ಪಾಲಿ(ರಾಜಸ್ಥಾನ): ಬಾಲಿವುಡ್ ನಟ ಅನಿಲ್ ಕಪೂರ್ ತಮ್ಮ ಮುಂಬರುವ 'ಥಾರ್' ಚಿತ್ರದ ಶೂಟಿಂಗ್ ಹಿನ್ನೆಲೆಯಲ್ಲಿ ರಾಜಸ್ಥಾನದ ದೇಸುರಿ ಪ್ರದೇಶದ ನರ್ಲೈ ರಾವ್ಲಾಕ್ಕೆ ಆಗಮಿಸಿದ್ದಾರೆ. ಇನ್ನು ಸಿನಿಮಾ ಚಿತ್ರೀಕರಣಕ್ಕಾಗಿ ಸುಮಾರು 15 ದಿನಗಳ ಕಾಲ ಇಲ್ಲಿಯೇ ಕಾಲಕಳೆಯಲಿದ್ದಾರೆ.
ಇನ್ನು ಥಾರ್ ಸಿನಿಮಾದ ಶೂಟಿಂಗ್ ರಾಜ್‌ಸಮಂದ್ ಜಿಲ್ಲೆಯ ರೂಪ್ ನಗರ ಗ್ರಾಮದಲ್ಲಿರುವ ಪ್ರಾಚೀನ ಕೋಟೆಯಲ್ಲಿ ನಡೆಸಲಾಗುತ್ತದೆ. ಇನ್ನು ನಟ ಅನಿಲ್ ಕಪೂರ್ ಅವರನ್ನು ನೋಡಲು ಅಭಿಮಾನಿಗಳು ದೌಡಾಯಿಸಿದ್ದರು.
ವಾರದ ಹಿಂದೆಯಷ್ಟೇ ಅನಿಲ್ ಕಪೂರ್ ಅವರ ಪುತ್ರ ಹರ್ಷವರ್ಧನ್ ಕಪೂರ್ ಕೂಡ ನರ್ಲೈಗೆ ಬಂದಿದ್ದರು. ಹರ್ಷವರ್ಧನ್ ಅವರು ಚಿತ್ರೀಕರಣಕ್ಕಾಗಿ ಸ್ಥಳವನ್ನು ವೀಕ್ಷಿಸುತ್ತಿದ್ದರು. ಸ್ಥಳವನ್ನು ನಿಗದಿಪಡಿಸಿದ ನಂತರ, ಅನಿಲ್ ಕಪೂರ್ ಬುಧವಾರ ಸಂಜೆ ನರ್ಲೈಗೆ ಬಂದಿದ್ದಾರೆ. ಈ ಬಳಿಕ ಅನಿಲ್ ಕಪೂರ್ ಸಹ ಸ್ಥಳವನ್ನು ನೋಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.