ವಾಷಿಂಗ್ಟನ್: 'ಬ್ಲ್ಯಾಕ್ ಪ್ಯಾಂಥರ್' ಸೂಪರ್ ಹೀರೋ ಸಿನಿಮಾ ಖ್ಯಾತಿಯ ನಟ ಚಾಡ್ವಿಕ್ ಬೋಸ್ಮನ್ ಅವರ 44ನೇ ಹುಟ್ಟುಹಬ್ಬದ ಪ್ರಯುಕ್ತ ವಾಲ್ಟ್ ಡಿಸ್ನಿ ಕಂಪನಿ, ಭಾನುವಾರ ಅವರನ್ನು ನೆನಪಿಸಿಕೊಂಡಿದೆ.
ದಿವಂಗತ ನಟನಿಗೆ ಗೌರವ ನೀಡುವ ಸಲುವಾಗಿ ಡಿಸ್ನಿ + ನಲ್ಲಿ 'ಬ್ಲ್ಯಾಕ್ ಪ್ಯಾಂಥರ್' ಸಿನಿಮಾದ ಆರಂಭಿಕ ಸಾಲುಗಳನ್ನು ಹಾಕಲಾಗಿತ್ತು ಎಂದು ದಿ ಹಾಲಿವುಡ್ ರಿಪೋರ್ಟರ್ ವರದಿ ಮಾಡಿದೆ.
ಮಾರ್ವೆಲ್ ಸ್ಟುಡಿಯೋಸ್ ಕೂಡ ತನ್ನ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, "ಲಾಂಗ್ ಲೈವ್ ದಿ ಕಿಂಗ್. # ವಕಾಂಡಾ ಫಾರ್ಯವರ್" ಎಂದು ಬರೆದುಕೊಂಡಿದೆ. ಮಾರ್ವೆಲ್ ಕ್ರೆಡಿಟ್ ದೃಶ್ಯವು ಬೋಸ್ಮನ್ ಅವರ ಕಿಂಗ್ ಟಿ ಚಲ್ಲಾ ಎಂಬ ಪ್ರಸಿದ್ಧ ಕೃತಿಯ 30 ಸೆಕೆಂಡುಗಳ ಸಂಗ್ರಹವಾಗಿದೆ.
ಜಮ್ಮು-ಕಾಶ್ಮೀರ.. ಹೊಸ ಕಾನೂನಿನಡಿ ನಿವೃತ್ತಿಯಾಗುತ್ತಿರುವ ಜೆಕೆಬೋಸ್ ಉದ್ಯೋಗಿ
"# ಬ್ಲ್ಯಾಕ್ಪ್ಯಾಂಥರ್ನ ಎಲ್ಲ ಅಭಿಮಾನಿಗಳು ಇಂದು ರಾತ್ರಿ # ಡಿಸ್ನಿಪ್ಲಸ್ನಲ್ಲಿ ಚಲನಚಿತ್ರವನ್ನು ವೀಕ್ಷಿಸಿ, ಅವರಿಗೆ ವಿಶೇಷ ಗೌರವ ನೀಡಲು ಮತ್ತು ಈ ಮೂಲಕ ಅವರು ನಮ್ಮ ನಿಮ್ಮೆಲ್ಲರ ಹೃದಯಕ್ಕೆ ಇನ್ನೂ ಹತ್ತಿರವಾಗಲಿ" ಎಂದು ಡಿಸ್ನಿ ಅಧ್ಯಕ್ಷ ಬಾಬ್ ಇಗರ್ ಹೇಳಿದ್ದಾರೆ ಎಂದು ಹಾಲಿವುಡ್ ರಿಪೋರ್ಟರ್ ಹೇಳಿದೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಚಾಡ್ವಿಕ್ ಬೋಸ್ಮನ್ ಅವರು ಆ.28ರಂದು ಲಾಸ್ ಏಂಜಲೀಸ್ನ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದರು.