ETV Bharat / sitara

ದಕ್ಷಿಣ ಆಫ್ರಿಕಾಕ್ಕೆ ಪಲಾಯನ ಮಾಡಲು ನಟ ಅರ್ಜುನ್ ರಾಂಪಾಲ್​ ತಯಾರಿ?

author img

By

Published : Apr 2, 2021, 10:42 PM IST

ಬಾಲಿವುಡ್​ ಡ್ರಗ್ಸ್​ ಪ್ರಕರಣದಲ್ಲಿ ವಿಚಾರಣೆಗೊಳಪಟ್ಟಿರುವ ನಟ ಅರ್ಜುನ್​ ರಾಂಪಾಲ್​ ಇದೀಗ ದಕ್ಷಿಣ ಆಫ್ರಿಕಾಕ್ಕೆ ಪಲಾಯನ ಮಾಡಲು ತಯಾರಿ ನಡೆಸಿದ್ದಾರೆಂದು ಎನ್​ಸಿಬಿ ಆರೋಪಿಸಿದೆ.

Actor Arjun Rampal
Actor Arjun Rampal

ಮುಂಬೈ: ಡ್ರಗ್ಸ್​​ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಬಾಲಿವುಡ್​ ನಟ ಅರ್ಜುನ್​ ರಾಂಪಾಲ್​ ದಕ್ಷಿಣ ಆಫ್ರಿಕಾಕ್ಕೆ ತೆರಳಲು ತಯಾರಿ ನಡೆಸಿದ್ದಾರೆ ಎಂದು ಎನ್​​ಸಿಬಿ ಹೇಳಿಕೊಂಡಿದೆ.

ಈಗಾಗಲೇ ಎನ್​ಸಿಬಿಯಿಂದ ಎರಡು ಸಲ ವಿಚಾರಣೆಗೊಳಪಟ್ಟಿರುವ ನಟ ರಾಂಪಾಲ್​ಗೆ ಕ್ಲೀನ್​ ಚಿಟ್​ ನೀಡಿಲ್ಲ. ಬದಲಾಗಿ ಚಾರ್ಜ್​ಶೀಟ್​ ಸಲ್ಲಿಕೆ ಮಾಡಲಾಗಿದ್ದು, ಇದೀಗ ಅವರು ದಕ್ಷಿಣ ಆಫ್ರಿಕಾಗೆ ಪಲಾಯನ ಮಾಡುವ ತಯಾರಿಯಲ್ಲಿದ್ದಾರೆ ಎಂದು ಅಲ್ಲಿನ ರಾಯಭಾರಿ ಕಚೇರಿಗೆ ಪತ್ರ ಬರೆದು ಮಾಹಿತಿ ತಿಳಿಸಿದೆ.

ನ್ಯಾಯಾಲಯದಲ್ಲಿ 50 ಸಾವಿರ ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ ಮಾಡಲಾಗಿದ್ದು, ಇದರಲ್ಲಿ ಸುಶಾಂತ್​ ಸಿಂಗ್​ ಗೆಳತಿ ರಿಯಾ ಕೂಡ ಸೇರಿದ್ದಾರೆ. ಬಾಲಿವುಡ್​ನಲ್ಲಿ ಅಪಾರ ಪ್ರಮಾಣದಲ್ಲಿ ಡ್ರಗ್​ ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ನಟ ರಾಂಪಾಲ್​​ ಅವರ ಮುಂಬೈ ನಿವಾಸ ಹಾಗೂ ಕಚೇರಿ ಮೇಲೆ ಎನ್​ಸಿಬಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಎಲೆಕ್ಟ್ರಾನಿಕ್ ಗ್ಯಾಜೆಟ್​ಗಳಾದ ಲ್ಯಾಪ್ ಟಾಪ್, ಮೊಬೈಲ್ ಫೋನ್, ಟ್ಯಾಬ್ಲೆಟ್ಸ್​ ವಶಪಡಿಸಿಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.