ಹೈದರಾಬಾದ್ : ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರ ಬೆಲ್ ಬಾಟಮ್ ಜುಲೈ 27ರಂದು ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರ ಬಿಡುಗಡೆಗೂ ಮೊದಲು, ಮುಂಬಯಿಯಲ್ಲಿ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಗುರುವಾರ ರಾತ್ರಿ ಬೆಲ್ ಬಾಟಮ್ ತಂಡ ಒಟ್ಟಿಗೆ ಕುಳಿತು ಚಿತ್ರವನ್ನು ವೀಕ್ಷಿಸಿದ್ದಾರೆ. ಅಕ್ಷಯ್ ಕುಮಾರ್, ಹುಮಾ ಖುರೇಷಿ, ವಾನಿ ಕಪೂರ್, ಲಾರಾ ದತ್ತಾ ಮತ್ತು ಚಿತ್ರದ ಸಹ-ನಿರ್ಮಾಪಕ ಜಾಕಿ ಭಗ್ನಾನಿ ಕೂಡ ಸ್ಕ್ರೀನಿಂಗ್‌ನಲ್ಲಿ ಪಾಲ್ಗೊಂಡರು. ತಾರಾಗಣ ಮತ್ತು ಸಿಬ್ಬಂದಿ ಪಕ್ಕದಲ್ಲಿ ಭೂಮಿ ಪೆಡ್ನೇಕರ್, ಟೈಗರ್ ಶ್ರಾಫ್, ಲಾರಾ ಅವರ ಪತಿ ಮಹೇಶ್ ಭೂಪತಿ ಮತ್ತು ಅನೇಕರು ಆಗಮಿಸಿದ್ದರು.
ಅಕ್ಷಯ್ ಅವರ ಬೆಲ್ ಬಾಟಮ್ 80ರ ದಶಕದಲ್ಲಿ ನಡೆದ ರೆಟ್ರೋ ಸ್ಪೈಲ್ ಥ್ರಿಲ್ಲರ್ ಆಗಿದೆ. ಚಿತ್ರದ ಅನೇಕ ಭಾಗಗಳನ್ನು ಹೆಚ್ಚಾಗಿ ಯುಕೆನಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರ ನೈಜ ಘಟನೆ ಆಧಾರಿತ ಎಂದು ಹೇಳಲಾಗಿದೆ.