ETV Bharat / science-and-technology

ಮತ್ತಷ್ಟು ಹೊಸ ವೈಶಿಷ್ಟ್ಯ ಪರಿಚಯಿಸಿದ ವಾಟ್ಸ್​ಆ್ಯಪ್​​​; ಏನಿದು ಟೆಕ್ಸ್ಟ್​​ ಡಿಟೆಕ್ಷನ್? - ಈಟಿವಿ ಭಾರತ್​ ಕನ್ನಡ

ಈ ವೈಶಿಷ್ಟ್ಯದಲ್ಲಿ ಸ್ಟೀಕರ್​ ಮೇಕರ್​ ಟೂಲ್​ ಅನ್ನು ಐಒಎಸ್​ ಬಳಕೆದಾರರು ಇಮೇಜ್​ ಹಾಗೂ ಸ್ಟೀಕರ್​ ಕೂಡಾ ಬದಲಾಯಿಸಬಹುದಾಗಿದೆ.

whatsapp-has-introduced-another-new-feature-that-is-text-detection

author img

By

Published : Mar 16, 2023, 5:43 PM IST

ಸದಾ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ಮತ್ತಷ್ಟು ಬಳಕೆದಾರ ಸ್ನೇಹಿಯಾಗಿರುವ ಮೆಟಾ ಇದೀಗ ಮತ್ತೊಂದು ಹೊಸ ಲಕ್ಷಣವನ್ನು ವಾಟ್ಸ್​ಆ್ಯಪ್​​​​​ನಲ್ಲಿ ಪರಿಚಯಿಸಿದೆ. ಜಗತ್ತಿನಾದ್ಯಂತ ವಾಟ್ಸ್​ಆ್ಯಪ್​​​ ಬಳಕೆದಾರರು ಹೆಚ್ಚಿದ್ದು, ಅವರಿಗೆ ಅನುಕೂಲವಾಗುವ, ಸುಲಭವಾಗುವ ವೈಶಿಷ್ಟ್ಯಗಳಲ್ಲಿ ಪರಿಚಯಿಸುತ್ತಲೇ ಇದೆ. ಇತ್ತೀಚೆಗಷ್ಟೇ ಗ್ರೂಪ್​ ಎಕ್ಸ್​​ಪೈರಿ ಟೈಮ್​ ಅನ್ನು ಪರಿಚಯಿಸಿದ ವಾಟ್ಸ್​ಆ್ಯಪ್​​ ​ಇದೀಗ ಟೆಕ್ಸ್​ ಡಿಟೆಕ್ಷನ್​ ಅನ್ನು ಐಒಎಸ್​ ಬಳಕೆದಾರರಿಗೆ ಪರಿಚಯಿಸಿದೆ. ಈ ಮೂಲಕ ಬಳಕೆದಾರರು ಇನ್ನಷ್ಟು ಪದಗಳನ್ನು ತಮ್ಮ ಸಂದೇಶಗಳಲ್ಲಿ ಕಳುಹಿಸುವ ಸೌಲಭ್ಯ ಮಾಡಿಕೊಟ್ಟಿದೆ.

ಏನಿದು ಟೆಕ್ಸ್ಟ್​​ ಡಿಟೆಕ್ಷನ್​: ಐಒಎಸ್​ ಬಳಕೆದಾರರಿಗೆ ಪರಿಚಯಿಸಿರುವ ಈ ಟೆಕ್ಸ್ಟ್​ ಡಿಟೆಕ್ಷನ್ ನಿಂದಾಗಿ ಸಂದೇಶದಲ್ಲಿ ಇಮೇಜ್​ ಜೊತೆಗೆ ಹೆಚ್ಚಿನ ಪದಗಳನ್ನು ಬಳಸಬಹುದಾಗಿದೆ. ಬಳಕೆದಾರರು ಇಮೇಜ್​ ಅನ್ನು ತೆರೆದಾಗ ಅದರಲ್ಲಿ ಕೆಲವು ಪದಗಳನ್ನು ಕಾಡಬಹುದು. ಇಮೇಜ್​​ನಲ್ಲಿರುವ ಈ ಪದಗಳನ್ನು ಕಾಪಿ ಮಾಡಲು ಇದೀಗ ಹೊಸ ಬಟನ್ ಕಾಣಬಹುದಾಗಿದೆ. ಖಾಸಗಿತನದ ಕಾರಣದಿಂದ ಈ ವೈಶಿಷ್ಟ್ಯವು ಒಮ್ಮೆ ಚಿತ್ರಗಳ ವೀಕ್ಷಣೆಗೆ ಹೊಂದಿಕೆಯಾಗುವುದಿಲ್ಲ. ಸ್ಟೀಕರ್​ ಮೇಕರ್​ ಟೂಲ್​ ಅನ್ನು ಐಒಎಸ್​ ಬಳಕೆದಾರರು ಇಮೇಜ್​ ಹಾಗೂ ಸ್ಟೀಕರ್​ ಬದಲಾಯಿಸಬಹುದಾಗಿದೆ.

ಈ ಹಿಂದೆ ಇದೇ ರೀತಿಯ ವಾಯ್ಸ್​​ ಸ್ಟೇಟಸ್​ ಅಪ್​ಡೇಟ್​ ವೈಶಿಷ್ಟ್ಯವನ್ನು ಐಒಎಸ್​ ಬಳಕೆದಾರರಿಗೆ ಪರಿಚಯಿಸಲಾಗಿತ್ತು. ಇದರ ಸಹಾಯದಿಂದ ಬಳಕೆದಾರರು ಸ್ಟೇಟಸ್​ನಲ್ಲಿ ವಾಯ್ಸ್​ ನೋಟ್​ ಅನ್ನು ರೆಕಾರ್ಡ್​ ಮಾಡಿ ಶೇರ್​ ಮಾಡಬಹುದಾಗಿತ್ತು. ಈ ವಾಯ್ಸ್​ ನೋಟ್​ ರೇಕಾರ್ಡ್​ ಮಾಡುವ ಗರಿಷ್ಠ ಅವಧಿ 30 ಸೆಕೆಂಡ್​ ಆಗಿದ್ದು, ಈ ವಾಯ್ಸ್​ ನೋಟ್​​ ಅನ್ನು ಚಾಟ್​ಗಳ ಮೂಲಕ ಸ್ಟೇಟಸ್​ಗೆ ಕಳುಹಿಸಬಹುದು.

ಹೊಸ ಭಾಗಿದಾರರ ಅನುಮತಿ: ವಾಟ್ಸ್​​​​​ಆ್ಯಪ್​​ನ ಐಒಎಸ್​ ಮತ್ತು ಆ್ಯಂಡ್ರಾಯ್ಡ್​​ ಇದೀಗ ಗ್ರೂಪ್​ ಸೆಟ್ಟಿಂಗ್​ನಲ್ಲಿ ನಲ್ಲಿ ಅಪ್ರೂವ್​ ನ್ಯೂ ಪಾರ್ಟಿಸಿಪಂಟ್​ ವೈಶಿಷ್ಟ್ಯ ಪರಿಚಯಿಸಿದೆ. ಈ ವೈಶಿಷ್ಟ್ಯದ ಮೂಲಕ ಗ್ರೂಪ್​ ಆಡ್ಮಿನಿಸ್ಟೇಟರ್, ತಮ್ಮ ಗುಂಪುಗಳಲ್ಲಿ ಹೊಸ ಸದಸ್ಯರ ಅನುಮೋದನೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಗ್ರೂಪ್​ಗಳಿಗೆ ಯಾರು ಬೇಕಾದರೂ ಸೇರಬಹುದು ಎಂಬ ಅವಕಾಶ ಇದ್ದಾಗ, ಆಡ್ಮಿನ್​ ಅನುಮತಿ ಮೇಲೆ ಇದು ಕಾರ್ಯ ನಿರ್ವಹಣೆ ಮಾಡಬಹುದು.

ಈ ವೈಶಿಷ್ಟ್ಯವು ಗುಂಪಿಗೆ ಸೇರುವವರ ಮೇಲೆ ಹೆಚ್ಚಿನ ನಿಯಂತ್ರಣ ಮಾಡಲು ಸಾಧ್ಯವಾಗಲುತ್ತದೆ. ಜೊತೆಗೆ ಹೊಸ ಭಾಗವಹಿಸುವವರ ಆಯ್ಕೆಯನ್ನು ಟಾಗಲ್ ಮಾಡುವ ಮೂಲಕ ಹೊಸದಾಗಿ ಗುಂಪಿಗೆ ಸೇರುವವರಿಗೆ ಒಪ್ಪಿಗೆ ಸೂಚಿಸಲು ಅಥವಾ ತಿರಸ್ಕರಿಸಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯವು ಮಂದಿನ ದಿನದಲ್ಲಿ ಇನ್ನಷ್ಟು ಬೀಟಾ ಪರೀಕ್ಷಕಗೆ ಒಳಪಡಲಿದ್ದು, ಶೀಘ್ರದಲ್ಲೇ ಹೊರ ಬರಲು ಸಜ್ಜಾಗಿದೆ ಎನ್ನಲಾಗಿದೆ.

ಶೆಡ್ಯೂಲ್​ ಗ್ರೂಪ್​ ಕಾಲ್​ ಫೀಚರ್​ : ಈ ತಂತ್ರಜ್ಞಾನ ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್​​ ಮತ್ತು ಐಒಎಸ್ ಬಳಕೆದಾರರಿಗೆ ಇದು ಲಭ್ಯವಾಗಲಿದೆ. ಇನ್ನು ಈ ಶೆಡ್ಯೂಲ್​ ಗ್ರೂಪ್​ ಕಾಲ್ಸ್​ (ವೇಳಾಪಟ್ಟಿ ಗುಂಪು ಕರೆ) ತಂತ್ರಜ್ಞಾನವು ವಾಟ್ಸ್​ಆ್ಯಪ್​​ ​ ಬಳಕೆದಾರರು ಇತರ ವಾಟ್ಸ್​ಆ್ಯಪ್​​ ​​ ಗುಂಪಿನ ಸದಸ್ಯರೊಂದಿಗೆ ಕರೆ ಮಾಡಲು ಬಳಕೆ ಮಾಡಬಹುದಾಗಿದೆ. ಇಲ್ಲಿ ಬಳಕೆದಾರರಿಗೆ ಒಂದು ಆಯ್ಕೆಯನ್ನು ನೀಡಲಾಗಿರುತ್ತದೆ. ಈ ಆಯ್ಕೆಯ ಮೂಲಕ ಬಳಕೆದಾರರು ಯಾವಾಗ ಮತ್ತು ಯಾರಿಗೆ ಕರೆ ಮಾಡಬಹುದು ಎಂಬುದನ್ನು ನಿರ್ಧರಿಸಬಹುದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ

ಇದನ್ನೂ ಓದಿ: ಫೇಸ್​ಬುಕ್​ನಿಂದ ಟ್ವಿಟರ್​ ಮಾದರಿಯ ಆ್ಯಪ್ ಶೀಘ್ರ: ಕಾಪಿ ಕ್ಯಾಟ್ ಎಂದ ಮಸ್ಕ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.