ETV Bharat / science-and-technology

ಮತ್ತೆ ಲಾಂಚ್ ಆಗಲಿದೆ ಸ್ಪೇಸ್​ಎಕ್ಸ್​ ಸ್ಟಾರ್​ಶಿಪ್: ಈ ಬಾರಿ ವಿಫಲವಾಗಲ್ಲ ಎಂದ ಮಸ್ಕ್! - ಸ್ಟಾರ್​ಶಿಪ್ ಉಡಾವಣಾ ವಾಹನದ ಪರೀಕ್ಷೆ

ಎಲೋನ್ ಮಸ್ಕ್ ಒಡೆತನದ ಕಂಪನಿ ಸ್ಪೇಸ್​ ಎಕ್ಸ್​ ಮತ್ತೊಮ್ಮೆ ಸ್ಟಾರ್​ಶಿಪ್ ಉಡಾವಣಾ ವಾಹನದ ಪರೀಕ್ಷೆ ನಡೆಸಲಿದೆ. ಮುಂದಿನ ಆರರಿಂದ ಎಂಟು ವಾರಗಳಲ್ಲಿ ಈ ಪರೀಕ್ಷೆ ನಡೆಯಲಿದೆ.

ಮತ್ತೆ ಲಾಂಚ್ ಆಗಲಿದೆ ಸ್ಪೇಸ್​ಎಕ್ಸ್​ ಸ್ಟಾರ್​ಶಿಪ್: ಈ ಬಾರಿ ವಿಫಲವಾಗಲ್ಲ ಎಂದ ಮಸ್ಕ್!
SpaceX Starship to be relaunched in 6 to 8 weeks: Elon Musk
author img

By

Published : May 3, 2023, 2:10 PM IST

ಸ್ಯಾನ್ ಫ್ರಾನ್ಸಿಸ್ಕೋ : ಆರರಿಂದ ಎಂಟು ವಾರಗಳಲ್ಲಿ ಬೃಹತ್ ಸ್ಟಾರ್‌ಶಿಪ್ ವಾಹನದ ಕಕ್ಷೆಯ ಪರೀಕ್ಷಾ ಹಾರಾಟವನ್ನು ಸ್ಪೇಸ್‌ಎಕ್ಸ್ ಮತ್ತೊಮ್ಮೆ ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್ ಹೇಳಿದ್ದಾರೆ. ಏಪ್ರಿಲ್ 20 ರಂದು, ಮಾನವರನ್ನು ಚಂದ್ರ, ಮಂಗಳ ಮತ್ತು ಅದರಾಚೆಗೆ ಕೊಂಡೊಯ್ಯಲು ನಿರ್ಮಿಸಲಾದ ಸ್ಪೇಸ್‌ಎಕ್ಸ್‌ನ ಸಂಪೂರ್ಣ ಸಂಯೋಜಿತ ಸ್ಟಾರ್‌ಶಿಪ್ ಮತ್ತು ಸೂಪರ್ ಹೆವಿ ರಾಕೆಟ್‌ ತನ್ನ ಮೊದಲ ಹಾರಾಟ ಪರೀಕ್ಷೆ ಸಮಯದಲ್ಲಿ ಯಶಸ್ವಿಯಾಗಿ ಮೇಲಕ್ಕೆ ಹಾರಿತ್ತು. ಆದರೆ, ಮತ್ತಷ್ಟು ಮುಂದಕ್ಕೆ ಸಾಗಲು ವಿಫಲವಾದ ಅದು ಆಕಾಶದಲ್ಲಿ ಸ್ಫೋಟಗೊಂಡಿತ್ತು. ಆದರೆ, ಉಪಗ್ರಹವು ಸ್ಫೋಟಗೊಂಡಿರುವುದು ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ ಎಂದರ್ಥ ಎಂದು ಕಂಪನಿ ಹೇಳಿದೆ.

"ಮೂಲತಃ, ಫಲಿತಾಂಶ ಸರಿಸುಮಾರು ನಾನು ನಿರೀಕ್ಷಿಸಿದ ರೀತಿಯದ್ದಾಗಿದೆ ಮತ್ತು ಬಹುಶಃ ನನ್ನ ನಿರೀಕ್ಷೆಗಳನ್ನು ಸ್ವಲ್ಪಮಟ್ಟಿಗೆ ಮೀರಿದೆ" ಎಂದು ಮಸ್ಕ್ ಆವಾಗ ಟ್ವಿಟರ್​ನಲ್ಲಿ ಹೇಳಿದ್ದರು. ಇದರ ನಂತರ ಮುಂದಿನ ಆರರಿಂದ ಎಂಟು ವಾರಗಳಲ್ಲಿ ಲಾಂಚ್ ಪ್ಯಾಡ್​ ಮತ್ತು ಮತ್ತೊಂದು ಸ್ಟಾರ್​ಶಿಪ್ ನೌಕೆಯನ್ನು ತಯಾರಿಸುವಂತೆ ವಿಜ್ಞಾನಿಗಳಿಗೆ ಮಸ್ಕ್ ಸೂಚಿಸಿದ್ದಾರೆ. ಏತನ್ಮಧ್ಯೆ, ರಾಕೆಟ್ ಉಡಾವಣೆ ಬಗ್ಗೆ ಯುಎಸ್ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಪರಿಶೀಲನೆ ನಡೆಸುತ್ತಿದೆ ಎಂದು ವರದಿಯಾಗಿದೆ. ನೌಕೆ ಸ್ಫೋಟಗೊಂಡಾಗ ಅದರಿಂದ ಚದುರುವ ಅಪಾಯಕಾರಿ ಪಳೆಯುಳಿಕೆಗಳು ಭೂಮಿಯ ಮೇಲಿನ ಮಾನವರು ಮತ್ತು ಪ್ರಾಣಿಗಳ ಆವಾಸಸ್ಥಾನಗಳಿಗೆ ಅಪಾಯವನ್ನುಂಟು ಮಾಡಬಹುದು ಎಂಬ ಆತಂಕ ವ್ಯಕ್ತಪಡಿಸಲಾಗಿದೆ. ಇದರರ್ಥ ಸ್ಟಾರ್‌ಶಿಪ್‌ನ ಮುಂದಿನ ಉಡಾವಣೆಯ ಮೊದಲು, ರಾಕೆಟ್ ಸಾರ್ವಜನಿಕ ಸುರಕ್ಷತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಂಬಂಧಿಸಿದ ಇಲಾಖೆಯಿಂದ ಪ್ರಮಾಣ ಪತ್ರ ಪಡೆಯಬೇಕಿದೆ.

ಸ್ಪೇಸ್ ಎಕ್ಸ್​ ರಾಕೆಟ್​ ಲಾಂಚ್ ಮಾಡುವುದರಿಂದ ಉಂಟಾಗಬಹುದಾದ ಅಪಾಯಗಳನ್ನು ಗ್ರಹಿಸುವಲ್ಲಿ ಯುಎಸ್ ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಶನ್ ವಿಫಲವಾಗಿದೆ ಎಂದು ಆರೋಪಿಸಿ ಪರಿಸರ ಪ್ರೇಮಿ ಸಂಘಟನೆಗಳು ಅದರ ವಿರುದ್ಧ ದೂರು ದಾಖಲಿಸಿದ್ದಾರೆ. ಸ್ಪೇಸ್​ ಎಕ್ಸ್ ರಾಕೆಟ್​ ಅತ್ಯಮೂಲ್ಯವಾದ ಜೀವಿ ಪ್ರಬೇಧ ಮತ್ತು ಮಾನವ ಸಮುದಾಯಕ್ಕೆ ಭಾರಿ ಪ್ರಮಾಣದಲ್ಲಿ ಹಾನಿಯುಂಟು ಮಾಡಬಹುದು ಎಂದು ಇವು ಆರೋಪಿಸಿವೆ. ರಾಕೆಟ್​ ಅವಶೇಷಗಳು ವಾಸ್ತವದಲ್ಲಿ ಮರಳು ಮತ್ತು ಕಲ್ಲು ಮಾತ್ರ ಆಗಿರುತ್ತವೆ. ಆದ್ದರಿಂದ ಇದರಲ್ಲಿನ ಯಾವ ವಸ್ತುವೂ ವಿಷಕಾರಿಯಲ್ಲ ಎಂದು ಮಸ್ಕ್ ಟ್ವಿಟರ್​ನಲ್ಲಿ ಹೇಳಿದ್ದಾರೆ. ಏನೇ ಆದರೂ ಮತ್ತೊಮ್ಮೆ ರಾಕೆಟ್ ಸ್ಪೋಟಗೊಳ್ಳದಂತೆ ಕಂಪನಿ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಮಸ್ಕ್ ಹೇಳಿದ್ದಾರೆ.

ಸ್ಪೇಸ್‌ಎಕ್ಸ್ (ಸ್ಪೇಸ್ ಎಕ್ಸ್‌ಪ್ಲೋರೇಷನ್ ಟೆಕ್ನಾಲಜೀಸ್ ಕಾರ್ಪೊರೇಷನ್) ಇದು ಎಲೋನ್ ಮಸ್ಕ್ ಅವರಿಂದ 2002 ರಲ್ಲಿ ಸ್ಥಾಪಿಸಲಾದ ಬಾಹ್ಯಾಕಾಶ ಸಾರಿಗೆ ಮತ್ತು ಏರೋಸ್ಪೇಸ್ ಸಾಧನಗಳ ತಯಾರಕ ಕಂಪನಿಯಾಗಿದೆ. ಮಸ್ಕ್ ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾದ ಸಿಇಒ ಕೂಡ ಆಗಿದ್ದಾರೆ ಮತ್ತು ತೀರಾ ಇತ್ತೀಚೆಗೆ ಅವರು ಏಪ್ರಿಲ್ 2022 ರಲ್ಲಿ ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್ ಟ್ವಿಟರ್ ಅನ್ನು 44 ಬಿಲಿಯನ್‌ ಡಾಲರ್​ಗೆ ಖರೀದಿಸಲು ಒಪ್ಪಂದ ಮಾಡಿಕೊಂಡರು. 18 ತಿಂಗಳ ತಯಾರಿಯ ನಂತರ ಸ್ಪೇಸ್‌ಎಕ್ಸ್ 2006 ರಲ್ಲಿ ಡ್ರ್ಯಾಗನ್ ಹೆಸರಿನಲ್ಲಿ ಉಡಾವಣಾ ವಾಹನವನ್ನು ಅನಾವರಣಗೊಳಿಸಿತು. ಇದು ಮಾನವರನ್ನು ಮತ್ತು ಸರಕುಗಳನ್ನು ಬಾಹ್ಯಾಕಾಶ ಕಕ್ಷೆಗೆ ತೆಗೆದುಕೊಂಡು ಹಾರುವಂತೆ ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ : ಫೇಸ್​ಬುಕ್ ಹೊಸ ವೈಶಿಷ್ಟ್ಯ: ನಿಮಗಿಷ್ಟವಾದ ರೀಲ್ಸ್​ ಕಾಣುವಂತೆ ನೀವೇ ಸೆಟಿಂಗ್ ಮಾಡಿಕೊಳ್ಳಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.