ETV Bharat / sitara

ಏಷ್ಯಾ-2020 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸಂಗೀತ ಮಾಂತ್ರಿಕನಿಗೆ ಮೊದಲ ಸ್ಥಾನ - Actress Shruti hassan

ಏಷ್ಯಾದ ಈ ವರ್ಷದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಟಾಪ್​​​ 100 ಪಟ್ಟಿಯಲ್ಲಿ ಬಾಲಿವುಡ್ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮೊದಲ ಸ್ಥಾನದಲ್ಲಿ ಇದ್ದಾರೆ ಎಂದು ನ್ಯೂಯಾರ್ಕ್ ಪ್ರೆಸ್​​​ ನ್ಯೂಸ್ ಏಜೆನ್ಸಿ ಪ್ರಕಟಿಸಿದೆ.

Bollywood music director AR Rahman
ಸಂಗೀತ ಮಾಂತ್ರಿಕ
author img

By

Published : Jul 17, 2020, 2:52 PM IST

ಆ್ಯಸ್ಕರ್ ಪ್ರಶಸ್ತಿ ವಿಜೇತ, ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್​​​ ಅವರನ್ನು ಏಷ್ಯಾ ಖಂಡದ ಟಾಪ್​​ 100 ನಂಬರ್ ಒನ್ ಪ್ರಭಾವಿ ವ್ಯಕ್ತಿ ಎಂದು ನ್ಯೂಯಾರ್ಕ್ ಪ್ರೆಸ್​​​ ನ್ಯೂಸ್ ಏಜೆನ್ಸಿ ಪ್ರಕಟಿಸಿದೆ.

100 ಪ್ರಮುಖ ವ್ಯಕ್ತಿಗಳ ಹೆಸರಿನ ಪಟ್ಟಿಯಲ್ಲಿ ಎ.ಆರ್. ರೆಹಮಾನ್ ಜೊತೆ ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್ ಅವರ ಹೆಸರು ಕೂಡಾ ಇದೆ. ಇವರೊಂದಿಗೆ ಬೆನ್ನಿ ದಯಾಳ್, ಸಾನಿಯಾ ಮಿರ್ಜಾ, ಉದಿತ್ ನಾರಾಯಣ್, ರಹತ್​​​​​​​​​ ಫತೆಹ್ ಅಲಿ ಖಾನ್, ಜಾಕೀರ್ ಹುಸೇನ್​​​​, ಪಾಲಕ್ ಮುಚ್ಚಲ್, ಶಾನ್, ಸಾನಿಯಾ ನೇಹವಾಲ್, ವಾಸಿಂ ಅಕ್ರಮ್ ಅವರ ಹೆಸರೂ ಕೂಡಾ ಏಷ್ಯಾದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಇದೆ.

ಇವರೆಲ್ಲರಲ್ಲಿ ಎ.ಆರ್. ರೆಹಮಾನ್ ಅವರಿಗೆ ಮೊದಲ ಸ್ಥಾನ ಲಭಿಸಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ. ಕಳೆದ 15 ದಿನಗಳಿಂದ ಆಯ್ಕೆ ಪ್ರಕ್ರಿಯೆ ನಡೆದಿದ್ದು ಅವರ ಪ್ರತಿಭೆಯನ್ನು ನೀಡಿ ಸಲ್ಲಿಸಿರುವ ಗೌರವ ಇದಾಗಿದೆ. ಈ ಬಗ್ಗೆ ಎ.ಆರ್. ರೆಹಮಾನ್ ಸಂತೋಷ ವ್ಯಕ್ತಪಡಿಸಿದ್ದಾರೆ

ಶ್ರುತಿ ಹಾಸನ್ ಕೂಡಾ ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು ಏಷ್ಯಾ 2020 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ನನ್ನ ಹೆಸರು ಇರುವುದಕ್ಕೆ ಸಂತೋಷವಾಗುತ್ತಿದೆ. ಇದು ನನಗೆ ಸಂದ ದೊಡ್ಡ ಗೌರವ ಎಂದು ತಮ್ಮ ಟ್ವಿಟ್ಟರ್​​​ನಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.