ETV Bharat / science-and-technology

WhatsApp ಹೊಸ ಫೀಚರ್‌: ಗ್ರೂಪ್​ ಅಡ್ಮಿನ್​ಗೆ ಇನ್ಮುಂದೆ ಈ ಆಯ್ಕೆ ಸಿಗುತ್ತೆ!

ವಾಟ್ಸಾಪ್‌ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಗ್ರೂಪ್ ಅಡ್ಮಿನ್ ಫೀಚರ್​ಬಂದಿದೆ.

ವಾಟ್ಸಾಪ್‌
ವಾಟ್ಸಾಪ್‌
author img

By

Published : Aug 31, 2022, 8:17 PM IST

Updated : Aug 31, 2022, 8:26 PM IST

ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌ ಹೊಸ ಫೀಚರ್​ ಬಿಡುಗಡೆ ಮಾಡಿದೆ. ಇದು ಗ್ರೂಪ್ ಅಡ್ಮಿನ್‌ಗೆ ಎಲ್ಲರೂ ಕಳುಹಿಸುವ ಮೆಸೇಜ್ ಡಿಲೀಟ್​ ಮಾಡುವ ಆಯ್ಕೆಯಾಗಿದೆ. ಕೆಲವು ದಿನಗಳ ಹಿಂದೆ ಗೂಗಲ್​ ಪೇ ಬಿಟಾ ಪ್ರೋಗ್ರಾಂ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿತ್ತು.

ವರದಿಗಳ ಪ್ರಕಾರ, ನೀವು ಗ್ರೂಪ್ ಅಡ್ಮಿನ್ ಆಗಿದ್ರೆ, ಅಲ್ಲಿಗೆ ಬರುವ ಪ್ರತಿಯೊಂದು ಸಂದೇಶವನ್ನು ಅಳಿಸಲು ಎಲ್ಲರಿಗೂ ಇದನ್ನು ಅಳಿಸಬಹುದೇ (Delete for everyone) ಎಂಬ ಆಯ್ಕೆ ಬರುತ್ತದೆ. ಅಂದರೆ, ಗ್ರೂಪ್ ಅಡ್ಮಿನ್ ಎಲ್ಲರೂ ಕಳಿಸುವ ಮೆಸೇಜ್ ಡಿಲೀಟ್​​ ಮಾಡುವ ಆಯ್ಕೆ ಹೊಂದಿದ್ದಾರೆ ಎಂದರ್ಥ. ಇದರ ಜೊತೆಗೆ, ಗ್ರೂಪ್‌ನ​ ಪ್ರತಿಯೊಬ್ಬ ಸದಸ್ಯನೂ ನೀವು ಮೆಸೇಜ್ ಅಳಿಸಿರುವುದನ್ನು ನೋಡಬಹುದಾಗಿದೆ.

ಇದನ್ನೂ ಓದಿ:ವಾಟ್ಸ್​ಆ್ಯಪ್​ ಸಂದೇಶಗಳನ್ನು ರಹಸ್ಯವಾಗಿ ಓದುವುದು ಹೇಗೆ ಎಂದು ತಿಳಿಯಿರಿ..

ಇತ್ತೀಚಿನ ಹೊಸ ಐಟಿ ನಿಯಮ 2021 ರ ಪ್ರಕಾರ, ಜೂನ್ ತಿಂಗಳಲ್ಲಿ ಭಾರತದಲ್ಲಿ 22 ಲಕ್ಷಕ್ಕೂ ಹೆಚ್ಚು ಆಕ್ಷೇಪಾರ್ಹ ವಾಟ್ಸಾಪ್​​ ಖಾತೆಗಳನ್ನು ನಿಷೇಧಿಸಲಾಗಿದೆ. ಮೇ ತಿಂಗಳಲ್ಲಿ 19 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಡಿಲೀಟ್​ ಮಾಡಲಾಗಿದೆ.

Last Updated : Aug 31, 2022, 8:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.