ಮುಂಬೈ : 'ರಾಮ್ ಸೇತು' ಘೋಷಣೆಯ ನಂತರ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಿರ್ಮಾಪಕ ಜಗನ್ ಶಕ್ತಿ ಅವರ ಬಿಗ್ ಬಜೆಟ್ನ ಸೈ-ಫೈ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗ್ತಿದೆ.
- " class="align-text-top noRightClick twitterSection" data="
">
2019ರಲ್ಲಿ ಬಿಡುಗಡೆಯಾದ ಮಿಷನ್ ಮಂಗಲ್ ಚಿತ್ರದ ನಂತರ ಮತ್ತೊಮ್ಮೆ ನಟ ಅಕ್ಷಯ್ ಜಗನ್ ಅವರ ಜೊತೆಗೆ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ವೆಬ್ಲಾಯ್ಡ್ ಪತ್ರಿಕೆಯೊಂದು ವರದಿ ಮಾಡಿದೆ.
- " class="align-text-top noRightClick twitterSection" data="
">
ಈ ಚಿತ್ರಕ್ಕೆ ಇನ್ನೂ ಹೆಸರಿಡಲಾಗಿಲ್ಲ. ಚಿತ್ರದಲ್ಲಿ ಅತಿ ಹೆಚ್ಚು ವಿಎಫ್ಎಕ್ಸ್ ಹೊಂದಿರಬೇಕಾದ ಕಾರಣದಿಂದ ಭಾರಿ ಬಜೆಟ್ನಲ್ಲಿ ಚಿತ್ರ ಮೂಡಿಬರಲಿದೆ ಎಂದು ವರದಿಗಳು ಹೇಳುತ್ತಿವೆ.
ಇದನ್ನೂ ಓದಿ: ಅಕ್ಕಿಯ 'ಫೌಜಿ' ಗೇಮಿಂಗ್ ಬಿಡುಗಡೆಗೆ ದಿನಾಂಕ ಫಿಕ್ಸ್: 24 ಗಂಟೆಗಳ ಒಳಗೆ 10 ಲಕ್ಷ ಪ್ರಿ-ಬುಕ್ಕಿಂಗ್!
ಇನ್ನೊಂದು ಮಹತ್ವದ ವಿಚಾರವೆಂದರೆ ಇದೇ ಚಿತ್ರದಲ್ಲಿ ಅಕ್ಷಯ್ ಕುಮಾರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
- " class="align-text-top noRightClick twitterSection" data="
">
ಇದಕ್ಕೂ ಮೊದಲು ಅಕ್ಷಯ್ ಜೈ ಕಿಸಾನ್, ಕಿಲಾಡಿ 420, ಅಫ್ಲಾತೂನ್, ರೌಡಿ ರಾಥೋರ್ನಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡು ಜನರನ್ನು ರಂಜಿಸಿದ್ದರು. ಈಗ ಸದ್ಯಕ್ಕೆ ರಂಜಿತ್ ತಿವಾರಿ ಅವರ ಬೆಲ್ ಬಾಟಂ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.