ETV Bharat / sitara

'ಪುಷ್ಪ' ಸಿನಿಮಾದ 2ನೇ ಹಾಡು 'ಶ್ರೀವಲ್ಲಿ' ರಿಲೀಸ್ - 'ಶ್ರೀವಲ್ಲಿ' ರಿಲೀಸ್

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಷ್‌ ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ' ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗಿದೆ.

Pushpa second song srivalli release
'ಪುಷ್ಪ' ಸಿನಿಮಾದ 2ನೇ ಹಾಡು 'ಶ್ರೀವಲ್ಲಿ' ರಿಲೀಸ್
author img

By

Published : Oct 13, 2021, 7:03 PM IST

ಹೈದರಾಬಾದ್: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಬಹು ನಿರೀಕ್ಷಿತ ಚಿತ್ರ 'ಪುಷ್ಪ' ಸಿನಿಮಾ ಡಿ.17ರಂದು ತೆರೆಮೇಲೆ ಬರಲಿದ್ದು, ಇಂದು ಚಿತ್ರದ 2ನೇ ಹಾಡು' ಶ್ರೀವಲ್ಲಿ' ಬಿಡುಗಡೆಯಾಗಿದೆ. ನಿರ್ದೇಶಕ ಸುಕುಮಾರ್ ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  • " class="align-text-top noRightClick twitterSection" data="">

'ಶ್ರೀವಲ್ಲಿ' ಹಾಡಿನಲ್ಲಿ ಅಲ್ಲು ಅರ್ಜುನ್ ಅವರ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇಲ್ಲಿಯವರೆಗೆ ಈ ಹಾಡನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ರಶ್ಮಿಕಾ ಮಂದಣ್ಣ 'ಶ್ರೀವಲ್ಲಿ' ಪಾತ್ರದ ಮೇಲೆ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಈ ಸಿನಿಮಾ ಆಂಧ್ರಪ್ರದೇಶದ ಬೆಟ್ಟಗಳಲ್ಲಿ ಕೆಂಪು ಶ್ರೀಗಂಧದ ಕಳ್ಳಸಾಗಣೆಯನ್ನು ಆಧರಿಸಿದ್ದು, ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಣಿಕೆ ಮಾಡುವ ಲಾರಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಲ್ಲು ಅರ್ಜುನ್​ 'ಪುಷ್ಪ' ಸಿನಿಮಾದ ಹಾಡು ಪಂಚಭಾಷೆಯಲ್ಲಿ ರಿಲೀಸ್: ಕನ್ನಡದ 'ಜೋಕೆ ಜೋಕೆ ಜೋಕೆ' ಹಾಡು ನೋಡಿ..

ಗಾಯಕ ಸಿದ್ ಶ್ರೀರಾಮ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಖ್ಯಾತ ಸಂಯೋಜಕ ದೇವಿ ಶ್ರೀ ಪ್ರಸಾದ್ ಸಂಗೀತವಿದ್ದು, ಚಂದ್ರಬಾಸ್ ಅವರ ಸಾಹಿತ್ಯವಿದೆ. ಈ ಮೊದಲು ಚಿತ್ರದ 'ಜಾಗೋ ರೇ' ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.

'ಪುಷ್ಪ' ಚಿತ್ರವನ್ನು ಎರಡು ಭಾಗಗಳಲ್ಲಿ ನಿರ್ದೇಶಿಸಲಾಗುತ್ತಿದೆ. ಚಿತ್ರದ ಮೊದಲ ಭಾಗವು ಈ ವರ್ಷ ಡಿಸೆಂಬರ್ 17 ರಂದು ಮತ್ತು ಎರಡನೇ ಭಾಗವು 2022ರಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಬಹು ನಿರೀಕ್ಷಿತ ಪುಷ್ಪ ಚಿತ್ರದ ನಟಿ ರಶ್ಮಿಕಾ ಮಂದಣ್ಣ ಫಸ್ಟ್ ಲುಕ್​ ರಿವೀಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.