ಶಿವಮೊಗ್ಗ: ಕರ್ನಾಟಕಕ್ಕೂ ಪರಭಾಷೆಯ ಸಿನಿಮಾ ನಟ-ನಟಿಯರಿಗೂ ಭಾರೀ ನಂಟಿದೆ. ಆಗ್ಗಾಗ್ಗೆ ಇವರೆಲ್ಲಾ ಸಿನಿಮಾ ಚಿತ್ರೀಕರಣ ಹೊರತು ರಾಜ್ಯದ ಸುಂದರ ತಾಣಗಳಿಗೆ ಬಂದು ರಜಾ ದಿನಗಳನ್ನು ಕಳೆಯುತ್ತಾರೆ. ಕೆಲವು ದಿನಗಳ ಹಿಂದಷ್ಟೇ ಟಾಲಿವುಡ್ ನಟಿ ರೆಜಿನಾ ಕ್ಯಾಸಂದ್ರ ಮಂಗಳೂರಿನ ಅಡ್ಯನಡ್ಕಗೆ ಬಂದು ಸಾವಯವ ಕೃಷಿ ಬಗ್ಗೆ ತಿಳಿದುಕೊಂಡಿದ್ದರು. ಇದೀಗ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ.
- " class="align-text-top noRightClick twitterSection" data="
">
ಜಾಕ್ವೆಲಿನ್ ಫರ್ನಾಂಡಿಸ್ ಕಳೆದ 2 ದಿನಗಳ ಹಿಂದೆ ಶಿವಮೊಗ್ಗಕ್ಕೆ ಬಂದಿದ್ದು ಅಲ್ಲಿನ ಸುಂದರ ತಾಣಗಳನ್ನು ಎಂಜಾಯ್ ಮಾಡಿದ್ದಾರೆ. ತಾವು ಶಿವಮೊಗ್ಗಕ್ಕೆ ಬಂದಿರುವ ವಿಚಾರವನ್ನು ಜಾಕ್ವೆಲಿನ್ ಫರ್ನಾಂಡಿಸ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ನವೆಂಬರ್ನಲ್ಲಿ ಬಹುಕೋಟಿ ವೆಚ್ಚದಲ್ಲಿ ಪ್ರಾರಂಭವಾದ ಕಿಮ್ಮನೆ ಗಾಲ್ಫ್ ಕ್ಲಬ್ಗೆ ಜಾಕ್ವೆಲಿನ್ ಫರ್ನಾಂಡಿಸ್ ಚಿತ್ರರಂಗದ ಮೊದಲ ಅತಿಥಿಯಾಗಿ ಆಗಮಿಸಿದ್ದಾರೆ. ಜಾಕ್ವೆಲಿನ್ ಯಾವುದೋ ಸಿನಿಮಾ ಚಿತ್ರೀಕರಣಕ್ಕೆ ಶಿವಮೊಗ್ಗಕ್ಕೆ ಬಂದಿರಬಹುದು ಎನ್ನಲಾಗಿತ್ತು. ಆದರೆ ಸಿನಿಮಾ ಚಿತ್ರೀಕರಣದಿಂದ ಬಿಡುವು ಪಡೆದು ಪ್ರಕೃತಿ ಮಡಿಲಲ್ಲಿ ಕಾಲ ಕಳೆಯುವ ಉದ್ದೇಶದಿಂದ ಜಾಕ್ವೆಲಿನ್ ಫರ್ನಾಂಡಿಸ್ ಶಿವಮೊಗ್ಗಕ್ಕೆ ಬಂದಿದ್ದರು ಎಂಬುದು ತಿಳಿದು ಬಂದಿದೆ. ಜಾಕ್ವೆಲಿನ್ ಫರ್ನಾಂಡಿಸ್ ಗಾಲ್ಫ್ ಆಡುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಜಾಕ್ವೆಲಿನ್ ಫರ್ನಾಂಡಿಸ್ ಸಿನಿಮಾ ವಿಚಾರಕ್ಕೆ ಬರುವುದಾದರೆ, ಸುದೀಪ್ ಅಭಿನಯದ 'ಫ್ಯಾಂಟಮ್' ಚಿತ್ರದ ಹಾಡೊಂದನ್ನು ಜಾಕ್ವೆಲಿನ್ ಹೆಜ್ಜೆ ಹಾಕಲಿದ್ದಾರೆ. ಇದರೊಂದಿಗೆ ಅಟ್ಯಾಕ್, ಬೂತ್ ಪೊಲೀಸ್, ಚಿರ್ಕುಸ್, ಬಚ್ಚನ್ ಪಾಂಡೆ ಚಿತ್ರಗಳಲ್ಲಿ ಜಾಕ್ವೆಲಿನ್ ಬ್ಯುಸಿ ಇದ್ದಾರೆ.