ಒಂಟಾರಿಯೊ (ಕೆನಡಾ): ನೈಸರ್ಗಿಕ ಭಾಷೆಯ ಪ್ರಶ್ನೆಗಳಿಗೆ ವ್ಯಾಕರಣ ಬದ್ಧವಾಗಿ ಸರಿಯಾದ ಉತ್ತರವನ್ನು ನೀಡುವ ಅಮೆರಿಕಾದ ಲಾಭರಹಿತ ಕಂಪನಿಯಾದ ಓಪನ್ಎಐ (openAI) ನ ಚಾಟ್ಜಿಪಿಟಿಯನ್ನು ಶಿಕ್ಷಣ ತಜ್ಞರು ನಿಷೇದಿಸಲು ಮುಂದಾಗಿದ್ದಾರೆ. ಚಾಟ್ಜಿಪಿಟಿಯಿಂದ ಪಡೆದ ಎಲ್ಲ ಉತ್ತರಗಳು ಮತ್ತು ಶಿಕ್ಷಕರು ಹೇಳುವ ಉತ್ತರಗಳು ಎರಡೂ ಕೆಲವಷ್ಟು ಮಾತ್ರವೇ ಹೊಂದಾಣಿಕೆ ಆಗುವುದರಿಂದ ಶೈಕ್ಷಣಿಕ ಪ್ರಕಾಶಕರು ಚಾಟ್ ಜಿಪಿಟಿಯನ್ನು ನಿಷೇಧಿಸಲು ಮುಂದಾಗಿದ್ದಾರೆ ಮತ್ತು ಅದನ್ನು ಬಳಸದಂತೆ ಕಟ್ಟುನಿಟ್ಟಾದ ಮಾರ್ಗಸೂಚಿಯನ್ನು ಹೊರಡಿಸಲು ನಿರ್ಧರಿಸಿದ್ದಾರೆ. ಫ್ರಾನ್ಸ್ನ ಹೆಸರಾಂತ ವಿಜ್ಞಾನ ಕಾಲೇಜುಗಳಲ್ಲಿ ಒಂದಾದ ‘ಸೈನ್ಸ್ ಪೋ’ ಕಾಲೇಜು ಮತ್ತು ಆಸ್ಟ್ರೇಲಿಯಾದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಚಾಟ್ಜಿಪಿಟಿಯ ಬಳಕೆಯನ್ನು ನಿಷೇಧ ಮಾಡಲಾಗಿದೆ.
ಈ ನಿಷೇಧಗಳು ಕೇವಲ ಚಾಟ್ಜಿಟಿಪಿ ಪ್ರತಿಕ್ರಿಯೆ ನೀಡುವ ಗುಣಲಕ್ಷಣವಿಲ್ಲದ ಉತ್ತರವನ್ನು ನಕಲಿ ಮಾಡುವ ವಿದ್ಯಾರ್ಥಿಯನ್ನು ಹಿಡಿಯುವ ಬಗ್ಗೆ ಅಲ್ಲ, ಬದಲಿಗೆ, ಚಾಟ್ಬಾಟ್ ಹೇಳುವ ಉತ್ತರಗಳನ್ನು ನಾವು ಏಕೆ ನಂಬಬೇಕು? ಎಂಬ ಪ್ರಶ್ನೆ ಪ್ರತಿಬಿಂಬಿಸುತ್ತದೆ. ಇದು ಬಹಳ ಮುಖ್ಯವಾದ ಪ್ರಶ್ನೆ ಆಗಿದೆ ಏಕೆಂದರೆ ನಮ್ಮ ಸಮಾಜದ ಅಡಿಪಾಯವನ್ನು ಒಳಗೊಂಡಿರುವ ಮಾಹಿತಿಯ ಮೂಲಗಳಲ್ಲಿ ಚಾಟ್ಜಿಪಿಟಿ ಮತ್ತು ಅದರಂತೆ ಇರುವ ಇತರೆ ಪ್ರೋಗ್ರಾಂಗಳನ್ನು ನಮಗೆ ಅರಿವಿಲ್ಲದೇ ಸುಲಭವಾಗಿ ಬಳಸಬಹುದಾಗಿದೆ.
ನಂಬಿಕೆ ಮತ್ತು ಮಾಹಿತಿ: ನಾವು ಕೆಲವು ಮಾಹಿತಿ ಮೂಲಗಳನ್ನು ಹೆಚ್ಚು ವಿಶ್ವಾಸಾರ್ಹವೆಂದು ಏಕೆ ನೋಡುತ್ತೇವೆ ಎಂಬುದರ ಬಗ್ಗೆ ಕುರಿತು ಯೋಚಿಸಿ, ಯುರೋಪಿಯನ್ ಜ್ಞಾನೋದಯದ ನಂತರ, ಮನುಷ್ಯರು ಸಾಮಾನ್ಯವಾಗಿ ಜ್ಞಾನದೊಂದಿಗೆ ವೈಜ್ಞಾನಿಕ ಜ್ಞಾನವನ್ನು ಸಮೀಕರಿಸಲು ಒಲವು ತೋರಿದ್ದಾರೆ. ವಿಜ್ಞಾನವು ಪ್ರಯೋಗಾಲಯ ಸಂಶೋಧನೆಗಿಂತ ಹೆಚ್ಚಿನದಾಗಿದ್ದು ಮತ್ತು ಪ್ರಾಯೋಗಿಕವಾಗಿ ಆಧಾರಿತ ಪುರಾವೆಗಳಿಗೆ ಹೆಚ್ಚು ಆದ್ಯತೆ ನೀಡುತ್ತದೆ. ಸಾಕ್ಷ್ಯ ಸಂಗ್ರಹಣೆ ಮತ್ತು ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಪಾರದರ್ಶಕ ವಿಧಾನಗಳ ಅನ್ವೇಷಣೆಯಾಗಿದೆ. ಇದು ಎಲ್ಲ ಜ್ಞಾನವನ್ನು ನಿರ್ಣಯಿಸುವ ಮಾನದಂಡವಾಗಿದೆ.
ಉದಾಹರಣೆಗೆ ಪತ್ರಕರ್ತರು ಮಾಹಿತಿಯನ್ನು ತನಿಖೆ ಮಾಡವುದರಿಂದ ಮತ್ತು ಪುರಾವೆಗಳನ್ನು ನೀಡುವುದರಿಂದ ಹೆಚ್ಚು ವಿಶ್ವಾಸಾರ್ಹತೆಯನ್ನು ಹೊಂದಿದ್ದಾರೆ. ಕೆಲವೊಮ್ಮೆ ಪತ್ರಕರ್ತರು ನೀಡುವ ವರದಿಯಲ್ಲಿ ದೋಷಗಳು ಅಥವಾ ಕೆಲವು ತಪ್ಪುಗಳು ಇರುತ್ತವೆ, ಆದರೆ ಅದು ವೃತ್ತಿಯ ಅಧಿಕಾರವನ್ನು ಬದಲಾಯಿಸುವುದಿಲ್ಲ. ಅದೇ ರೀತಿ ಶಿಕ್ಷಣ ತಜ್ಞರಿಗು ಇದು ಅನ್ವಯಿಸುತ್ತದೆ ಏಕೆಂದರೆ ಚಾಟ್ಜಿಪಿಟಿಯಂತಹ ಕೃತಕ ಬುದ್ದಿಮತೆಯ ಪ್ರೋಗ್ರಾಂಗಳು ಎಲ್ಲಾ ವಿಷಯಗಳಲ್ಲು ಪರಿಣಿತರಾಗಿ ಶಿಕ್ಷಕರ ಸ್ಥಾನಮಾನವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ.
ಸತ್ಯ ಮತ್ತು ಔಟ್ಪುಟ್ಗಳು : ಚಾಟ್ಜಿಪಿಟಿ ಮತ್ತು ಶಿಕ್ಷಕರ ಉತ್ತರವು ಒಂದೇ ರೀತಿ ಇರುತ್ತದೆ ಆದರೆ, ವಿದ್ಯಾರ್ಥಿಗಳು ಶಿಕ್ಷಕರ ಉತ್ತರವನ್ನು ನಂಬುವ ಬದಲು ಕೃತಕ ಬುದ್ದಿಮತೆ ನೀಡಿರುವ ಉತ್ತರವನ್ನು ಹೆಚ್ಚು ನಂಬುತ್ತಿದ್ದಾರೆ ಎಂದು ವರದಿಯಾಗಿದೆ. ಚಾಟ್ಜಿಪಿಟಿಯ ಉತ್ತರವು ಕೇವಲ ಅಂಕಿಅಂಶಗಳ ಸತ್ಯವಾಗಿರುವುದರಿಂದ, ಈ ಪ್ರೋಗ್ರಾಂ ನಿಂದ ಉತ್ಪತ್ತಿಯಾಗುವ ಉತ್ತರವನ್ನು ಶಿಕ್ಷಕರ ಉತ್ತರಕ್ಕೆ ಯಾವುದೇ ರೀತಿಯಲ್ಲಿ ಹೊಂದಾಣಿಕೆ ಮಾಡಲು ಸಾಧ್ಯವಾಗುವುದಿಲ್ಲ.
ಏಕೆಂದರೆ ನಾವು ಸಾಮನ್ಯವಾಗಿ ವೈಜ್ಞಾನಿಕ ಎಂದು ಭಾವಿಸುವುದಕ್ಕಿಂತ ವಿಭಿನ್ನ ರೀತಿಯಲ್ಲಿ ಉತ್ತರವನ್ನು ನೀಡಲು ಈ ರೀತಿಯ ಕೃತಕ ಬುದ್ಧಿಮತೆಯ ಪ್ರೋಗ್ರಾಂಗಳನ್ನು ನಿರ್ಮಿಸಲಾಗಿದೆ. ಚಾಟ್ಜಿಪಿಟಿಯಲ್ಲಿ ಅದು ನೀಡುವ ಉತ್ತರಗಳನ್ನು ಯಾವ ಆಧಾರದ ಮೇಲೆ ಉತ್ತರಿಸುತ್ತಿದೆ ಎಂದು ಪರಿಶೀಲಿಸಲು ಸಾಧ್ಯವಿಲ್ಲ ಏಕೆಂದರೆ ಉತ್ತರದ ಮೂಲವು ಸಂಖ್ಯೆಶಾಸ್ತ್ರದ ಆಧಾರವಾಗಿರುತ್ತದೆ.
ಜ್ಞಾನ ಉತ್ಪಾದನೆ ಮತ್ತು ಪರಿಶೀಲನೆ : ಚಾಟ್ಜಿಪಿಟಿಯ ಪ್ರಕ್ರಿಯೆಗಳು ಅದರ ಸತ್ಯತೆ ಪರಿಶೀಲಿಸಲು ಯಾವುದೇ ಮಾರ್ಗವನ್ನು ನೀಡುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಶಿಕ್ಷಣ ತಜ್ಞರು ವೈಜ್ಞಾನಿಕ ಮತ್ತು ಪುರಾವೆ-ಆಧಾರಿತ ವಿಧಾನವನ್ನು ಹೊಂದಿರುವುದು ಅವರ ಕೆಲಸವನ್ನು ಮೌಲ್ಯೀಕರಿಸಲು ಸಹಾಯ ಮಾಡುತ್ತದೆ, ಫಲಿತಾಂಶಗಳು ನಮ್ಮ ಪೂರ್ವಕಲ್ಪಿತ ಕಲ್ಪನೆಗಳಿಗೆ ವಿರುದ್ಧವಾಗಿ ಹೋಗಬಹುದಾಗಿದೆ. ಚಾಟ್ಜಿಪಿಟಿಯಂತಹ ಎಐ ಪ್ರೋಗ್ರಾಂಗಳು ಶಿಕ್ಷಕರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸುತ್ತದೆ ಏಕೆಂದರೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಮತ್ತು ಎಐ (AI) ಪಠ್ಯದ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ.
ಮೊದಮೊದಲು ಚಾಟ್ಜಿಪಿಟಿ ಸ್ಪಷ್ಟವಾದ ಜ್ಞಾನವನ್ನು ಉಂಟು ಮಾಡಬಹುದು, ಆದರೆ ಅದರ ಉತ್ತರವನ್ನು ಸತ್ಯ ಮತ್ತು ವೈಜ್ಞಾನಿಕ ಜ್ಞಾನ ಎಂದು ತಪ್ಪಾಗಿ ಗ್ರಹಿಸಬಾರದು ಎಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಸಂಶೋಧನಾ ಲೇಖಕರಿಗೆ ಯಾವುದೇ ಕ್ರೆಡಿಟ್ ನೀಡದ ChatGPT ; ಸ್ಪ್ರಿಂಗರ್ ನೇಚರ್