಾ ಮಿಸ್ ಇಂಡಿಯಾ ಕಿರೀಟ ಹಾಗೂ ನಂತರ ಅದೇ ವರ್ಷ ಭುವನ ಸುಂದರಿ ಸ್ಪರ್ಧೆಯಲ್ಲಿ ಗೆದ್ದರು. 1994 ರಲ್ಲಿ 'ದಸ್ತಕ್' ಚಿತ್ರದ ಮೂಲಕ ಸುಷ್ಮಿತಾ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಸಿರ್ಫ್ ತುಮ್, ಬೀವಿ ನಂ 1, ಫಿಜಾ, ಫಿಲಾಲ್, ಪೈಸಾ ವಸೂಲ್, ಬೇವಫಾ, ರಾಮ್ ಗೋಪಾಲ್ ವರ್ಮಾ ಕಿ ಆಗ್ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದರು.

Sushmita sen turns 47
1994 ರಲ್ಲಿ ಭುವನ ಸುಂದರಿ ಪಟ್ಟ

2015 ರಲ್ಲಿ 'ನಿರ್ಬಾಕ್' ಎಂಬ ಬೆಂಗಾಳಿ ಸಿನಿಮಾದಲ್ಲಿ ನಟಿಸಿದ ನಂತರ ಸುಷ್ಮಿತಾ ಮತ್ತೆ ಯಾವ ಚಿತ್ರಗಳಲ್ಲೂ ನಟಿಸಲಿಲ್ಲ. ಆ್ಯಕ್ಟಿಂಗ್​​​ನಿಂದ ದೂರವೇ ಇರುವ ಈ ಭುವನ ಸುಂದರಿ ಸಮಾಜಮುಖಿ ಕಾರ್ಯಗಳಲ್ಲಿ ಬ್ಯುಸಿ ಇದ್ದಾರೆ. 2000 ರಲ್ಲಿ ರೀನಾ ಹಾಗೂ 2010 ರಲ್ಲಿ ಅಲಿಷಾ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದ ಸುಷ್ಮಿತಾ ಆ ಹೆಣ್ಣು ಮಕ್ಕಳ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಸುಷ್ಮಿತಾ ವೈವಾಹಿಕ ವಿಚಾರಕ್ಕೆ ಬರುವುದಾದರೆ ಆಕೆ ಇನ್ನೂ ಮದುವೆಯಾಗಿಲ್ಲ. ಆದರೆ ತನಗಿಂತ 16 ವರ್ಷ ಕಿರಿಯ ಮಾಡೆಲ್ ರೊಹ್ಮನ್ ಶಾಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಮದುವೆಯಾಗಲಿದ್ದೇವೆ ಎಂದು ಈ ಜೋಡಿ ಬಹಳ ವರ್ಷಗಳ ಹಿಂದೆಯೇ ಹೇಳಿಕೊಂಡಿತ್ತು. ತನ್ನ ಪ್ರಿಯಕರನೊಂದಿಗೆ ವರ್ಕೌಟ್ ಮಾಡುತ್ತಿರುವ ಅನೇಕ ಫೋಟೋ, ವಿಡಿಯೋಗಳನ್ನು ಸುಷ್ಮಿತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಆಗ್ಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.

Sushmita sen turns 47
ಪ್ರಿಯತಮನೊಂದಿಗೆ ಸುಷ್ಮಿತಾ ಸೇನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.