ETV Bharat / sitara

ಬಿಗ್​ ಬಜೆಟ್​ ಚಿತ್ರಗಳ ಬಿಡುಗಡೆ ದಿನಾಂಕ ಪ್ರಕಟ.. ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸೋ ಚಿತ್ರಗಳಿವು.. - ಅಕ್ಷಯ್​ ಕುಮಾರ್ ಅಭಿನಯದ ರಕ್ಷಾ ಬಂಧನ್

ರಕ್ಷಾ ಬಂಧನ್ ಹಾಗೂ ಆದಿಪುರುಷ್ ಬಿಡುಗಡೆ ದಿನಾಂಕ ಘೋಷಣೆ ಆಗಿವೆ. ಬಾಲಿವುಡ್​ ನಿರ್ದೇಶಕ ಓಂ ಪ್ರಕಾಶ್ ರಾವತ್​ ಅವರು ಆದಿಪುರುಷ್​ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಕೃತಿ ಸನೋನ್, ಸೈಫ್ ಅಲಿ ಖಾನ್ ಸೇರಿ ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿದೆ..

Clash of titans: Prabhas to lock horns with Akshay Kumar at the box office

author img

By

Published : Sep 27, 2021, 8:23 PM IST

Updated : Sep 28, 2021, 12:40 PM IST

ಮುಂಬೈ : ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಮಾಡಿಕೊಡುತ್ತಿದ್ದಂತೆ ಸಿನಿಮಾ ರಂಗದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಕೊರೊನಾ ಭೀತಿಯಿಂದ ಜನರು ಹೊರ ಬರುತ್ತಿದ್ದಂತೆ, ಬಿಗ್​ ಬಜೆಟ್​ ಸಿನಿಮಾಗಳ ನಿರ್ದೇಶಕರು ತಮ್ಮ ಚಿತ್ರಗಳನ್ನ ಬಿಡುಗಡೆ ಮಾಡಲು ಮುಂದೆ ಬಂದಿದ್ದಾರೆ. ಅವುಗಳಲ್ಲಿ ಈ ಚಿತ್ರಗಳೂ ಸೇರಿವೆ..

ನಿನ್ನೆಯಷ್ಟೇ ಬಾಲಿವುಡ್​ನ ಹತ್ತು ಹಲವು ಚಿತ್ರಗಳು ಬಿಡುಗಡೆಯ ದಿನಾಂಕ ಘೋಷಿಸಿವೆ. ಅವುಗಳಲ್ಲಿ ಅಕ್ಷಯ್​ ಕುಮಾರ್ ಅಭಿನಯದ ರಕ್ಷಾ ಬಂಧನ್ ಹಾಗೂ ಪ್ರಭಾಸ್ ಅವರ ಪ್ಯಾನ್ ಇಂಡಿಯಾ ಸಿನಿಮಾ ಆದಿಪುರುಷ್ ಒಂದೇ ದಿನದಂದು ಬಿಡುಗಡೆಯಾಗಲಿವೆ. ಈ ಮೂಲಕ ಬಿಗ್​ ಸ್ಕ್ರೀನ್​ ಮೇಲೆ ಇವರೆಡು ಚಿತ್ರಗಗಳು ಪೈಪೋಟಿ ಮಾಡಲಿವೆ. ಆದರೆ, ಯಾವ ಚಿತ್ರಕ್ಕೆ ಯಾವ ಪ್ರಮಾಣದಲ್ಲಿ ರೆಸ್ಪಾನ್ಸ್‌ ಸಿಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಬರುವ ಸಂಕ್ರಾಂತಿ ಹಬ್ಬಕ್ಕೆ ಇವೆರಡು ಚಿತ್ರಗಳು ಒಂದೇ ದಿನ ತೆರೆಗೆ ಅಪ್ಪಳಿಸಲಿವೆ ಎಂದು ಈ ಬಗ್ಗೆ ಚಿತ್ರತಂಡ ಟ್ವೀಟ್​ ಮಾಡುವ ಮೂಲಕ ಖಚಿಪಡಿಸಿವೆ. ಸ್ಟಾರ್​ ಹೀರೋಗಳ ಚಿತ್ರಗಳು ಒಂದೇ ದಿನ ರಿಲೀಸ್ ಮಾಡುವುದಾಗಿ ಹೇಳುತ್ತಿದ್ದಂತೆ ಯಾರ ಸಿನಿಮಾ ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಲಿದೆ ಅನ್ನೋ ಲೆಕ್ಕಾಚಾರ ಈಗಿನಿಂದಲೇ ಆರಂಭವಾಗಿದೆ.

ಬಾಲಿವುಡ್​ ನಿರ್ದೇಶಕ ಓಂಪ್ರಕಾಶ್ ರಾವತ್​ ಅವರು ಆದಿಪುರುಷ್​ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಕೃತಿ ಸನೋನ್, ಸೈಫ್ ಅಲಿ ಖಾನ್ ಸೇರಿ ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿದೆ.

Last Updated : Sep 28, 2021, 12:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.