ETV Bharat / science-and-technology

ಸೂರ್ಯನಿಗಿಂತ ಮೊದಲೇ ಭೂಮಿಯ ಮೇಲೆ ನೀರಿತ್ತು, ನಕ್ಷತ್ರಗಳಲ್ಲಿ ಹುಟ್ಟಿತ್ತು: ಹೊಸ ಸಂಶೋಧನೆ

author img

By

Published : Mar 12, 2023, 5:57 PM IST

ಭೂಮಿಯ ಮೇಲಿನ ನೀರು ಸೂರ್ಯನ ಉಗಮಕ್ಕಿಂತಲೂ ಮುಂಚೆ ಹುಟ್ಟಿದ್ದು ಎಂದು ಸಂಶೋಧನೆಯೊಂದು ಹೇಳಿದೆ. ಭೂಮಿ ಮತ್ತು ಸೌರವ್ಯೂಹದ ಮಧ್ಯದ ನೀರಿನ ಮಿಸ್ಸಿಂಗ್ ಲಿಂಕ್ ಅನ್ನು ಈ ಮೂಲಕ ಕಂಡು ಹಿಡಿಯಬಹುದು ಎಂದು ಸಂಶೋಧಕರು ಹೇಳಿದ್ದಾರೆ.

Water on Earth older than our Sun
Water on Earth older than our Sun

ನವದೆಹಲಿ : ಸಕಲ ಜೀವರಾಶಿಯ ಉಗಮಕ್ಕೆ ಕಾರಣವಾಗಿರುವ ಹಾಗೂ ಅವುಗಳ ಅಸ್ತಿತ್ವಕ್ಕೆ ಬೇಕಾಗಿರುವ ನೀರು ಈ ಭೂಮಿಯ ಮೇಲೆ ಹುಟ್ಟಿದ್ದು ಯಾವಾಗ ಎಂಬ ವಿಚಾರ ಬಹಳ ಕುತೂಹಲಕರವಾಗಿದೆ. ನಭೋಮಂಡಲದಲ್ಲಿ ಸೂರ್ಯನ ಉಗಮಕ್ಕೆ ಮುಂಚೆಯೇ ಬಾಹ್ಯಾಕಾಶದಲ್ಲಿ ನಕ್ಷತ್ರಗಳ ಮಧ್ಯೆ ನೀರು ಹುಟ್ಟಿತ್ತು ಎಂದು ಹೊಸ ಸಂಶೋಧನೆಯೊಂದು ಹೇಳಿದೆ. ನಮ್ಮ ಭೂಮಿ ಮತ್ತು ಸೌರವ್ಯೂಹದ ಮಧ್ಯೆ ನೀರಿನ ವಿಷಯದಲ್ಲಿನ ಮಿಸ್ಸಿಂಗ್ ಲಿಂಕ್ ಹುಡುಕಲು ಈ ಸಂಶೋಧನೆ ಸಹಾಯ ಮಾಡಬಹುದು. ಅಟಕಾಮಾ ಲಾರ್ಜ್ ಮಿಲಿಮೀಟರ್/ಸಬ್ ಮಿಲಿಮೀಟರ್ ಅರೇ (Atacama Large Millimeter/submillimeter Array -ALMA) ದೂರದರ್ಶಕವನ್ನು ಬಳಸಿಕೊಂಡು, ಖಗೋಳಶಾಸ್ತ್ರಜ್ಞರು ಭೂಮಿಯಿಂದ ಸುಮಾರು 1300 ಬೆಳಕಿನ ವರ್ಷಗಳ ದೂರದಲ್ಲಿರುವ 'V883 ಓರಿಯಾನಿಸ್' ಹೆಸರಿನ ನಕ್ಷತ್ರದ ಸುತ್ತಲಿನ ಗ್ರಹ ವೃತ್ತದಲ್ಲಿ ಅನಿಲ ರೂಪದ ನೀರು ಇರುವುದನ್ನು ಪತ್ತೆ ಮಾಡಿದ್ದಾರೆ.

ಅನಿಲ ಮೋಡಗಳನ್ನು ಸೃಷ್ಟಿಸುವ ನಕ್ಷತ್ರಗಳಿಂದ ಹಿಡಿದು ಗ್ರಹಗಳವರೆಗೆ ನೀರು ಹುಟ್ಟಿದ ಪಯಣವನ್ನು ವಿವರಿಸುವ ರಾಸಾಯನಿಕ ಸಂಯೋಜನೆಯನ್ನು ಹೊಸದಾಗಿ ಪತ್ತೆ ಮಾಡಲಾದ ಅನಿಲ ರೂಪದ ನೀರು ಹೊಂದಿದೆ. ಭೂಮಿಯ ಮೇಲಿನ ನೀರು ಸೂರ್ಯನಿಗಿಂತಲೂ ಹಳೆಯದು ಎಂಬ ವಾದಕ್ಕೆ ಈ ಅಂಶಗಳು ಬಲ ನೀಡುತ್ತವೆ. ನಮ್ಮ ಸೌರವ್ಯೂಹದಲ್ಲಿನ ನೀರಿನ ಮೂಲವು ಸೂರ್ಯನಿಗಿಂತ ಹಳೆಯದು ಎಂದು ನಾವೀಗ ಹೇಳಬಹುದು ಎಂದು ಅಮೆರಿಕದ ರಾಷ್ಟ್ರೀಯ ರೇಡಿಯೊ ಖಗೋಳ ವೀಕ್ಷಣಾಲಯದ ಖಗೋಳಶಾಸ್ತ್ರಜ್ಞ ಮತ್ತು ನೇಚರ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಮುಖ ಲೇಖಕ ಜಾನ್ ಜೆ ಟೋಬಿನ್ ಹೇಳಿದ್ದಾರೆ.

ಅನಿಲ ಮತ್ತು ಧೂಳಿನ ಮೋಡವು ಕುಸಿದಾಗ, ಅದು ಅದರ ಮಧ್ಯದಲ್ಲಿ ನಕ್ಷತ್ರವನ್ನು ರೂಪಿಸುತ್ತದೆ. ನಕ್ಷತ್ರದ ಸುತ್ತಲೂ ಮೋಡದಿಂದ ಉಂಟಾದ ವಸ್ತುವು ಡಿಸ್ಕ್ ಅನ್ನು ರೂಪಿಸುತ್ತದೆ. ಕೆಲವು ಮಿಲಿಯನ್ ವರ್ಷಗಳ ಅವಧಿಯಲ್ಲಿ, ಡಿಸ್ಕ್‌ನಲ್ಲಿರುವ ವಸ್ತುಗಳು ಒಟ್ಟಿಗೆ ಸೇರಿಕೊಂಡು ಧೂಮಕೇತುಗಳು, ಕ್ಷುದ್ರಗ್ರಹಗಳು ಮತ್ತು ಅಂತಿಮವಾಗಿ ಗ್ರಹಗಳನ್ನು ರೂಪಿಸುತ್ತದೆ. ಈ ಸಂಶೋಧನೆಗಾಗಿ ಟೋಬಿನ್ ಮತ್ತು ಅವರ ತಂಡವು ALMA ಅನ್ನು ಬಳಸಿದೆ. ಈ ಸಂಶೋಧನೆಯಲ್ಲಿ ಯುರೋಪಿಯನ್ ಸದರ್ನ್ ಅಬ್ಸರ್ವೇಟರಿ (ESO) ಪಾಲುದಾರರಾಗಿದೆ. ನೀರಿನ ರಾಸಾಯನಿಕ ಘಟಕಗಳನ್ನು ಮತ್ತು ನಕ್ಷತ್ರ ರೂಪಿಸುವ ಮೋಡದಿಂದ ಗ್ರಹಗಳಿಗೆ ನೀರು ಹುಟ್ಟಿದ ಮಾರ್ಗವನ್ನು ಅಳೆಯಲು ಯುರೋಪಿಯನ್ ಸದರ್ನ್ ಅಬ್ಸರ್ವೇಟರಿ ನೆರವಾಗಿದೆ.

ಟೋಬಿನ್‌ ಅವರ ತಂಡವು ಸ್ವಲ್ಪ ಭಾರವಾದ ನೀರಿನ ಘಟಕವನ್ನು ಅಧ್ಯಯನ. ಹೈಡ್ರೋಜನ್ ಪರಮಾಣುಗಳಲ್ಲಿ ಒಂದನ್ನು ಡ್ಯೂಟೇರಿಯಮ್‌ನಿಂದ ಬದಲಾಯಿಸಲಾದ ನೀರನ್ನು ಭಾರವಾದ ನೀರು ಅಥವಾ ಹೇವಿ ವಾಟರ್ ಎಂದು ಕರೆಯಲಾಗುತ್ತದೆ. ಡ್ಯೂಟೇರಿಯಮ್‌ ಇದು ಹೈಡ್ರೋಜನ್‌ನ ಭಾರವಾದ ಐಸೊಟೋಪ್ ಆಗಿದೆ. ಸರಳ ಮತ್ತು ಭಾರವಾದ ನೀರಿನ ಘಟಕಗಳು ವಿಭಿನ್ನ ಪರಿಸ್ಥಿತಿಗಳಲ್ಲಿ ರೂಪುಗೊಳ್ಳುವುದರಿಂದ, ಅಂಥ ನೀರು ಯಾವಾಗ ಮತ್ತು ಎಲ್ಲಿ ರೂಪುಗೊಂಡಿತು ಎಂಬುದನ್ನು ಪತ್ತೆಹಚ್ಚಲು ಅವುಗಳ ಅನುಪಾತವನ್ನು ಬಳಸಬಹುದು. ಉದಾಹರಣೆಗೆ, ಕೆಲವು ಸೌರವ್ಯೂಹದ ಧೂಮಕೇತುಗಳಲ್ಲಿನ ಈ ಅನುಪಾತವು ಭೂಮಿಯ ಮೇಲಿನ ನೀರನ್ನು ಹೋಲುತ್ತದೆ ಎಂದು ಕಂಡುಬಂದಿದೆ. ಇದರ ಪ್ರಕಾರ ಧೂಮಕೇತುಗಳು ಭೂಮಿಗೆ ನೀರನ್ನು ತಲುಪಿಸಿರಬಹುದು ಎಂಬುದನ್ನು ಸೂಚಿಸುತ್ತದೆ ಎಂದು ಸಂಶೋಧಕರು ಬರೆದಿದ್ದಾರೆ. ಇಂಥ ಸಂದರ್ಭದಲ್ಲಿ V883 Orionis ಇದು ನಮಗೆ ಬೇಕಾದ ನೀರಿನ ಮಿಸ್ಸಿಂಗ್ ಲಿಂಕ್ ಆಗಿದೆ ಎನ್ನುತ್ತಾರೆ ಟೋಬಿನ್.

ಇದನ್ನೂ ಓದಿ : ದಿನಚರಿಯ ಸೂಕ್ತ ನಿರ್ವಹಣೆಯಿಂದ ಹದಿಹರೆಯದವರಲ್ಲಿ ನಿದ್ರಾವಧಿ ಹೆಚ್ಚಳ ಸಾಧ್ಯ: ಸಂಶೋಧನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.