ಉಮರಿಯಾ : ಬಾಲಿವುಡ್ ನಟಿ ರವೀನಾ ಟಂಡನ್ ಮಧ್ಯಪ್ರದೇಶದಲ್ಲಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ತಮ್ಮ ಫ್ಯಾಮಿಲಿಯೊಂದಿಗೆ ಬಾಂಧವ್ಗಢ ಅರಣ್ಯಪ್ರದೇಶಕ್ಕೆ ಭೇಟಿ ನೀಡಿ ಹುಲಿ ಸಫಾರಿಯನ್ನ ಸಖತ್ ಎಂಜಾಯ್ ಮಾಡಿದ್ದಾರೆ.
ಸಫಾರಿ ಮುಗಿಸಿ ಹಿಂದಿರುಗುವಾಗ, ಬಫರ್ ವಲಯದ ಬೀಚ್ ರಸ್ತೆಯಲ್ಲಿ ಭಜರಂಗ್ ಹೆಸರಿನ ಹುಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದು, ನಟಿ ಅದನ್ನು ವಿಡಿಯೋ ಮಾಡಿದ್ದಾರೆ. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರವೀನಾ ಟಂಡನ್, ‘ಭಜರಂಗ್ ರಸ್ತೆಗೆ ಬಂದ ಕೂಡಲೇ’ ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.
- " class="align-text-top noRightClick twitterSection" data="
">
ಆ ಹುಲಿ ರಸ್ತೆ ದಾಟವವರೆಗೂ ಡ್ರೈವರ್, ಟ್ರಕ್ ಚಲಾಯಿಸಲಿಲ್ಲ. ಕಾಡು ಪ್ರಾಣಿಗಳು ರಸ್ತೆ ದಾಟಲು ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಇಂತಹ ಮಾರ್ಗಗಳಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
- " class="align-text-top noRightClick twitterSection" data="
">