ETV Bharat / sitara

ಕಾಫಿ, ತಿಂಡಿ ತಂದಿಟ್ಟ ಗ್ರಹಚಾರ...ಟೀಕಾಕಾರರಿಗೆ ದಂಗಲ್​ ಹುಡ್ಗಿಯ ಹೊಸ ಅಸ್ತ್ರ - ದಂಗಲ್​ ಹುಡ್ಗಿ ಸೈಲೆಂಟ್​ ಉತ್ತರ

ಬಾಲಿವುಡ್​​ ನಟಿ ಫಾತೀಮಾ ಸನಾ ಶೇಖ್ ಉಡುಗೆ-ತೊಡುಗೆ ವಿಚಾರವಾಗಿ ಸಾಕಷ್ಟು ಬಾರಿ ಟ್ರೋಲ್​​ಗೆ ತುತ್ತಾಗಿದ್ದಾರೆ. ತುಂಡು ಬಟ್ಟೆ ತೊಟ್ಟು, ಮೈಸಿರಿ ತೋರಿಸಿ, ಟೀಕಾಕಾರರ ಬಾಯಿಗೆ ಭರ್ಜರಿ ಬಾಡೂಟ ಹಾಕುವ ಈ ನಟಿ ಈಗ ಕಾಫಿ ಕುಡಿದದ್ದಕ್ಕಾಗಿ ಟ್ರೋಲ್ ಆಗಿದ್ದಾರೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ
author img

By

Published : May 25, 2019, 2:37 PM IST

ಸನಾ, ದಂಗಲ್ ಚಿತ್ರದಲ್ಲಿ ಸೀದಾ ಸಾದಾ ಹಳ್ಳಿ ಹುಡುಗಿಯಾಗಿ ಅಭಿಮಾನಿಗಳ ಮನ ಗೆದ್ದಿದ್ದರು. ಈ ಚಿತ್ರದ ಬಳಿಕ ಸ್ಟಾರ್​​ ನಟಿ ಪಟ್ಟಕ್ಕೆ ಏರಿದ್ದ ಈ ಬೆಡಗಿ, ಈ ಹಿಂದೆ ಒಂದು ಬಿಕಿನಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಇದನ್ನು ನೋಡಿದ ನೆಟ್ಟಿಗರು ಕೆಂಡಾಮಂಡಲರಾಗಿ, ಈಕೆಯ ವಿರುದ್ಧ ಇಲ್ಲಸಲ್ಲದ ಕಾಮೆಂಟ್ಸ್​​ ಮಾಡಿದ್ದರು. ಆದರೆ, ಇದ್ಯಾವುದನ್ನು ತೆಲೆಗೆ ಹಚ್ಚಿಕೊಳ್ಳದ ಈ ಬ್ಯೂಟಿ ತುಂಡುಗೆಯಲ್ಲಿಯ ಸರಣಿ ಫೋಟೋ ಹಾಕಿ ವಿರೋಧಿಗಳ ಬಾಯಿಗೆ ಬೀಗ ಹಾಕಿದ್ದರು.

ಫಾತೀಮಾ, ಇದೀಗ ತಿಂಡಿಯ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಮುಂಜಾನೆಯ ಎಳೆ ಬಿಸಿಲಿನ ವೇಳೆ ಗಾರ್ಡನ್​​​ವೊಂದರ ಮೇಲೆ ಕುಳಿತು, ಮಗ್​​​ಲ್ಲಿ ಕಾಫಿ ಹೀರಿದ್ದಾರೆ. ಪ್ಲೇಟ್​ನಲ್ಲಿ ಬ್ರೆಡ್​​ ಹಾಗೂ ಬೆಳಗಿನ ಬ್ರೇಕ್​ಫಾಸ್ಟ್​ ಇಟ್ಟುಕೊಂಡು ಕುಳಿತಿರುವ ಫೋಟೋ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಲುಕ್​ ನೋಡಿದ ಕೆಲವ ವರ್ಗದ ಜನರಿಗೆ ಬೇಸರವಾಗಿದೆ. ಅದಕ್ಕೆ ಕಾರಣ ರಂಜಾನ್. ಈ ಮಾಸದಲ್ಲಿ ಎಲ್ಲರೂ ಉಪವಾಸ ಮಾಡುತ್ತಾರೆ. ಒಂದು ಹನಿ ನೀರು ಕೂಡ ಸೇವಿಸುವುದಿಲ್ಲ. ಆದರೆ, ನೀವು ಮಾತ್ರ ಅರಾಮಾಗಿ ತಿಂಡಿ-ತಿನಿಸು ತಿನ್ನುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Fatima Sana Shaikh
ಚಿತ್ರಕೃಪೆ : ಇನ್​ಸ್ಟಾಗ್ರಾಂ

ಇನ್ನು ತಮ್ಮ ವಿರುದ್ಧ ಕೇಳಿ ಬಂದಿರುವ ಟೀಕೆಗಳಿಗೆ ಸೌಮ್ಯವಾಗಿಯೇ ರಿಯಾಕ್ಟ್​ ಮಾಡಿರುವ ಸನಾ, ಧರ್ಮದ ಬಗ್ಗೆ ಜ್ಞಾನ ನೀಡಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ. ಜತೆಗೆ ಆಕ್ರಮಣಕಾರಿ ಹಾಗೂ ಅಗೌರವದ ಜನರನ್ನು ಬ್ಲಾಕ್​ ನಾನು ಮಾಡುತ್ತಿದ್ದೇನೆ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.