ಹೈದರಾಬಾದ್ : ಬಾಲಿವುಡ್ ಸೂಪರ್‌ಸ್ಟಾರ್ ಅಮಿರ್ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದೆ. ಮಕ್ಕಳೊಂದಿಗೆ ಆಟವಾಡುತ್ತಿರುವ ಅಮಿರ್ ಖಾನ್, ಮಾಸ್ಕ್ ಧರಿಸದೇ ಇರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸೆಲೆಬ್ರಿಟಿ ಛಾಯಾಗ್ರಾಹಕ ವೈರಲ್ ಭಯಾನಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಮಿರ್ ಅವರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮುಂಬೈನಲ್ಲಿ ಅಮಿರ್ ಕೆಲ ಮಕ್ಕಳೊಂದಿಗೆ ಮಾಸ್ಕ್ ಧರಿಸದೆ ಕ್ರಿಕೆಟ್ ಆಡುತ್ತಿರುವುದು ಈ ವಿಡಿಯೋದಲ್ಲಿ ಕಂಡು ಬರುತ್ತದೆ.
ಸೋಷಿಯಲ್ ಮೀಡಿಯಾ ಬಳಕೆದಾರರು, ಅಮಿರ್ ಖಾನ್ ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ:ದರ್ಶನ್ ಅಂತಹವರ ಜೊತೆ ಎಂದೂ ಕೆಲಸ ಮಾಡಿರಲಿಲ್ಲ: ಕೇರಳ ಬೆಡಗಿ ನವ್ಯ ನಾಯರ್
ಅಮಿರ್ ಖಾನ್ ಅವರಿಗೆ ಮುಖವಾಡ ಅಗತ್ಯವಿಲ್ಲ. ದೊಡ್ಡಣ್ಣ ಈಗಾಗಲೇ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ತೋರುತ್ತದೆ ಎಂದೆಲ್ಲ ಕಮೆಂಟ್ ಮಾಡಿ ಅಮಿರ್ ಕಾಲೆಳೆದಿದ್ದಾರೆ.