ಮುಂಬೈ: ಬಿಗ್ಬಿ ಅಮಿತಾಬ್ ಬಚ್ಚನ್ ಮತ್ತು ಅವರ ಪತ್ನಿ ಜಯಾ ಬಚ್ಚನ್ ಅಭಿನಯದ ಮೊದಲ ಚಿತ್ರ ಬನ್ಸಿ ಬಿರ್ಜು ರಿಲೀಸ್ ಸೆಪ್ಟೆಂಬರ್ 1 ಕ್ಕೆ 49 ವರ್ಷಗಳು ಪೂರೈಸಿದ್ದು, ಆ ಸುಮಧುರ ಕ್ಷಣವನ್ನು ಬಿಗ್ ಬಿ ಮೆಲುಕು ಹಾಕಿದ್ದಾರೆ.
- " class="align-text-top noRightClick twitterSection" data="
">
ಈ ಕುರಿತು ಬಿಗ್ಬಿ, ಬ್ಲ್ಯಾಕ್ ಅಂಡ್ ವೈಟ್ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಿಗೆ ಪೋಸ್ಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ಜಯಾ ಬಚ್ಚನ್ ಅವರ ತೋಳುಗಳನ್ನು ಬಳಸಿ ಅಪ್ಪಿಕೊಂಡಿರುವುದು ಕಂಡು ಬರುತ್ತದೆ. ಇದು ನಮ್ಮ ಮೊದಲ ಚಿತ್ರ ಬನ್ಸಿ ಬಿರ್ಜು. ಸೆಪ್ಟೆಂಬರ್ 1 1970 ರಲ್ಲಿ ರಿಲೀಸ್ ಆಗಿತ್ತು ಎಂದು ಪೋಸ್ಟ್ಗೆ ಶೀರ್ಷಿಕೆ ಬರೆದಿದ್ದಾರೆ. ಈ ಫೋಟೋಗೆ ಮೊಮ್ಮಗಳಾದ ನವ್ಯಾ ನವೇಲಿ ನಂದಾ ಹಾರ್ಟ್ ಸಿಂಬಲ್ ಕೊಟ್ಟಿದ್ದಾರೆ.
ಪ್ರಕಾಶ್ ವರ್ಮಾ ನಿರ್ದೇಶನದ ಈ ಸಿನಿಮಾದಲ್ಲಿ, ಬನ್ಸಿ-ಬಿರ್ಜು ಪ್ರೇಮ ಕಥೆಯನ್ನು ಹೊಂದಿದೆ.
ಇದನ್ನೂ ಓದಿ: ಶಾನೆ ಟಾಪಾಗವಳೆ.. ಬೆಣ್ಣೆ ನಗರಿಯ ಬೆಡಗಿ ಅದಿತಿ ಪ್ರಭುದೇವ ರೂಮ್ ಹೇಗಿದೆ ಗೊತ್ತಾ?
ಅಮಿತಾಬ್ ಮತ್ತು ಜಯಾ, ಜೂನ್ 1973 ರಲ್ಲಿ ವಿವಾಹವಾದರು. ಬಳಿಕ ಇಬ್ಬರೂ ಜಂಜೀರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರ ಭಾರೀ ಯಶಸ್ಸನ್ನು ಕಂಡಿತು. ಬಳಿಕ ದಂಪತಿಯು ಅಭಿಮಾನ್, ಚುಪ್ಕೆ ಚುಪ್ಕೆ, ಮಿಲಿ ಮತ್ತು ಶೋಲೆಯಂತಹ ಚಿತ್ರಗಳಲ್ಲಿಯೂ ಕಾಣಿಸಿಕೊಂಡರು.