ನವದೆಹಲಿ : ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬ್ರಾಹ್ಮಣ ಪಂಡಿತರ ಹತ್ಯಾಕಾಂಡದ ಕುರಿತು ಚಿತ್ರಿಸಲಾಗಿದೆ. ಈ ಚಿತ್ರ ಸೆನ್ಸಾರ್ ಮಾಡದೆಯೇ ಬಿಡುಗಡೆ ಮಾಡಲಾಗಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಇದನ್ನು ಸಿನಿಮಾ ನಿರ್ದೇಶಕ ವಿವೇಕ್ ಸತ್ಯರಂಜನ್ ಅಗ್ನಿಹೋತ್ರಿ ತಳ್ಳಿ ಹಾಕಿದ್ದಾರೆ.
ಸಿನಿಮಾ ಸಿದ್ಧವಾದ ಬಳಿಕ ಸೆನ್ಸಾರ್ ಮಂಡಳಿಯು ಯಾವುದೇ ದೃಶ್ಯಗಳಿಗೆ ತಡೆ ಹಾಕದೇ ಒಪ್ಪಿಕೊಂಡಿದೆ. ನಿರ್ದೇಶಕ ವಿವೇಕ್ ಅಗ್ನೊಹೋತ್ರಿ ಅವರು ಮಂಡಳಿಯ ಸದಸ್ಯರಾಗಿರುವುದು ಇದಕ್ಕೆ ಕಾರಣ. ಅಲ್ಲದೇ ಕೇಂದ್ರ ಸರ್ಕಾರವೂ ಕೂಡ ಇದಕ್ಕೆ ಬೆಂಬಲ ನೀಡಿದೆ ಎಂಬೆಲ್ಲಾ ಆರೋಪ ಕೇಳಿ ಬಂದಿವೆ.
-
Please stop spreading fake news, like always. Take a little break. At least to respect the dead. https://t.co/hZflsTUbOk pic.twitter.com/yvOKhGieDX
— Vivek Ranjan Agnihotri (@vivekagnihotri) March 20, 2022 " class="align-text-top noRightClick twitterSection" data="
">Please stop spreading fake news, like always. Take a little break. At least to respect the dead. https://t.co/hZflsTUbOk pic.twitter.com/yvOKhGieDX
— Vivek Ranjan Agnihotri (@vivekagnihotri) March 20, 2022Please stop spreading fake news, like always. Take a little break. At least to respect the dead. https://t.co/hZflsTUbOk pic.twitter.com/yvOKhGieDX
— Vivek Ranjan Agnihotri (@vivekagnihotri) March 20, 2022
ಈ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ವಿವೇಕ್ ಅಗ್ನಿಹೋತ್ರಿ ಅವರು, ಸಿನಿಮಾದ ಕೆಲ ದೃಶ್ಯ ಮತ್ತು ಪದಗಳನ್ನು ತೆಗೆದು ಹಾಕಲು ಸೆನ್ಸಾರ್ ಮಂಡಳಿ ಸೂಚಿಸಿತ್ತು. ಅದರಂತೆಯೇ ಸಿನಿಮಾವನ್ನು ರೂಪಿಸಲಾಗಿದೆ. ಮೊದಲು ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ. ಅಲ್ಲದೇ, ಸತ್ತವರ ಬಗ್ಗೆ ಕನಿಷ್ಠ ಮರುಕ, ಗೌರವ ಸೂಚಿಸಿ ಎಂದು ಮನವಿ ಮಾಡಿದ್ದಾರೆ.
ಸೆನ್ಸಾರ್ ಮಂಡಳಿ ಸಿನಿಮಾಕ್ಕೆ 7 ದೃಶ್ಯಗಳಿಗೆ ಕತ್ತರಿ ಹಾಕಿದೆ. ಅಲ್ಲದೇ, 'ಎ' ಪ್ರಮಾಣಪತ್ರ ನೀಡಿದೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
-
IMPORTANT & URGENT:
— Vivek Ranjan Agnihotri (@vivekagnihotri) March 18, 2022 " class="align-text-top noRightClick twitterSection" data="
Some communal groups are trying to put pressure on New Zealand Censor to ban #TheKashmirFiles. I request all Indians to be united and oppose this undemocratic tactic by radicals with utmost humility and release this film about HUMANITY and HUMAN RIGHTS. #FOE pic.twitter.com/bXX1TxoXYN
">IMPORTANT & URGENT:
— Vivek Ranjan Agnihotri (@vivekagnihotri) March 18, 2022
Some communal groups are trying to put pressure on New Zealand Censor to ban #TheKashmirFiles. I request all Indians to be united and oppose this undemocratic tactic by radicals with utmost humility and release this film about HUMANITY and HUMAN RIGHTS. #FOE pic.twitter.com/bXX1TxoXYNIMPORTANT & URGENT:
— Vivek Ranjan Agnihotri (@vivekagnihotri) March 18, 2022
Some communal groups are trying to put pressure on New Zealand Censor to ban #TheKashmirFiles. I request all Indians to be united and oppose this undemocratic tactic by radicals with utmost humility and release this film about HUMANITY and HUMAN RIGHTS. #FOE pic.twitter.com/bXX1TxoXYN
ನ್ಯೂಜಿಲ್ಯಾಂಡ್ನಲ್ಲಿ ಸಿನಿಮಾಗೆ ತಡೆ : ಇನ್ನು ವಿಶ್ವಾದ್ಯಂತ ಸಿನಿಮಾ ಪ್ರದರ್ಶನ ಕಾಣುತ್ತಿರುವ ಮಧ್ಯೆಯೇ ನ್ಯೂಜಿಲ್ಯಾಂಡ್ನಲ್ಲಿ ಸಿನಿಮಾ ಪ್ರದರ್ಶನಕ್ಕೆ ತಡೆ ಕೋರಲಾಗಿದೆ. ಚಿತ್ರ ಏಕ ಸಮುದಾಯದ ಪರವಾಗಿ ಮತ್ತು ಇನ್ನೊಂದು ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಹೀಗಾಗಿ, ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿ ಒಂದು ಸಮುದಾಯದವರು ಅಲ್ಲಿನ ಕೋರ್ಟ್ ಮೊರೆ ಹೋಗಿದ್ದಾರೆ.
ಇದನ್ನು ಆಲಿಸಿದ ಕೋರ್ಟ್ ಸಿನಿಮಾಕ್ಕೆ ತಾತ್ಕಾಲಿಕ ತಡೆ ನೀಡಿದೆ. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅಲ್ಲಿನ ಹಿಂದು ನಿವಾಸಿಗಳು ಸಿನಿಮಾವು ಸತ್ಯವನ್ನು ನಿರೂಪಿಸಿದೆ. ಇಂತಹ ಸತ್ಯಯಾಧಾರಿತ ಸಿನಿಮಾಕ್ಕೆ ತಡೆಯೊಡ್ಡಿದ್ದು ಸರಿಯಲ್ಲ ಎಂದು ಹಿಂದುಪರರು ಸಾಮಾಜಿಕ ಜಾಲತಾಣದಲ್ಲಿ ಸಿನಿಮಾವನ್ನು ಬೆಂಬಲಿಸಬೇಕು ಎಂದು ಅಭಿಯಾನ ಶುರು ಮಾಡಿದ್ದಾರೆ.
ಓದಿ: ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಬೆಳ್ಳಿತೆರೆ ಮೇಲೆ ಮಿಂಚಿದ ನೈಜ ಕಥೆಯಾಧಾರಿತ ಸಿನಿಮಾಗಳಿವು..