ETV Bharat / sitara

ಅನಿಲ್ ಕಪೂರ್ - ಹರ್ಷವರ್ಧನ್ ಕಪೂರ್ ರಿವೇಂಜ್ ಥ್ರಿಲ್ಲರ್ ಸಿನೆಮಾ ಥಾರ್ ಸಿನೆಮಾ ಬೇಸಿಗೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ - ಥಾರ್ ಸಿನೆಮಾ ರಿವೇಂಜ್ ಥ್ರಿಲ್ಲರ್ ಪ್ರಕಾರದ ಸಿನೆಮಾ

ಅನಿಲ್ ಕಪೂರ್ ಮತ್ತು ಹರ್ಷವರ್ಧನ್ ಕಪೂರ್ ಜೊತೆಯಾಗಿ ನಟಿಸುತ್ತಿರುವ ರಿವೇಂಜ್ ಥ್ರಿಲ್ಲರ್ ಸಿನೆಮಾ ಥಾರ್ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಗೊಳ್ಳಲಿದೆ. ಕ್ಲಾಸಿಕ್ ವೆಸ್ಟರ್ನ್ ಸಂಯೋಜನೆ ಹೊಂದಿರುವ ಥ್ರಿಲ್ಲರ್ ಶೈಲಿಯ ಸಿನೆಮಾ ಇದಾಗಿದ್ದು, ಭಾರತೀಯ ಸಿನಿಮಾ ಮತ್ತು ಸಿನಿ ಪ್ರೇಕ್ಷಕರಿಗೆ ಮೊದಲನೆಯದು ಎಂದು ಅನಿಲ್ ಕಪೂರ್ ಅಭಿಪ್ರಾಯ ಪಟ್ಟಿದ್ದಾರೆ.

anil-kapoor-harsh-varrdhan-kapoor-team-up-for-revenge-thriller-thar-see
ಅನಿಲ್ ಕಪೂರ್ ಮತ್ತು ಹರ್ಷವರ್ಧನ್ ಕಪೂರ್
author img

By

Published : Feb 21, 2022, 5:34 PM IST

ಮುಂಬೈ: ನೆಟ್‌ಫ್ಲಿಕ್ಸ್ ತನ್ನ ಮುಂದಿನ ಚಿತ್ರ ಥಾರ್ ಸಿನೆಮಾದ ಬಗ್ಗೆ ಇದೀಗಾಗಲೇ ಘೋಷಿಸಿದೆ. ಇದರಲ್ಲಿ ಬಾಲಿವುಡ್ ಅನೇಕ ನಟರು ಸೇರಿದಂತೆ ಅನಿಲ್ ಕಪೂರ್ ಮತ್ತು ಮಗ ಹರ್ಷವರ್ಧನ್ ಕಪೂರ್ ಒಟ್ಟಿಗೆ ನಟಿಸಿದ್ದಾರೆ. ರಾಜ್ ಸಿಂಗ್ ಚೌಧರಿ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ.

ಥಾರ್ ಸಿನೆಮಾ ರಿವೇಂಜ್ ಥ್ರಿಲ್ಲರ್ ಪ್ರಕಾರದ ಸಿನೆಮಾವಾಗಿದ್ದು, ಅನಿಲ್ ಕಪೂರ್ ಫಿಲ್ಮ್ ಕಂಪನಿ ಚಿತ್ರವನ್ನು ನಿರ್ಮಾಣ ಮಾಡಿದೆ. ನಿರ್ದೇಶಕ ರಾಜ್ ಚೌಧರಿ ಚಿತ್ರಕಥೆ ಬರೆದಿದ್ದು, ಅನುರಾಗ್ ಕಶ್ಯಪ್ ಅವರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

ವೆಸ್ಟರ್ನ್ ಶೈಲಿಯ ಪ್ರಕಾರದಿಂದ ಸ್ಫೂರ್ತಿ ಪಡೆದ ಥಾರ್ ಚಿತ್ರ, ಎಂಬತ್ತರ ದಶಕದಲ್ಲಿ ರಾಜಸ್ಥಾನದಲ್ಲಿ ನಡೆಯುವ ಕಥೆಯಾಗಿದೆ. ಇಲ್ಲಿ ಸಿದ್ಧಾರ್ಥ್‌(ಹರ್ಷವರ್ಧನ್) ಉದ್ಯೋಗಕ್ಕಾಗಿ ರಾಜಸ್ಥಾನದ ಪುಷ್ಕರ್‌ಗೆ ಹೋಗಿ ತನ್ನ ಹಿಂದಿನ ಸೇಡು ತೀರಿಸಿಕೊಳ್ಳುವುದಾಗಿದೆ. ಇದರಲ್ಲಿ ಯಶಸ್ವಿಯಾಗುತ್ತಾನೆಯೇ ಇಲ್ಲ, ಅಥವಾ ಅಲ್ಲಿ ಬೇರೆ ಏನಾದರೂ ಕಾದಿದೆಯೇ ಎಂದು ನೋಡಬೇಕಷ್ಟೇ, ಹೀಗೆ ಕಥೆ ಸಾಗುವುದು ಎಂದು ಹೇಳಲಾಗಿದೆ.

ಎಕೆ ವರ್ಸಸ್ ಎಕೆ ಸಿನೆಮಾದ ನಂತರ ಅನಿಲ್ ಕಪೂರ್ ಮತ್ತು ಹರ್ಷವರ್ಧನ್ ಥಾರ್ ಸಿನೆಮಾದಲ್ಲಿ ಮತ್ತೆ ಜೋಡಿಯಾಗಿದ್ದಾರೆ. ಜೊತೆಗೆ ಫಾತಿಮಾ ಸನಾ ಶೇಖ್ ಮತ್ತು ಸತೀಶ್ ಕೌಶಿಕ್ ಕೂಡ ನಟಿಸಿದ್ದಾರೆ. ಕ್ಲಾಸಿಕ್ ವೆಸ್ಟರ್ನ್ ಸಂಯೋಜನೆ ಹೊಂದಿರುವ ಥ್ರಿಲ್ಲರ್ ಶೈಲಿಯ ಸಿನೆಮಾ ಇದಾಗಿದ್ದು, ಭಾರತೀಯ ಸಿನಿಮಾ ಮತ್ತು ಪ್ರೇಕ್ಷಕರಿಗೆ ಮೊದಲನೆಯದು ಎಂದು ಅನಿಲ್ ಕಪೂರ್ ಅಭಿಪ್ರಾಯ ಪಟ್ಟಿದ್ದಾರೆ.

ಹರ್ಷವರ್ಧನ್ ಕಪೂರ್ ಮತ್ತು ಫಾತಿಮಾ ಸನಾ ಶೇಖ್ ಅವರ ಹೊಸ ಜೋಡಿ ತೆರೆ ಮೇಲೆ ಮೋಡಿ ಮಾಡಲಿದೆ ಎಂದು ಹೇಳಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಶ್ರೇಯಾ ದೇವ್ ದುಬೆ ಮತ್ತು ಸಂಗೀತ ಸಂಯೋಜನೆಯನ್ನು ಅಜಯ್ ಜಯಂತಿ ಅವರು ಮಾಡಿದ್ದಾರೆ.

ದೇಶದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಥಾರ್ ಸಿನೆಮಾ ಈ ಬೇಸಿಗೆಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ನಿಮ್ಮ ಮುಂದೆ ಪ್ರಥಮ ಪ್ರದರ್ಶನಗೊಳ್ಳಲಿದೆ ಎಂದು ಹೇಳಲಾಗಿದೆ.

ಓದಿ : ಬ್ಯಾಂಕ್​ಗೆ ಬುರ್ಖಾ ಧರಿಸಿ ಬಂದಿದ್ದಕ್ಕೆ ಹಣ ನೀಡಲು ನಿರಾಕರಿಸಿದ ಸಿಬ್ಬಂದಿ : ವಿಡಿಯೋ ಮಾಡಿ ಹರಿಬಿಟ್ಟ ಯುವತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.