ಸ್ಯಾನ್ ಫ್ರಾನ್ಸಿಸ್ಕೋ: ಏಪ್ರಿಲ್ 1ರಿಂದ ವೈಯಕ್ತಿಕ ಬಳಕೆದಾರರು ಮತ್ತು ಸಂಸ್ಥೆಗಳಿಗೆ ಟ್ವಿಟರ್ ಬ್ಲೂ ಬ್ಯಾಡ್ಜ್ಗಳನ್ನು ತೆಗೆದು ಹಾಕಲಾಗುವುದು ಎಂದು ಟ್ವಿಟರ್ ಸಿಇಒ ಎಲಾನ್ ಮಸ್ಕ್ ಘೋಷಿಸಿದ್ದು, ಇಂದಿನಿಂದಲೇ ಇದು ಜಾರಿಗೆ ತರಲಾಗಿದೆ. ಈ ಹಿನ್ನಲೆ ಶ್ವೇತ ಭವನ ತನ್ನ ಸಿಬ್ಬಂದಿಯ ಅಧಿಕೃತ ಟ್ವಿಟರ್ ಪ್ರೊಫೈಲ್ ವೆರಿಫೈಡ್ಗೆ ಯಾವುದೇ ಪಾವತಿಯನ್ನು ಮಾಡುವುದಿಲ್ಲ ಎಂದು ತಿಳಿಸಿದೆ. ಆಕ್ಸಿಯೋಸ್‌ನಲ್ಲಿನ ವರದಿಯ ಪ್ರಕಾರ, ಶ್ವೇತಭವನದ ಡಿಜಿಟಲ್ ತಂತ್ರದ ನಿರ್ದೇಶಕ ರಾಬ್ ಫ್ಲಾಹರ್ಟೆ ಅವರು ಇಮೇಲ್ ಮೂಲಕ ತಮ್ಮ ಸಿಬ್ಬಂದಿಗೆ ಈ ಸಂದೇಶ ರವಾನಿಸಿದ್ದಾರೆ.
ಸಿಬ್ಬಂದಿಗಳ ವೈಯಕ್ತಿಕ ಮಟ್ಟದ ಟ್ವಿಟರ್ ವೇರಿಫಿಕೇಷನ್ ಸೇವೆಗೆ ಯಾವುದೇ ಶುಲ್ಕವನ್ನು ಶ್ವೇತಭವನ ಒದಗಿಸುವುದಿಲ್ಲ. ಸದ್ಯ ಬ್ಲೂ ಟಿಕ್ ಸೇವೆ ಪಾವತಿಯಾಗಿದ್ದು, ಈ ಪಾವತಿ ಮಾಡಿದವರಿಗೆ ಮಾತ್ರ ಈ ಬ್ಲೂ ಟಿಕ್ ಅನ್ನು ಟ್ವಿಟರ್ ನೀಡುತ್ತಿದೆ. ಈ ಹಿನ್ನೆಲೆ ಸಿಬ್ಬಂದಿ ತಮ್ಮ ವೈಯಕ್ತಿಕ ಹಣವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಈ ಬ್ಲೂ ಟಿಕ್ ಸೇವೆಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದೆ.
ಶ್ವೇತ ಭವನ ಅಧಿಕಾರಿಗಳಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಗ್ರೇ ಚೆಕ್ಮಾರ್ಕ್ ನಿರಂತರವಾಗಿ ಮುಂದುವರೆಯಲಿದೆ. ಟ್ವಿಟರ್ ಅಪ್ಡೇಟ್ ನಿಯಮಗಳು ಹೊಸ ಅರ್ಹತಾ ಅವಶ್ಯಕತೆಗಳನ್ನು ಪೂರೈಸದ ಫೆಡರಲ್ ಏಜೆನ್ಸಿ ಖಾತೆಗಳಿಗೆ ಈ ವೆರಿಫಿಕೇಷನ್ ಪಾವತಿಸಲು ಇನ್ನು ಮುಂದೆ ಸಾಧ್ಯವಾಗುವುದಿಲ್ಲ ಎಂದು ಫ್ಲಾಹೆರ್ಟೆ ತಿಳಿಸಿದ್ದಾರೆ.
ಸಂಸ್ಥೆಗಳಿಗೆ ಸಿಗಲಿದೆ ವೇರಿಫಿಕೇಷನ್: ವೈಯಕ್ತಿಕ ಖಾತೆಗಳ ಬ್ಲೂ ಟಿಕ್ಗೆ ಪಾವತಿ ಕಡ್ಡಾಯ ಎಂದಿರುವ ಟ್ವಿಟರ್ ಶುಕ್ರವಾರ ಸಂಸ್ಥೆಗಳಿಗೆ ಈ ವೆರಿಫೀಕೆಶನ್ ಸೇವೆ ಜಾಗತಿಕವಾಗಿ ಲಭ್ಯವಾಗಿರಲಿದೆ ಎಂದು ಘೋಷಿಸಿದೆ. ಕಂಪನಿ ಅನುಸಾರ, ವೈರಿಫೈಡ್ ಸಂಸ್ಥೆಗಳು ಮತ್ತು ಅವುಗಳ ಅಂಗಸಂಸ್ಥೆಗಳಿಗೆ ಟ್ವಿಟರ್ನಿಂದ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳಲು ಹೊಸ ಮಾರ್ಗವಾಗಿದೆ. ವೇರಿಫೈಡ್ ಸಂಸ್ಥೆಗಳಿಗೆ ಸೇರುವ ಮೊದಲು ಎಲ್ಲಾ ಸಂಸ್ಥೆಗಳನ್ನು ವೇರಿಫಿಕೇಷನ್ ಮಾಡಲಾಗುತ್ತದೆ ಎಂದು ಕಂಪನಿ ಉಲ್ಲೇಖಿಸಿದೆ. ಸಂಸ್ಥೆಗಳ ವೇರಿಫಿಕೇಷನ್ ಸೇವೆಯನ್ನು ಮೊದಲು 'ಬ್ಲೂ ಫಾರ್ ಬ್ಯುಸಿನೆಸ್' ಎಂದು ಕರೆಯಲಾಗುತ್ತಿತ್ತು.
ಇಂದಿನಿಂದ ಪಾವತಿ ಜಾರಿಗೆ: ಬ್ಲೂ ಚೆಕ್ ಮಾರ್ಕ್ಗಳನ್ನು ಪರಿಶೀಲಿಸಿದ ಟ್ವಿಟ್ಟರ್ ಬಳಕೆದಾರರು ಟ್ವಿಟ್ಟರ್ ಬ್ಲೂಗೆ ಪಾವತಿಸಬೇಕಾಗುತ್ತದೆ. ಇದು ಯುಎಸ್ನಲ್ಲಿ ವೆಬ್ ಮೂಲಕ ತಿಂಗಳಿಗೆ 8 ಡಾಲರ್ ಮತ್ತು ಐಒಎಸ್ ಮತ್ತು ಆ್ಯಂಡ್ರೋಯ್ಡ್ನಲ್ಲಿನ ಅಪ್ಲಿಕೇಶನ್ ಪಾವತಿಗಳ ಮೂಲಕ ತಿಂಗಳಿಗೆ 11 ಡಾಲರ್ ವೆಚ್ಚವಾಗುತ್ತದೆ. ಟ್ವಿಟ್ಟರ್ ಕಂಪನಿಯು ಎಲ್ಲಾ ಬ್ಲೂ ಚೆಕ್ಮಾರ್ಕ್ ತೆಗೆದುಹಾಕುತ್ತದೆ ಎಂದು ಪದೇ ಪದೇ ಹೇಳಿದ್ದಾರೆ. ಏಕೆಂದರೆ ಅದು ಬಳಕೆದಾರರಿಗೆ ಶುಲ್ಕ ವಿಧಿಸುವ ಮೂಲಕ ಹಣ ಗಳಿಸಲು ಬಯಸುತ್ತಿದೆ.
ಕಂಪನಿಗಳು ಮತ್ತು ಬ್ರ್ಯಾಂಡ್‌ಗಳಿಗಾಗಿ ಟ್ವಿಟ್ಟರ್ ಇತ್ತೀಚೆಗೆ ಗೋಲ್ಡ್ ಚೆಕ್ ಮಾರ್ಕ್ ಅನ್ನು ಪರಿಚಯಿಸಿತು. ಸರ್ಕಾರಿ ಖಾತೆಗಳನ್ನು ಗ್ರೇ ಚೆಕ್-ಮಾರ್ಕ್‌ಗೆ ವರ್ಗಾಯಿಸಿತು. ಚಿನ್ನದ ಬ್ಯಾಡ್ಜ್ ಅನ್ನು ಕಾಪಾಡಿಕೊಳ್ಳಲು ತಿಂಗಳಿಗೆ 1,000 ಡಾಲರ್ ಪಾವತಿಸಲು ಟ್ವಿಟರ್ ಕಂಪನಿಗಳಿಗೆ ಹೇಳಿದೆ. ಪಾವತಿಸದ ಬ್ರ್ಯಾಂಡ್‌ಗಳು ಮತ್ತು ಸಂಸ್ಥೆಗಳು ತಮ್ಮ ಚೆಕ್‌ಮಾರ್ಕ್‌ಗಳನ್ನು ಕಳೆದುಕೊಳ್ಳುತ್ತವೆ.
ಇದನ್ನೂ ಓದಿ: ನಂಬಲಸಾಧ್ಯ ರೀತಿಯ ತೆಳುವಾದ ಡಿಸ್ಪ್ಲೇ ಹೊಂದಲಿದೆ ಐಫೋನ್ 15 ಪ್ರೊ ಮಾಕ್ಸ್!