ಬಾಲಿವುಡ್ 'ಕಬೀರ್ ಸಿಂಗ್' ಸಿನಿಮಾ ಟ್ರೇಲರ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ. 48 ಗಂಟೆಯಲ್ಲಿ 2 ಕೋಟಿ ವೀಕ್ಷಣೆಯಾಗಿ ಟಾಪ್ ಟ್ರೆಂಡಿಂಗ್ನಲ್ಲಿದೆ.
ಟಾಲಿವುಡ್ನ 'ಅರ್ಜುನ್ ರೆಡ್ಡಿ' ಸಿನಿಮಾ ಬಿಟೌನ್ಗೆ 'ಕಬೀರ್ ಸಿಂಗ್' ಆಗಿ ರಿಮೇಕ್ ಆಗುತ್ತಿದೆ. ಅರ್ಜುನ್ ರೆಡ್ಡಿ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ಅವರೇ ಕಬೀರ್ ಸಿಂಗ್ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸ್ವಮೇಕ್ ಚಿತ್ರದಲ್ಲಿ ವಿಜಯ್ ದೇವರಕೊಂಡ ನಿಭಾಯಿಸಿದ್ದ ಪಾತ್ರದಲ್ಲಿ ಶಾಹೀದ್ ಕಪೂರ್ ನಟಿಸುತ್ತಿದ್ದಾರೆ. ನಟಿ ಕೈರಾ ಅದ್ವಾನಿ ಶಾಹೀದ್ಗೆ ಜತೆಯಾಗಿ ನಟಿಸುತ್ತಿದ್ದಾರೆ.
- " class="align-text-top noRightClick twitterSection" data="">
ಸದ್ಯ ರಿಲೀಸ್ ಆಗಿರುವ ಕಬೀರ್ ಸಿಂಗ್ ಟ್ರೇಲರ್ನಲ್ಲಿ ಶಾಹೀದ್ ಕಪೂರ್ ರಫ್ ಆ್ಯಂಡ್ ಟಪ್ ಆಗಿ ಕಾಣಿಸಿಕೊಂಡಿದ್ದಾರೆ. ದೇವರಕೊಂಡನಂತೆ ರೌಡಿ ಲುಕ್ನಲ್ಲಿ ಶಾಹೀದ್ ಮಿಂಚಿದ್ದಾರೆ. ರಾ ಲುಕ್ ಶಾಹೀದ್ಗೆ ಸಖತ್ ಸೂಟ್ ಆಗಿದೆ. ಎರಡು ನಿಮಿಷದ ಟ್ರೇಲರ್ನಲ್ಲಿರುವ ಸಂಭಾಷಣೆ, ಕೆಲ ಸೀನ್ಗಳು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸುತ್ತಿದೆ. ಜೂನ್ 21 ರಂದು ತೆರೆ ಮೇಲೆ ಕಬೀರ್ ಸಿಂಗ್ ಅಬ್ಬರ ಶುರುವಾಗಲಿದೆ.