ನವದೆಹಲಿ: ಎವರ್ಗ್ರೀನ್ ಸ್ಟಾರ್, ಡ್ರೀಮ್ ಗರ್ಲ್ ಎಂದೇ ಖ್ಯಾತಿ ಪಡೆದ ಹೇಮಾ ಮಾಲಿನಿಗೆ ಇಂದು 73ನೇ ಹುಟ್ಟುಹಬ್ಬ. ನಟಿ, ಡ್ಯಾನ್ಸರ್, ಬರಹಗಾರ್ತಿ, ನಿರ್ದೇಶಕಿ, ನಿರ್ಮಾಪಕಿ ಆಗಿರುವ ಇವರು ಯಶಸ್ವಿ ರಾಜಕಾರಣಿಯೂ ಹೌದು.
ತಮಿಳುನಾಡಿನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಇವರು, 1963ರಲ್ಲಿ ತಮಿಳು ಸಿನಿಮಾ 'ಇದು ಸತಿಯಮ್'ದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. 1986ರಲ್ಲಿ ಬಾಲಿವುಡ್ಗೆ ಎಂಟ್ರಿ ಕೊಟ್ಟ ಇವರು ಸೂಪರ್ಸ್ಟಾರ್ ರಾಜ್ ಕಪೂರ್ ಅಭಿನಯದ ಸಪ್ನೋ ಕಾ ಸೌದಾಗರ್ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು.
ಬೆಳ್ಳಿ ತೆರೆಯಲ್ಲಿ ತಮ್ಮ ಸೌಂದರ್ಯದಿಂದ ಛಾಪು ಮೂಡಿಸಿದ್ದ ಹೇಮಾ ಮಾಲಿನಿ ಡ್ರೀಮ್ ಗರ್ಲ್ ಎಂದೇ ಖ್ಯಾತಿ ಪಡೆದಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಇವರೂ ಕೂಡಾ ಒಬ್ಬರಾಗಿದ್ದರು.
ಸಿನಿಮಾರಂಗದಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿ, ಫಿಲ್ಮ್‌ಫೇರ್ ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್ ಮತ್ತು ಫಿಲ್ಮ್‌ಫೇರ್ ವಿಶೇಷ ಪ್ರಶಸ್ತಿಯನ್ನು ಹೇಮಾಮಾಲಿನಿ ಗೆದ್ದಿದ್ದಾರೆ. ಭಾರತ ಸರ್ಕಾರದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪುರಸ್ಕಾರಕ್ಕೂ ಹೇಮಾಮಾಲಿನಿ ಭಾಜನರಾಗಿದ್ದಾರೆ.
ಬಿಜೆಪಿ ಸಂಸದೆಯಾಗಿರುವ ಹೇಮಾ ಮಾಲಿನಿ ಹುಟ್ಟುಹಬ್ಬಕ್ಕೆ ಸಿನಿರಂಗದ ಸಾಕಷ್ಟು ಗಣ್ಯರು, ಅಭಿಮಾನಿಗಳು ಶುಭಕೋರಿದ್ದಾರೆ.
ಇದನ್ನೂ ಓದಿ: 9ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಕರೀನಾ - ಸೈಫ್: ನಟಿ ತನ್ನ ಪತಿಗೆ ಶುಭಕೋರಿದ್ದು ಹೀಗೆ!