ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರ ಮಗ ಜುನೈದ್ ಖಾನ್ ತಮ್ಮ ಚೊಚ್ಚಲ ಚಿತ್ರವಾದ 'ಮಹಾರಾಜ' ಸಿನಿಮಾದ ಶೂಟಿಂಗ್ ಪ್ರಾರಂಭಿಸಿದ್ದಾರೆ.
ಸಿನಿಮಾದ ಶೂಟಿಂಗ್ ಪ್ರಾರಂಭದ ಬೆನ್ನಲ್ಲೇ ಜುನೈದ್ ಅವರ ತಂಗಿ ಇರಾ ಖಾನ್, ಸಹೋದರನ ಮೊದಲ ದಿನದ ಶೂಟಿಂಗ್ ಕುರಿತು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ನೀಡಿ, ಶುಭ ಹಾರೈಸಿದ್ದಾರೆ.
- " class="align-text-top noRightClick twitterSection" data="
">
ರಾಣಿ ಮುಖರ್ಜಿ ನಟಿಸಿದ್ದ 'ಹಿಚ್ಕಿ' ಸಿನಿಮಾ ನಿರ್ದೇಶನ ಮಾಡಿದ್ದ ಸಿದ್ಧಾರ್ಥ್ ಪಿ. ಮಲ್ಹೋತ್ರಾ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವು 1862ರ ಮಹಾರಾಜ್ ಲಿಬೆಲ್ ಪ್ರಕರಣ ಆಧಾರಿತ ಸಿನಿಮಾ ಎಂದು ಹೇಳಲಾಗುತ್ತಿದೆ. ಯಶ್ ರಾಜ್ ಫಿಲ್ಮ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಇನ್ನು ಇದು ಜುನೈದ್ ಅವರ ಚೊಚ್ಚಲ ಸಿನಿಮಾವಾಗಿದ್ದು, ಇದರಲ್ಲಿ ಪತ್ರಕರ್ತರಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಜೊತೆಗೆ ಈ ಚಿತ್ರದಲ್ಲಿ ಖ್ಯಾತ ನಟ ಜೈದೀಪ್ ಅಹ್ಲಾವತ್, ಶಾಲಿನಿ ಪಾಂಡೆ, ಶಾರ್ವರಿ ವಾಘ್ ನಟಿಸುತ್ತಿದ್ದಾರೆ.