ETV Bharat / science-and-technology

ವೈದ್ಯಕೀಯ ಕಲಿಕೆಗೂ ತಂತ್ರಜ್ಞಾನದ ಟಚ್​; ಡಿಜಿಟೈಸನ್​ ಮೂಲಕ ವೈದ್ಯಲೋಕದಲ್ಲೂ ಹಲವು ಬದಲಾವಣೆ

ಹೊಸ ತಲೆಮಾರಿನ ತಂತ್ರಜ್ಞಾನವಾದ ವರ್ಚುಯಲ್​ ರಿಯಾಲಿಟಿ, ಎಐ ಮತ್ತು ಎಂಎಲ್​ ಕೂಡ ಕಲಿಕೆಯ ಹೊಸ ವಿಧಾನವಾಗಿರಲಿದೆ.

ವೈದ್ಯಕೀಯ ಕಲಿಕೆಗೂ ತಂತ್ರಜ್ಞಾನದ ಟಚ್​; ಡಿಜಿಟೈಸನ್​ ಮೂಲಕ ವೈದ್ಯಲೋಕದಲ್ಲೂ ಹಲವು ಬದಲಾವಣೆ
technology touch for medical learning; Digitization has also brought many changes in the medical world
author img

By

Published : Dec 5, 2022, 11:34 AM IST

ನವದೆಹಲಿ: ಕೋವಿಡ್ 19 ಬಳಿಕ ವೈದ್ಯಕೀಯ ಕಾಲೇಜ್​ ಮತ್ತು ಅದೇ ರೀತಿಯ ಇತರ ಸಂಸ್ಥೆಗಳ ಕಲಿಕಾ ವಿಧಾನದಲ್ಲಿ ದೊಡ್ಡ ಬದಲಾವಣೆ ಆಗಿದೆ. ಹೊಸ ತಲೆಮಾರಿನ ತಂತ್ರಜ್ಞಾನಗಳಾದ ಕೃತಕ ಬುದ್ದಿಮತೆ (ಎಐ) ಮತ್ತು ಯಾಂತ್ರಿಕ ಕಲಿಕೆ (ಎಂಐ) ಮುಖಾಂತರ ರೋಗ ನಿಯಂತ್ರಣ ಪತ್ತೆ ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳ ಕಾಳಜಿ, ರಿಮೋಟ್​ ಪೇಶೆಂಟ್​ ಕೇರ್​ ಸೇರಿದಂತೆ ಆರೈಕೆಯಲ್ಲಿ ಹೊಸ ಮಟ್ಟ ತಲುಪಲಾಗಿದೆ.

ಸಂಪ್ರದಾಯಿಕ ಕಲಿಕಾ ವಿಧಾನ ಮುಂದಿನ ದಿನಗಳಲ್ಲಿ ಹಾಗೇ ಇರಲಿದೆ. ಹೊಸ ತಲೆಮಾರಿನ ತಂತ್ರಜ್ಞಾನವಾದ ವರ್ಚುಯಲ್​ ರಿಯಾಲಿಟಿ, ಎಐ ಮತ್ತು ಎಂಎಲ್​ ಕೂಡ ಕಲಿಕೆಯ ಹೊಸ ವಿಧಾನವಾಗಿರಲಿದೆ. ಭವಿಷ್ಯದ ಡಾಕ್ಟರ್​ ಮತ್ತು ಫಿಸಿಶಿಯನ್​ಗಳ ಕಲಿಕೆಗೆ ಮತ್ತು ತರಬೇತಿಗೆ ಹೊಸ ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ನೋಯ್ಡಾ ಅಂತಾರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್​ ಆಶುತೋಷ್​ ನಿರಂಜನ್​ ತಿಳಿಸಿದ್ದಾರೆ.

ಉದಾಹರಣಗೆ ಪಿಶಿಷಿಯನ್​ ಅವರಿಗೆ ಡಿಜಿಟಲ್​ ಡಾಟಾ ಸಂಗ್ರಹಿಸಿ ಮತ್ತು ರೋಗ ನಿಯಂತ್ರಣ ಪತ್ತೆ ಮತ್ತು ಮುನ್ಸೂಚನೆಗೆ ಎಐ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸುತ್ತದೆ. ಕಂಪ್ಯೂಟರ್​ ಆಧಾರಿತ ಸೂಚನಾ ವಿಧಾನ ಮೂಲಕ ಮೌಲ್ಯಮಾಪನ ಮತ್ತು ಕಲಿಕೆಗೆ ಇತರೆ ಹೊಸ ಟ್ರೆಂಡ್​ಗಳಿವೆ ಎಂಬುದನ್ನು ತಜ್ಞರು ನಂಬುತ್ತಾರೆ​. ವರ್ಚುಯಲ್​ ಪೇಶೆಂಟ್​, ಹ್ಯೂಮನ್​ ಪೇಶೆಂಟ್​ ಸಿಮ್ಯೂಲೇಷನ್​ ಮತ್ತು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ನಿರ್ಣಯಿಸಲು ವರ್ಚುವಲ್ ರಿಯಾಲಿಟಿ ಮುಂತಾದ ಇತರ ಹೊಸ ಪ್ರವೃತ್ತಿಗಳಿವೆ ಎಂದು ತಜ್ಞರು ನಂಬುತ್ತಾರೆ.

ಆರೋಗ್ಯ ಕಾಳಜಿಯಲ್ಲಿ ಹೊಸ ತಿರುವು: ಸಾಂಕ್ರಾಮಿಕತೆ ಭಾರತೀಯ ಆರೋಗ್ಯ ಕಾಳಜಿಯಲ್ಲಿ ಹೊಸ ತಿರುವು ನೀಡಿದೆ ಎಂಬುದನ್ನು ಸಾಬೀತು ಪಡಿಸಿದೆ. ಕಳೆದ ಶತಮಾನದಲ್ಲಿ ಹೆಲ್ತ್​ಕೇರ್​ನಲ್ಲಿ ಹೊಸ ಮಾಹಿತಿ ಮತ್ತು ಜ್ಞಾನವನ್ಜು ಸಂಪೂರ್ಣವಾಗಿ ಪಸರಿಸಲು 50 ವರ್ಷ ಬೇಕಾಯಿತು. ಆದರೆ, 2020ರಲ್ಲಿ, ಕೇವಲ 73 ದಿನದಲ್ಲಿ ಹೊಸ ಜ್ಞಾನವನ್ನು ಪಸರಿಸಲಾಯಿತು ಎಂದು ಮೆಡ್ಲರ್ನ್​ ಸಿಇಒ ದೀಪಕ್​ ಶರ್ಮಾ ತಿಳಿಸಿದ್ದಾರೆ.

ಈ ಮೊದಲು ಪ್ರಯೋಗಿಕ ತರಬೇತಿಯಲ್ಲಿ ಸಂಶೋಧನೆ ಆಧಾರಿತ ಜ್ಞಾನದ ಬಳಕೆ ಬಹಳ ಮಂದಗತಿಯಲ್ಲಿತ್ತು. ರೋಗ ನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಅನೇಕ ಪರೀಕ್ಷೆ ಮತ್ತು ಜ್ಞಾನವನ್ನು ವ್ಯಾಪಕವಾಗಿ ಕಾರ್ಯಗತಗೊಳಿಸುವ ಮೊದಲು ಕಠಿಣ ಪರೀಕ್ಷೆ ಮತ್ತು ಅನುಮೋದನೆ ನಡೆಸಬೇಕಿತ್ತು. ಎಲ್ಲವೂ ಸರಿ ಹೋದಲ್ಲಿ ಮಾತ್ರ ಬಳಕೆ ಮಾಡಲಾಗುತ್ತಿತ್ತು

ಸಾಂಕ್ರಾಮಿಕತೆ ಬಳಿಕ ಎಲ್ಲವೂ ಬದಲಾಗುತ್ತಿದೆ. ರೋಗಿಗಳಿಗೆ ಯಾವುದೇ ಅಪಾಯವಾಗದಂತೆ ಹೊಸ ಕೌಶಲ್ಯ ಮತ್ತು ತರಬೇತಿಯ ಅಳವಡಿಕೆಗೆ ಹೊಸ ಅವಕಾಶಗಳು ಬರುತ್ತಿವೆ. ಡಿಜಿಟೈಸೆಷನ್​ ಮೂಲಕ ಇಂದು ಹೆಲ್ತ್​ಕೇರ್​ನಲ್ಲಿ ಎಲ್ಲವೂ ಸಾಧ್ಯವಾಗುತ್ತಿದೆ.

ತರಬೇತಿ ಅಗತ್ಯತೆಗೆ ಹೊಸ ಆಯಾಮ: ಭಾರತವು ಆರೋಗ್ಯ ವೃತ್ತಿಪರರು ಮತ್ತು 53 ಸಂಬಂಧಿತ ವರ್ಗಗಳನ್ನು ಗುರುತಿಸಿದೆ. ಇದರ ಹೊರತಾಗಿ ಭಾರತ ಶಿಕ್ಷಣದ ಮತ್ತು ತರಬೇತಿ ಅಗತ್ಯತೆಗೆ ಹೊಸ ಆಯಾಮ ನೀಡಿದೆ. ಮಾನಸಿಕ ಆರೋಗ್ಯ ಸಮಾಲೋಚನೆ ಮತ್ತು ಥೆರಪಿಸ್ಟ್​​ ರೀತಿ ಅನೇಕ ವರ್ಗಗಳಿಗೆ ಮಹತ್ವ ನೀಡಲಾಗಿದೆ. ಇದರ ಹೊರತಾಗಿ ಸರ್ಕಾರದಂದ ಹೆಲ್ತ್‌ಕೇರ್ ಇನ್‌ಫರ್ಮ್ಯಾಟಿಕ್ಸ್, ಮಾಲಿಕ್ಯುಲರ್ ಜೆನೆಟಿಕ್ಸ್ ತಜ್ಞರ ರೀತಿ ಹೊಸ ವೃತ್ತಿಪರರನ್ನು ಗುರುತಿಸಲಾಗಿದೆ

ಟೆಲಿ ಮೆಡಿಸಿನ್​ ಮತ್ತು ಹೋಮ್​ ಹೆಲ್ತ್​​ಕೇರ್​ಗೆ ಬೇಡಿಕೆ ಕೂಡ ಹೆಚ್ಚುತ್ತಿದ್ದು, ಇದರ ಶುಲ್ಕವನ್ನು ಕಡಿಮೆ ಮಾಡಲಾಗಿದೆ. ನರ್ಸ್​ಗಳಿಗೆ ಸಮಗ್ರ ಕೌಶಲ್ಯದ ಉನ್ನತೀಕರಣದ ಕೋರ್ಸ್​ಗಳಿಗೆ ಬ್ರಿಟನ್​ನ ರಾಯಲ್​ ಕಾಲೇಜ್​ ಆಫ್​ ನರ್ಸಿಂಗ್​ನಲ್ಲಿ ವಾರ್ಷಿಕ 3000 ರೂ ಶುಲ್ಕ ವಿಧಿಸಲಾಗಿದೆ. ಇದರಲ್ಲಿ 60 ಅಗತ್ಯ ವಿಷಯಗಳನ್ನು ಕಲಿಸಲಾಗುವುದು.

ಅಮೆರಿಕದಲ್ಲಿ ಎಮರ್ಜೆನ್ಸಿ ನರ್ಸಿಂಗ್​ ಅಸೋಸಿಯನ್​ ಇದೇ ಕೋರ್ಸ್​ಗೆ ವಾರ್ಷಿಕ 2.500 ರಿಂದ 4000 ರೂ ಶುಲ್ಕ ನಿಗದಿ ಪಡಿಸಲಾಗಿದೆ . ಹೆಲ್ತ್​ಕೇರ್​ ವೃತ್ತಿಪರರು ಕೂಡ ತಮ್ಮ ಸಾಫ್ಟ್​ ಸ್ಕಿಲ್​ನ್ನು ಕೇವಲ 500 ರಿಂದ 4000 ರೂಗಳಲ್ಲಿ ಅಭಿವೃದ್ಧಿ ಪಡಿಸಿಕೊಳ್ಳಬಹುದಾಗಿದೆ.

ಬೇಸಿಕ್​ ಲೈಫ್​ ಸಪೋರ್ಟ್​ ಮತ್ತು ಅಡ್ವಾನ್ಸ್​ಡ್​​ ಕಾರ್ಡಿಯೊಸ್ಕವಲರ್​ ಲೈಫ್​ ಸಪೋರ್ಟ್​ನಂತ ಅತ್ಯಾಧುನಿಕ ಸಿಮ್ಯುಲೇಶನ್ ಉಪಕರಣಗಳನ್ನು ಬಳಸುವ ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​ಕೋರ್ಸ್‌ಗಳಿಗೆ ಸೇರಲು ಡಿಜಿಟೈಸೇಶನ್​ ಸಾಧ್ಯವಾಗಿಸಿದೆ. ಅಂತರಾಷ್ಟ್ರೀಯ ಮಾನ್ಯತೆ ಪಡದ ಈ ಕೋರ್ಸ್​ಗೆ 3000 ದಿಂದ 11000 ಆಗಲಿದೆ.

(ಈ ವರದಿಯನ್ನು ETV ಭಾರತ್ ಎಡಿಟ್ ಮಾಡಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್‌ನಿಂದ ತೆಗೆದುಕೊಳ್ಳಲಾಗಿದೆ )

ಇದನ್ನೂ ಓದಿ: ಬೆಳಕನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳುವ ಕೃತಕ ವ್ಯವಸ್ಥೆ ಸಂಶೋಧಕರಿಂದ ವಿನ್ಯಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.