ETV Bharat / sitara

ಸುಶಾಂತ್ ಸಿಂಗ್​ ಮೇಣದ ಪ್ರತಿಮೆ ನಿರ್ಮಾಣ ಮಾಡಿದ ಕಲಾವಿದ - ಸುಶಾಂತ್ ಸಿಂಗ್ ರಜಪೂತ್ ಮೇಣದ ಪ್ರತಿಮೆ

ಪಶ್ಚಿಮ ಬಂಗಾಳದ ಅಸನ್ಸೋಲ್ ಮೂಲದ ಶಿಲ್ಪಿ ಸುಶಾಂತ್ ಸಿಂಗ್ ರಜಪೂತ್ ಅವರ ಮೇಣದ ಪ್ರತಿಮೆಯನ್ನು ರಚಿಸಿದ್ದು, ತಮ್ಮ ವಸ್ತು ಸಂಗ್ರಹಾಲಯದಲ್ಲಿ ಇಟ್ಟಿದ್ದಾರೆ.

creates wax statue in honour of Sushant Singh Rajput
ಸುಶಾಂತ್ ಸಿಂಗ್ ರಜಪೂತ್ ಮೇಣದ ಪ್ರತಿಮೆ ನಿರ್ಮಾಣ ಮಾಡಿದ ಕಲಾವಿದ
author img

By

Published : Sep 18, 2020, 10:02 AM IST

ಅಸನ್ಸೋಲ್ (ಪಶ್ಚಿಮ ಬಂಗಾಳ): ಅಸನ್ಸೋಲ್ ಮೂಲದ ಶಿಲ್ಪಿ, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೇಣದ ಪ್ರತಿಮೆಯನ್ನು ರಚಿಸಿದ್ದಾರೆ.

ಶಿಲ್ಪಿ ಸುಕಾಂಟೊ ರಾಯ್ ಅವರು ಸುಶಾಂತ್ ಸಿಂಗ್ ರಜಪೂತರನ್ನು ತುಂಬಾ ಮೆಚ್ಚಿದ್ದಾರೆ ಮತ್ತು ಮೃತ ತಾರೆಯ ನೆನಪಿಗಾಗಿ ಮಾಡಿದ ಪ್ರತಿಮೆಯನ್ನು ತಮ್ಮ ವಸ್ತು ಸಂಗ್ರಹಾಲಯದಲ್ಲಿ ಇಡಲಾಗುವುದು ಎಂದು ಹೇಳಿದ್ದಾರೆ.

ಪ್ರತಿಮೆಯನ್ನು ರಚಿಸಲು ಸುಮಾರು 10 ಕೆಜಿ ಮೇಣವನ್ನು ಮೊಲ್ಡರ್‌ಗೆ ಹಾಕಲಾಗಿದೆ ಎಂದು ಅವರು ಹೇಳಿದ್ದಾರೆ. ಸುಕಾಂಟೊ ರಾಯ್ ಪ್ರಸಿದ್ಧ ವ್ಯಕ್ತಿಗಳಾದ ನಟ ಅಮಿತಾಬ್ ಬಚ್ಚನ್ ಮತ್ತು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರ ಮೇಣದ ಪ್ರತಿಮೆಗಳನ್ನೂ ಸಹ ರಚಿಸಿದ್ದಾರೆ.

creates wax statue in honour of Sushant Singh Rajput
ಸುಶಾಂತ್ ಸಿಂಗ್ ರಜಪೂತ್ ಮೇಣದ ಪ್ರತಿಮೆಯೊಂದಿಗೆ ಕಲಾವಿದ

"ನಾನು ಸುಶಾಂತ್​ರನ್ನು ತುಂಬಾ ಇಷ್ಟಪಡುತ್ತೇನೆ. ಅವರು ನಿಧನ ಹೊಂದಿರುವುದು ದುರದೃಷ್ಟಕರ. ಅವರ ನೆನಪಿಗಾಗಿ ನಾನು ಈ ಪ್ರತಿಮೆಯನ್ನು ನನ್ನ ಮ್ಯೂಸಿಯಂಗಾಗಿ ಮಾಡಿದ್ದೇನೆ" ಎಂದು ಹೇಳಿದ್ದಾರೆ. ಒಂದು ವೇಳೆ ಸುಶಾಂತ್ ಅವರ ಕುಟುಂಬವು ಅವರ ಪ್ರತಿಮೆಯನ್ನು ಕೋರಿದರೆ, ನಾನು ಹೊಸದನ್ನು ಮಾಡುತ್ತೇನೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.