ETV Bharat / sitara

'ಬಾಲಿವುಡ್​ ಬಾರ್ಬಿ' Katrina ಕೈಫ್​ಗೆ Birthday ಸಂಭ್ರಮ - Katrina Kaif and Salman Khan

ಇಂದು ಬಾಲಿವುಡ್​ ಬಾರ್ಬಿ ಕತ್ರಿನಾ ಕೈಫ್ ತಮ್ಮ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್​ ರಂಗದಲ್ಲಿ ತಮ್ಮ ಛಾಪು ಮೂಡಿಸಿರುವ ನಟಿಗೆ ಹುಟ್ಟುಹಬ್ಬದ ಶುಭಾಶಯಗಳು.

Katrina Kaif
ಕತ್ರಿನಾ ಕೈಫ್
author img

By

Published : Jul 16, 2021, 10:10 AM IST

ಬಾಲಿವುಡ್​ ಬೆಡಗಿ ಕತ್ರಿನಾ ಕೈಫ್ ಇಂದು ತಮ್ಮ 37ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ. 'ಬಾಲಿವುಡ್‌ನ ಬಾರ್ಬಿ' ಎಂದು ಹೆಸರಾಗಿದ್ದ ಈ ನಟಿ ತನ್ನ ನಗು, ಮೈಮಾಟದಿಂದ ಪಡ್ಡೆ ಹುಡುಗರ ಮನಗೆದ್ದಿದ್ದಾರೆ.

ಇನ್ನು 2008ರಲ್ಲಿ ಕತ್ರಿನಾ ಏಷ್ಯಾದ 'ಅತಿ ಸೆಕ್ಸೀ ಯುವ-ನಟಿ' ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲದೆ, ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಹೆಸರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ಈಕೆಯ ಹೆಸರು ಹೆಚ್ಚಾಗಿ ಬಾಲಿವುಡ್​ ಬ್ಯಾಡ್​ಬಾಯ್​ ಸಲ್ಮಾನ್​ ಖಾನ್​ ಜೊತೆ ತಳುಕುಹಾಕಿಕೊಂಡಿತ್ತು. ಇನ್ನು ಈಕೆ ಹುಟ್ಟಿದ್ದು ಹಾಂಕಾಂಗ್​ನಲ್ಲಿ. ತಂದೆ ಕಾಶ್ಮೀರಿ ಮುಸಲ್ಮಾನ, ತಾಯಿ ಬ್ರಿಟಿಷ್​ ಮೂಲದವರು. ತಾಯಿ ಹಾರ್ವರ್ಡ್ ಪದವೀಧರರಾಗಿದ್ದರು, ಅತ್ಯಂತ ಯಶಸ್ವಿ ವಕೀಲರಾಗಿದ್ದರು.

'ಕೈಝಾದ್ ಗುಸ್ತಾದ್', 'ಭೂಮ್​' ಚಿತ್ರದಲ್ಲಿನ ಪಾತ್ರಕ್ಕಾಗಿ ಮುಂಬೈನ ಬಾಲಿವುಡ್​ಗೆ ಆಗಮಿಸಿದ ಅವರು ಜನರ ಮನೆಗೆಲ್ಲುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾದರು. ಮುಂಬೈನಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ಅವರಿಗೆ ಚಿತ್ರಗಳಲ್ಲಿ ಅಂತಹ ಅವಕಾಶಗಳು ಸಿಗಲಿಲ್ಲ. ಆದರೂ ಸಲ್ಮಾನ್​ ಜೊತೆಗಿನ ಗೆಳೆತನದಿಂದ ಪ್ರಸಿದ್ಧಿ ಪಡೆದರು. ಕತ್ರಿನಾರ ಹಿಂದಿ ಉಚ್ಚಾರಣೆ ಬ್ರಿಟಿಷ್ ಶೈಲಿಯದಾಗಿತ್ತು. ಹಿಂದಿ ಭಾಷೆ ಮಾತನಾಡಲು ಬರುತ್ತಿರಲಿಲ್ಲ. ಈ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಿದ್ದು ಅಕ್ಷಯ್​ ಕುಮಾರ್​. ಇವರ ಜೊತೆ ಮಾಡಿದ ಚಿತ್ರಗಳು ಜನರಿಗೆ ಹತ್ತಿರವಾದವು. ಕತ್ರೀನಾ-ಸಲ್ಮಾನ್ ಜೋಡಿಯಲ್ಲಿ ನಿರ್ಮಿಸಿದ ಯುವರಾಜ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಿಲ್ಲ. ಇನ್ನು ಜಾನ್​, ನೀಲ್​ ನಿತಿನ್​ ಜೊತೆಗೆ ನಟಿಸಿದ ಇನ್ನೊಂದು ಚಿತ್ರ ನ್ಯೂಯಾರ್ಕ್ ಬಾಕ್ಸ್​-ಆಫೀಸ್​ನಲ್ಲಿ ಯಶಸ್ಸು ಕಂಡಿತು.

ಇನ್ನು ಕುಟುಂಬದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಕೈಫ್, "ತಾಯಿ ಜೊತೆಗೆ ಇರುವುದು ನನ್ನ ಅತೀ ಇಷ್ಟದ ಕೆಲಸ. ಆಕೆಯ ಜೊತೆ ನಾನು ನೃತ್ಯ ಮಾಡುವುದೆಂದರೆ ನನಗೆ ಅಚ್ಚುಮೆಚ್ಚು" ಎಂದು ಹೇಳಿಕೊಂಡಿದ್ದಾರೆ. ಇನ್ನು ತನ್ನ ತಂದೆಯ ಬಗ್ಗೆ ಮಾತನಾಡಿದ ಅವರು, "ನಾವು ತಂದೆಯಿಲ್ಲದೇ ಬೆಳೆದಿದ್ದೇವೆ. ಆ ನೋವು ಈಗಲೂ ಕಾಡುತ್ತಿದೆ" ಎಂದು ಮನದ ಮಾತನ್ನು ಹಂಚಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.