ETV Bharat / sitara

ದೇಶಭಕ್ತಿ ಪ್ರಶ್ನಿಸಿದ ಪಾಕ್​ ಮಹಿಳೆಗೆ ಪಿಗ್ಗಿ ಖಡಕ್ ಉತ್ತರ - ಪುಲ್ವಾಮಾ ದಾಳಿ ಪ್ರತಿಕಾರ

ಪಾಕ್​ನಲ್ಲಿ ನನಗೆ ತುಂಬಾ ಅಭಿಮಾನಿಗಳಿದ್ದಾರೆ. ಯುದ್ಧದಿಂದ ನಾವು ಏನನ್ನೂ ಪಡೆಯಲು ಸಾಧ್ಯವಿಲ್ಲ. ಆದರೆ, ನಾನು ಭಾರತೀಯಳು. ನಾನು ದೇಶಭಕ್ತೆ, ಆದ್ದರಿಂದ ನಮ್ಮ ಸೈನಿಕರಿಗೆ ಧನ್ಯವಾದ ಹೇಳಿದ್ದೆ ಎಂದಿದ್ದಾರೆ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ.

Priyanka
author img

By

Published : Aug 12, 2019, 11:57 AM IST

Updated : Aug 12, 2019, 1:27 PM IST

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ದೇಶಭಕ್ತಿ ಪ್ರಶ್ನಿಸಿದ ಪಾಕಿಸ್ತಾನಿ ಮಹಿಳೆಯ ಬಾಯಿ ಮುಚ್ಚಿಸಿದ್ದಾರೆ. ಇತ್ತೀಚಿಗಷ್ಟೇ ಲಾಸ್​ ಏಂಜಲೀಸ್​​ಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಪಾಲ್ಗೊಂಡಿದ್ದರು. ಈ ವೇಳೆ ಪಾಕ್​​ನ ಮಹಿಳೆವೋರ್ವಳು 'ವಿಶ್ವಸಂಸ್ಥೆಯ ಸೌಹಾರ್ದತೆಯ ರಾಯಭಾರಿ ಆಗಿರುವ ನೀವು ಪಾಕ್​ ಮೇಲೆ ನ್ಯೂಕ್ಲಿಯರ್​ ದಾಳಿಗೆ ಬಯಸುತ್ತಿದ್ದೀರಿ. ನಮ್ಮ ದೇಶದಲ್ಲಿಯೂ ನಿಮ್ಮ ಅಭಿಮಾನಿಗಳಿದ್ದಾರೆ' ಎಂದಿದ್ದಳು.

ಇದಕ್ಕೆ ಖಡಕ್ ಆಗಿಯೇ ಉತ್ತರಿಸಿರುವ ಪಿಗ್ಗಿ, ನೀವು ಹೇಳುವುದು ನಂಗೆ ಕೇಳಿಸಿತು. ಪಾಕ್​ನಲ್ಲಿ ನನಗೆ ತುಂಬಾ ಅಭಿಮಾನಿಗಳಿದ್ದಾರೆ. ಯುದ್ಧದಿಂದ ನಾವು ಏನನ್ನೂ ಪಡೆಯಲು ಸಾಧ್ಯವಿಲ್ಲ. ಆದರೆ, ನಾನು ಭಾರತೀಯಳು. ನಾನು ದೇಶಭಕ್ತೆ, ಆದ್ದರಿಂದ ನಮ್ಮ ಸೈನಿಕರಿಗೆ ಧನ್ಯವಾದ ಹೇಳಿದ್ದೆ ಎಂದಿದ್ದಾರೆ.

ಪುಲ್ವಾಮಾ ದಾಳಿ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಾಕೋಟ್​​ ಮೇಲೆ ಏರ್​ ಸ್ಟ್ರೈಕ್ ನಡೆಸಿದ ಭಾರತೀಯ ಸೇನೆಗೆ ಪ್ರಿಯಾಂಕಾ ಅಭಿನಂದಿಸಿದ್ದರು.

ಪಿಗ್ಗಿಯ ಈ ನಡೆ ಖಂಡಿಸಿದ ಕೆಲವರು ವಿಶ್ವಸಂಸ್ಥೆಯ ಸೌಹಾರ್ದತೆಯ ರಾಯಭಾರಿ ಹುದ್ದೆಯಿಂದ ಇವರನ್ನು ಕೈ ಬಿಡಬೇಕೆಂದು ಒತ್ತಾಯಿಸಿದ್ದರು. ಆದರೆ, ಈ ಬಗ್ಗೆ ವಿಶ್ವಸಂಸ್ಥೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Intro:Body:Conclusion:
Last Updated : Aug 12, 2019, 1:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.