ಹೈದರಾಬಾದ್ : ಜನಪ್ರಿಯ ವೆಬ್ ಸೀರಿಸ್ ‘ಬಾಂಬೆ ಬೇಗಮ್ಸ್’ ಸರಣಿಯ ಮುಂದುವರಿದ ಭಾಗದ ಟ್ರೈಲರ್ ಬಿಡುಗಡೆಯಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಸೀರಿಸ್ನಲ್ಲಿ ಪೂಜಾ ಭಟ್, ಗೋಸ್ವಾಮಿ, ಅಮೃತ್ ಸುಭಾಷ್ ಮತ್ತು ರಾಹುಲ್ ಬೋಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ಸೀರಿಸ್‌ನ ‘ಲಿಫ್ಟಿಕ್ ಅಂಡರ್ ಮೈ ಬುರ್ಖಾ’ ಖ್ಯಾತಿಯ ಅಂಲಕೃತ ಶ್ರೀವಾಸ್ತವ ನಿರ್ದೇಶಿಸಿದ್ದಾರೆ. ಟ್ರೈಲರ್ನಲ್ಲಿ 5 ಮಹಿಳೆಯರ ಸುತ್ತ ನಡೆಸುವ ಥ್ರಿಲಿಂಗ್ ಕಥೆ ಅಂತಾ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ವಿಭಿನ್ನ ಕುಟುಂಬಗಳಿಂದ ಬಂದಂತಹ ಐವರು ಮಹಿಳೆಯರು ಜೀವನದಲ್ಲಿ ಎದುರಿಸುವ ಹೋರಾಟದ ಕ್ಷಣಗಳ ಮನ ಮುಟ್ಟುವಂತೆ ಚಿತ್ರೀಕರಿಸಲಾಗಿದೆ.
- " class="align-text-top noRightClick twitterSection" data="">
ಪ್ರಸ್ತುತ ಕಥೆಯೂ ಪ್ರೀತಿಯಿಂದ ಮೋಸಹೋದ ಒಡೆದ ಹೃದಯಗಳ ಕಥೆಯಾಗಿದೆ. ನಗರ ಮಹಿಳೆಯರ ಪ್ರತಿಬಿಂಬಿಸುವ ಹಾಗೂ ಅವರ ಜಗತ್ತಿನ ನೈಜತೆಯನ್ನು ಪ್ರತಿನಿಧಿಸುತ್ತದೆ. ಮಾರ್ಚ್ 8ರ ಅಂತಾರಾಷ್ಟ್ರೀಯ ಮಹಿಳಾದಿನದಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಬಾಂಬೆ ಬೇಗಮ್ಸ್ ಸದ್ಯ ವೆಬ್ ಲೋಕದಲ್ಲಿ ಸದ್ದು ಮಾಡುತ್ತಿದೆ.
ಇದನ್ನೂ ಓದಿ: 'ಕಿರಾತಕ' ಚಿತ್ರದ ನಟಿ ಓವಿಯಾ ವಿರುದ್ಧ ಬಿಜೆಪಿ ದೂರು.. ಕಾರಣ!?