ETV Bharat / sitara

'ದಿಲ್ ಬೇಚಾರ' ಟ್ರೇಲರ್​​​​​ನಲ್ಲಿ ಸುಶಾಂತ್​​ ಡೈಲಾಗ್​​​​​​ಗೆ ಎಮೋಷನಲ್ ಆದ ನೆಟಿಜನ್ಸ್​​​ - ಸುಶಾಂತ್ ಸಿಂಗ್ ರಜಪೂತ್ ಕಡೆಯ ಸಿನಿಮಾ

ಜುಲೈ 24 ರಂದು ಡಿಸ್ನಿ ಪ್ಲಸ್​ ಹಾಟ್​​ಸ್ಟಾರ್​​ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಬಹುನಿರೀಕ್ಷಿತ 'ದಿಲ್ ಬೇಚಾರ' ಪ್ರಸಾರವಾಗಲಿದ್ದು ಇಂದು ಟ್ರೇಲರ್ ಬಿಡುಗಡೆಯಾಗಿದೆ. 6 ಗಂಟೆಗಳಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಟ್ರೇಲರ್ ನೋಡಿದ್ದಾರೆ.

dil bechara traile reaction
'ದಿಲ್ ಬೇಚಾರ'
author img

By

Published : Jul 7, 2020, 4:28 PM IST

ಸುಶಾಂತ್ ಸಿಂಗ್ ರಜಪೂತ್ ಅಭಿನಯದ 'ದಿಲ್ ಬೇಚಾರ' ಚಿತ್ರದ ಟ್ರೇಲರನ್ನು ಡಿಸ್ನಿ ಪ್ಲಸ್​ ಹಾಟ್​​ಸ್ಟಾರ್​​ ಬಿಡುಗಡೆ ಮಾಡಿದ್ದು ಟ್ರೇಲರ್​​ನಲ್ಲಿ ಸುಶಾಂತ್ ಡೈಲಾಗ್ ಕೇಳಿದ ನೆಟಿಜನ್ಸ್ ಸಂತೋಷದೊಂದಿಗೆ ದು:ಖ ಕೂಡಾ ವ್ಯಕ್ತಪಡಿಸಿದ್ದಾರೆ.

  • " class="align-text-top noRightClick twitterSection" data="">

ಜಾನ್ ಗ್ರೀನ್ ಅವರು ಬರೆದ 'Fault In Our Stars' ಪುಸ್ತಕವನ್ನಾಧರಿಸಿ 'ದಿಲ್ ಬೇಚಾರ' ಚಿತ್ರವನ್ನು ಮಾಡಲಾಗಿದೆ. ಪ್ರೀತಿ ಹಾಗೂ ಜೀವನದ ಬಗ್ಗೆ ಸುಶಾಂತ್ ಹೇಳುವ ಡೈಲಾಗ್ ಬಹಳ ಚೆನ್ನಾಗಿದೆ. 'ಜೀವನದಲ್ಲಿ ಹುಟ್ಟು ಸಾವನ್ನು ನಾವು ನಿರ್ಧಾರ ಮಾಡಲು ಸಾಧ್ಯವಿಲ್ಲ. ಆದರೆ ನಾವು ಹೇಗೆ ಬದುಕಬೇಕು ಎಂಬುದನ್ನು ಮಾತ್ರ ನಿರ್ಧಾರ ಮಾಡಬಹುದು' ಎಂದು ಸುಶಾಂತ್ ಹೇಳಿರುವ ಡೈಲಾಗ್ ಎಲ್ಲರಿಗೂ ಬಹಳ ಇಷ್ಟವಾಗಿದೆ.

ಚಿತ್ರದಲ್ಲಿ ಸುಶಾಂತ್ ಕಾಲೇಜು ಹುಡುಗನ ಪಾತ್ರದಲ್ಲಿ ನಟಿಸಿದ್ದರೆ ಸಂಜನಾ ಸಂಘಿ ನಾಚಿಕೆ ಸ್ವಭಾವುಳ್ಳ, ಕ್ಯಾನ್ಸರ್​​​ಪೀಡಿತ ಹುಡುಗಿಯಾಗಿ ನಟಿಸಿದ್ಧಾರೆ. ಕ್ಯಾನ್ಸರ್ ಪೀಡಿತ ಯುವತಿಯೊಂದಿಗೆ ಪ್ರೀತಿಯಲ್ಲಿ ಬೀಳುವ ಯುವಕನಾಗಿ ಸುಶಾಂತ್ ನಟನೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಟ್ರೇಲರ್​​ ಬಿಡುಗಡೆಯಾಗಿ 6 ಗಂಟೆ ಅವಧಿಯಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಬಾಲಿವುಡ್​​​ ಸೆಲಬ್ರಿಟಿಗಳು ಸೇರಿ ನೆಟಿಜನ್​​ಗಳಿಂದ ಟ್ರೇಲರ್​​​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರವನ್ನು ಫಾಕ್ಸ್​ ಸ್ಟಾರ್ ಬ್ಯಾನರ್​ ಅಡಿ ಮುಖೇಶ್ ಛಾಬ್ರಾ ನಿರ್ದೇಶಿಸಿದ್ದು ಜುಲೈ 24 ರಂದು ಡಿಸ್ನಿ ಪ್ಲಸ್​ ಹಾಟ್​​ಸ್ಟಾರ್​​ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.