ETV Bharat / science-and-technology

ಈ ರೀತಿ ಮಾಡುವುದು ಸರಿಯಲ್ಲ, ಆದರೆ...?: 12 ಸಾವಿರ ಉದ್ಯೋಗಿಗಳ ವಜಾ ಕುರಿತು ಪಿಚ್ಚೈ ಹೇಳಿದ್ದಿಷ್ಟು! - ಆಲ್ಫಾಬೆಟ್​ ಸಂಸ್ಥೆಯ ಸಿಇಒ ಸುಂದರ್​ ಪಿಚ್ಚೈ

ಸಂಸ್ಥೆಯಲ್ಲಿ ಶೇ 6ರಷ್ಟು ಉದ್ಯೋಗ ಕಡಿತವನ್ನು ಗೂಗಲ್​ ಮತ್ತು ಆಲ್ಫಾಬೆಟ್​ ಸಂಸ್ಥೆಯ ಸಿಇಒ ಸುಂದರ್​ ಪಿಚ್ಚೈ ಸಮರ್ಥಿಸಿಕೊಂಡಿದ್ದಾರೆ.

Sundar Pichai was asked about the company's decision to lay off 12 000 employees

author img

By ETV Bharat Karnataka Team

Published : Dec 16, 2023, 5:20 PM IST

ಹೈದರಾಬಾದ್​: ಕಳೆದ ವರ್ಷ 12 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿ ಗೂಗಲ್​​ ಸಂಸ್ಥೆ ಆದೇಶಿಸಿತು. ಇದು ಟೆಕ್​​ ಜಗತ್ತಿನಲ್ಲೇ ಸಾಕಷ್ಟು ತಲ್ಲಣ ಮೂಡಿಸಿದ್ದು, ಸುಳ್ಳಲ್ಲ. ಸಂಸ್ಥೆಯಲ್ಲಿ ಶೇ 6ರಷ್ಟು ಉದ್ಯೋಗ ಕಡಿತವನ್ನು ಗೂಗಲ್​ ಮತ್ತು ಆಲ್ಫಾಬೆಟ್​ ಸಂಸ್ಥೆಯ ಸಿಇಒ ಸುಂದರ್​ ಪಿಚ್ಚೈ ಸಮರ್ಥಿಸಿಕೊಂಡಿದ್ದಾರೆ. ಗುರುವಾರ ಗೂಗಲ್​ನಲ್ಲಿ ನಡೆದ ಆಂತರಿಕ ಸಭೆಯಲ್ಲಿ ಸಂಸ್ಥೆಯ ನಿಲುವಿಗೆ ಉದ್ಯೋಗಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಎಲ್ಲ ಘಟನೆ ನಡೆದು ಒಂದು ವರ್ಷದ ಬಳಿಕ ಈ ಕುರಿತು ಮಾತನಾಡಿರುವ ಸಿಇಒ ಸುಂದರ್​​ ಪಿಚ್ಚೈ, ಇದು ಸರಿಯಾದ ದಾರಿಯಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಭಾರಿ ಸಂಖ್ಯೆಯ ಉದ್ಯೋಗ ವಜಾದ ನಿರ್ಧಾರದಿಂದ ನಮ್ಮ ಬೆಳವಣಿಗೆ ಮತ್ತು ಪಿ ಅಂಡ್​​ ಎಲ್​ ಮೇಲೆ ಯಾವ ಪರಿಣಾಮ ಬೀರಿತು ಮತ್ತು ಇದು ನೈತಿಕವೇ? ಎಂದು ಉದ್ಯೋಗಿಗಳು ಪಿಚ್ಚೈಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ಸಂಸ್ಥೆಯಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಕಠಿಣ ನಿರ್ಧಾರ ತೆಗೆದುಕೊಂಡು ಇಲ್ಲಿಗೆ ಒಂದು ವರ್ಷ ಆಯಿತು.

ಈ ರೀತಿ ಕಷ್ಟ ಪರಿಸ್ಥಿತಿಯಲ್ಲಿ ಯಾವುದೇ ಸಂಸ್ಥೆ ಮುನ್ನಡೆಯುವುದು ಕಷ್ಟ. ಗೂಗಲ್​ನಲ್ಲಿ ಕಳೆದ 25 ವರ್ಷದಿಂದ ಈ ರೀತಿಯ ಕಠಿಣ ಸಂದರ್ಭ ಎದುರಾಗಿರಲಿಲ್ಲ. ನೈತಿಕವಾಗಿ ಇದು ದೊಡ್ಡ ಪರಿಣಾಮ ಹೊಂದಿದೆ. ಈ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಯಿತಾದರೂ ಅಗತ್ಯವಾಗಿತ್ತು. ಒಂದು ವೇಳೆ ಕಂಪನಿ ಕಳೆದ ವರ್ಷ ಉದ್ಯೋಗ ವಜಾದಂತಹ ಕಠಿಣ ನಿರ್ಧಾರ ತೆಗೆದುಕೊಳ್ಳದಿದ್ದರೆ, ಅದು ಮತ್ತಷ್ಟು ಕೆಟ್ಟ ಪರಿಸ್ಥಿತಿಗೆ ಕಾರಣವಾಗುತ್ತಿತ್ತು ಎಂದಿದ್ದಾರೆ.

ಇನ್ನು ಕಾರ್ಯದರ್ಶಿಗಳು, ಉದ್ಯೋಗ ವಜಾವನ್ನು ಹೇಗೆ ನಿರ್ವಹಿಸಬೇಕು ಎಂಬು ಕುರಿತು ಯಾವುದಾದರೂ ಆಲೋಚನೆ ಇತ್ತಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ಸಂಸ್ಥೆಯ ಇದನ್ನು ನಿರ್ವಹಣೆ ಮಾಡಲಿಲ್ಲ ಎಂದಿದ್ದಾರೆ. ಏಕಕಾಲದಲ್ಲಿ ಎಲ್ಲ ಉದ್ಯೋಗಳ ಕಾಳಜಿಯನ್ನು ಗುರುತಿಸಲಾಯಿತಾದರೂ, ಆ ಸಮಯದಲ್ಲಿ ಇದು ಉತ್ತಮ ಐಡಿಯಾ ಆಗಿರಲಿಲ್ಲ. ಇದು ಸರಿಯಾದ ವಿಧಾನ ಅಲ್ಲ ಎಂಬುದು ಸ್ಪಷ್ಟವಾಗಿತ್ತು. ನಾವು ಇದನ್ನೂ ಬೇರೆ ರೀತಿಯಾಗಿ ಖಂಡಿತ ಮಾಡಬಹುದಾಗಿತ್ತು ಎಂದು ನನಗೆ ಅನಿಸಿದೆ. ಉದ್ಯೋಗಿಯನ್ನು ಕೆಲಸದಿಂದ ಕಿತ್ತು ಹಾಕುವುದು ನಿಜಕ್ಕೂ ಕಷ್ಟಕರ ನಿರ್ಧಾರ ಎಂದಿದ್ದಾರೆ

ಈ ಭಾರೀ ಉದ್ಯೋಗ ವಜಾದ ಬಳಿಕವೂ ಗೂಗಲ್​ ಹಲವು ಸಣ್ಣ ಸಣ್ಣ ವಿಭಾಗದಲ್ಲಿ ಉದ್ಯೋಗ ವಜಾಕ್ಕೆ ಮುಂದಾಗಿದೆ. ನೇಮಕಾತಿ, ಗೂಗಲ್​ ನ್ಯೂಸ್​, ಗೂಗಲ್​ ಅಸಿಸ್ಟಂಟ್​ನಲ್ಲಿ ಈ ರೀತಿಯ ಕ್ರಮ ಕೈಗೊಂಡಿದೆ. (ಐಎಎನ್​ಎಸ್​)

ಇದನ್ನೂ ಓದಿ: 'ತೀರಾ ಗೊಂದಲದಲ್ಲಿದ್ದೆ, ಪೋನ್ ಕೂಡ ಸ್ಥಗಿತವಾಗಿತ್ತು' ವಜಾಗೊಂಡ ಕ್ಷಣದ ತುಮುಲ ಬಿಚ್ಚಿಟ್ಟ ಆಲ್ಟ್​ಮ್ಯಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.