ETV Bharat / sitara

ಉದ್ಯಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಪುತ್ರಿ - Khatija Rehman Engagement Photos

ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಮಗಳಾದ ಖತೀಜಾ ರೆಹಮಾನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಂಗೇಜ್‍ಮೆಂಟ್ ಸಂದರ್ಭದಲ್ಲಿ ತಾವು ಧರಿಸಿದ್ದ ಡ್ರೆಸ್‍ನಲ್ಲಿಯೇ ಖತೀಜಾ ಜಾಲತಾಣದಲ್ಲಿ ಇಬ್ಬರ ಫೋಟೋಗಳನ್ನೂ ಪೋಸ್ಟ್ ಮಾಡಿದ್ದಾರೆ.

AR Rahman's Daughter Khatija Gets Engaged,
ಖತೀಜಾ ರೆಹಮಾನ್ ನಿಶ್ಚಿತಾರ್ಥ
author img

By

Published : Jan 3, 2022, 1:08 PM IST

Updated : Jan 3, 2022, 1:38 PM IST

ಮುಂಬೈ: ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಪುತ್ರಿ ಖತೀಜಾ ಅವರು ಉದ್ಯಮಿ ರಿಯಾಸ್ದೀನ್ ಶೇಕ್ ಮೊಹಮದ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲೇ ಸಪ್ತಪದಿ ತುಳಿಯಲಿರುವ ನವಜೋಡಿಯ ಫೋಟೋಗಳು ಜಾಲತಾಣದಲ್ಲಿ ವೈರಲ್​ ಆಗಿವೆ.

ಸ್ವತಃ ರೆಹಮಾನ್ ಅವರ ಹಿರಿಯ ಮಗಳು ಮತ್ತು ಸಂಗೀತಗಾರ್ತಿಯೂ ಆಗಿರುವ ಖತೀಜಾ ರೆಹಮಾನ್ ಅವರೇ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಂಧುಗಳು, ಸಿನಿಮಾ ತಾರೆಯರು ಸೇರಿದಂತೆ ಇತರರು ಶುಭಾಶಯಗಳನ್ನು ತಿಳಿಸಿದ್ದಾರೆ.

AR Rahman's Daughter Khatija Gets Engaged,
ಖತೀಜಾ ರೆಹಮಾನ್ ನಿಶ್ಚಿತಾರ್ಥದ ಫೋಟೋ

ಮನೆ ಸದಸ್ಯರ ಸಮ್ಮುಖದಲ್ಲಿ 20 ವರ್ಷದ ಹರೆಯದ ಖತೀಜಾ ರೆಹಮಾನ್ ಹಾಗೂ ಸೌಂಡ್ ಇಂಜಿನಿಯರ್ ಆಗಿರುವ ಉದ್ಯಮಿ ಮೊಹಮ್ಮದ್ (ಡಿಸೆಂಬರ್ 29) ಭಾನುವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸದ್ಯದಲ್ಲೇ ಈ ಜೋಡಿ ಮದುವೆ ಆಗಲಿದೆ. ಇಬ್ಬರ ಫೋಟೋಗಳು ಇದೀಗ ವೈರಲ್​ ಆಗುತ್ತಿವೆ.

ಹುಟ್ಟುಹಬ್ಬದ ಶುಭಾಶಯ ಕೋರಿದವರಿಗೆ ಧನ್ಯವಾದ ಸಮರ್ಪಣೆ

ಡಿ. 29 ನನ್ನ ಹುಟ್ಟುಹಬ್ಬ. ದೇವರ ಆಶೀರ್ವಾದದಿಂದ ನನ್ನ ಹುಟ್ಟುಹಬ್ಬದ ದಿನವೇ ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಉದ್ಯಮಿ ಮತ್ತು ವಿಜ್ಕಿಡ್ ಆಡಿಯೊ ಇಂಜಿನಿಯರ್ ರಿಯಾಸ್ದೀನ್ ಶೇಕ್ ಮೊಹಮದ್ ಅವರೊಂದಿಗೆ ನಿಶ್ಚಿತಾರ್ಥ ನಡೆಯಿತು ಎಂದು ತಿಳಿಸಲು ಸಂತೋಷ ಎನಿಸುತ್ತಿದೆ ಎಂದು ಖತೀಜಾ ರೆಹಮಾನ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಿದ್ದಾರೆ. ಇದೇ ವೇಳೆ ತಮ್ಮ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದವರಿಗೂ ಧನ್ಯವಾದ ಹೇಳಿದ್ದಾರೆ.

ಎಂಗೇಜ್‍ಮೆಂಟ್ ಸಂದರ್ಭದಲ್ಲಿ ತಾವು ಧರಿಸಿದ್ದ ಡ್ರೆಸ್‍ನಲ್ಲಿಯೇ ಖತೀಜಾ ಫೋಟೋ ಪೋಸ್ಟ್ ಮಾಡಿದ್ದಾರೆ. ಇನ್ನು ಹಿರಿಯ ಪುತ್ರಿಯಾಗಿರುವ ಖತೀಜಾ ರೆಹಮಾನ್ ತಂದಯಂತೆಯೇ ಸಂಗೀತದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ಇದನ್ನೂ ಓದಿ: ಹೊಸವರ್ಷಕ್ಕೆ ಸಿಹಿ ಸುದ್ದಿ ಹಂಚಿಕೊಂಡ ಸಂಜನಾ ಗಲ್ರಾನಿ: ಶೀಘ್ರದಲ್ಲೇ ಮನೆಗೆ ಹೊಸ ಅತಿಥಿ ಆಗಮನ

Last Updated : Jan 3, 2022, 1:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.